Kumbha Kshetra Cleanliness : 1 ಸಾವಿರದ 500 ‘ಗಂಗಾ ಸೇವಾದೂತ’ರಿಂದ ಕುಂಭ ಕ್ಷೇತ್ರದ ಸ್ವಚ್ಛತೆ !

ಪ್ರಯಾಗರಾಜ್, ಜನವರಿ 11 (ಸುದ್ದಿ.) – ಮಹಾಕುಂಭಕ್ಕಾಗಿ 40 ಕೋಟಿಗೂ ಹೆಚ್ಚು ಸಾಧುಗಳು, ಸಂತರು ಮತ್ತು ಭಕ್ತರು ಆಗಮಿಸುವ ಅಂದಾಜು ಇದೆ. ಸಧ್ಯಕ್ಕೆ ಕೋಟ್ಯಂತರ ಭಕ್ತರು ಕುಂಭ ಕ್ಷೇತ್ರಕ್ಕೆ ಬಂದಿದ್ದಾರೆ. ಇದರಿಂದ ಊಟದ ಛತ್ರಗಳು, ಆಹಾರ ಪದಾರ್ಥಗಳ ಕವರ್‍‌ಗಳು ಇತ್ಯಾದಿ ತ್ಯಾಜ್ಯದ ಸಮಸ್ಯೆ ನಿರ್ಮಾಣವಾಗುತ್ತಿದೆ. ಇವುಗಳ ಸ್ವಚ್ಛತೆಗಾಗಿ ಪ್ರಯಾಗರಾಜ ಪ್ರಾಧಿಕಾರವು 1 ಸಾವಿರದ 500 ‘ಗಂಗಾ ಸೇವಾದೂತ’ರನ್ನು ನಿಯೋಜಿಸಿದೆ.

ಆಖಾಡಾಗಳ ಮಂಟಪಗಳು, ರಸ್ತೆಗಳು, ಗಂಗಾ ನದಿಯ ದಡಗಳು, ದೇವಸ್ಥಾನಗಳು ಮುಂತಾದ ಸ್ಥಳಗಳಲ್ಲಿ ದಿನವಿಡೀ ‘ಗಂಗಾ ಸೇವಾದೂತರು’ ಸ್ವಚ್ಛಗೊಳಿಸುತ್ತಿರುವುದನ್ನು ಕಂಡು ಬರುತ್ತದೆ. ಮಹಾಕುಂಭ ಮತ್ತು ಪ್ರಯಾಗರಾಜ್ ಪ್ರದೇಶಗಳಲ್ಲಿ ಸ್ವಚ್ಛತೆಯನ್ನು ಕಾಪಾಡಿಕೊಳ್ಳಲು, ಆಡಳಿತವು ಪ್ರಯಾಗರಾಜ್‌ನಲ್ಲಿ 400 ಶಾಲಾ ಶಿಕ್ಷಕರು ಮತ್ತು ಕಾಲೇಜುಗಳ ಪ್ರಾಂಶುಪಾಲರೊಂದಿಗೆ ಸಭೆ ನಡೆಸಿತು. ಇವುಗಳಲ್ಲಿ ವಿದ್ಯಾರ್ಥಿಗಳಿಗೆ ಸ್ವಚ್ಛತೆಯ ಮಹತ್ವದ ಬಗ್ಗೆ ತಿಳಿಸಲಾಗಿದೆ. ಇದರೊಂದಿಗೆ, ಸ್ವಚ್ಛತೆಯ ಅಡಿಯಲ್ಲಿ, ಇಡೀ ಕುಂಭ ಕ್ಷೇತ್ರದಾದ್ಯಂತ ಒಂದೂವರೆ ಲಕ್ಷ ಶೌಚಾಲಯಗಳು, 5 ಸಾವಿರ ಮೂತ್ರಾಲಯಗಳು ಮತ್ತು 350 ಸಾಮೂಹಿಕ ಶೌಚಾಲಯಗಳನ್ನು ನಿರ್ಮಿಸಲಾಗಿದೆ.