ಆಂಧ್ರಪ್ರದೇಶ: ಗುಂಟೂರಿನ ಕಲವರಿ ಟೆಂಪಲ್ ಚರ್ಚ ಅನ್ನು ಕೆಡವಲಾಗುವುದು!

  • ಚರ್ಚ್‌ನಲ್ಲಿ ಪ್ರತಿ ತಿಂಗಳು 3 ಸಾವಿರ ಹಿಂದೂಗಳನ್ನು ಮತಾಂತರಿಸಲಾಗುತ್ತಿತ್ತು

  • ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಗೆ ಚರ್ಚ್ ಬಗ್ಗೆ ದೂರುಗಳು ಬಂದನಂತರ ವಿಚಾರಣೆ ನಡೆಸಿ ಈ ಆದೇಶ ನೀಡಿತು

ಗುಂಟೂರು (ಆಂಧ್ರಪ್ರದೇಶ) – ಆಂಧ್ರಪ್ರದೇಶದ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯು ಗುಂಟೂರು ಜಿಲ್ಲೆಯ ಕಲವರಿ ಟೆಂಪಲ ಚರ್ಚ್ ಅನ್ನು ಕೆಡವಲು ಆದೇಶಿಸಿದೆ. ಈ ಚರ್ಚ್ ಪೆಡಾಕಾಕಣಿ ವಿಭಾಗದ ನಂಬೂರು ಗ್ರಾಮದಲ್ಲಿದೆ. ಈ ಚರ್ಚ್ ಅನ್ನು ಅಕ್ರಮವಾಗಿ ನಡೆಸಲಾಗುತ್ತಿತ್ತು. ಇಲ್ಲಿ ಹೆಚ್ಚಿನ ಸಂಖ್ಯೆಯ ಹಿಂದೂಗಳನ್ನು ಮತಾಂತರಿಸಲಾಗುತ್ತಿತ್ತು. ತನಿಖೆಯ ನಂತರ ಬೆಳಕಿಗೆ ಬಂದಿದೆ.

1. ನವೆಂಬರ್ 2024 ರಲ್ಲಿ ಈ ಚರ್ಚ್ ವಿರುದ್ಧ ಪ್ರಧಾನಮಂತ್ರಿ ಕಚೇರಿಯಲ್ಲಿ ದೂರು ದಾಖಲಾಗಿತ್ತು. ಪಂಚಾಯತ ರಾಜ, ಕಂದಾಯ, ಪೊಲೀಸ ಮತ್ತು ಧ್ವನಿ ಮಾಲಿನ್ಯ ನಿಯಂತ್ರಣ ಮಂಡಳಿಯಂತಹ ಸರಕಾರಿ ಇಲಾಖೆಗಳ ಕಾನೂನುಬದ್ಧ ಅನುಮತಿಯಿಲ್ಲದೆ ಚರ್ಚ್ ಕಾರ್ಯನಿರ್ವಹಿಸುತ್ತಿದೆ’, ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಚರ್ಚ್‌ನ ಪಾದ್ರಿ ಡಾ. ಸತೀಶ ಕುಮಾರ ತೆರಿಗೆ ಪಾವತಿಸದೆ ದೇಣಿಗೆ ಮೂಲಕ ಜನರನ್ನು ದೋಚಿದ್ದಾರೆ’, ಎಂಬ ಆರೋಪವನ್ನು ಮಾಡಲಾಗಿದೆ.

2. ದೂರಿನ ನಂತರ, ಚರ್ಚ್ ಕಾನೂನುಬಾಹಿರವಾಗಿ ಕಾರ್ಯನಿರ್ವಹಿಸುತ್ತಿದ್ದು, ಬಡ ಹಿಂದೂಗಳಿಗೆ ದಿನಸಿ ಸಾಮಾನುಗಳನ್ನು ಒದಗಿಸುವ ಮೂಲಕ ಮತ್ತು ಸುಳ್ಳು ಹೇಳಿಕೆಗಳನ್ನು ನೀಡುವ ಮೂಲಕ ಕ್ರೈಸ್ತ ಧರ್ಮಕ್ಕೆ ಮತಾಂತರಿಸಲಾಗುತ್ತಿತ್ತು ಎಂದು ತನಿಖೆಯಿಂದ ತಿಳಿದುಬಂದಿದೆ. ಅಕ್ಟೋಬರ್ 2024 ರಲ್ಲಿ, ಭಾಗ್ಯನಗರದ ಪಾದ್ರಿ ಡಾ. ಸತೀಶ ಕುಮಾರ ನೇತೃತ್ವದ ಕಲವರಿ ಚರ್ಚ್ ಪ್ರತಿ ತಿಂಗಳು ಸುಮಾರು 3 ಸಾವಿರ ಹಿಂದೂಗಳನ್ನು ಕ್ರೈಸ್ತ ಧರ್ಮಕ್ಕೆ ಮತಾಂತರಿಸುತ್ತಿದೆ ಎಂಬ ವರದಿಯಾಗಿತ್ತು.

3. ಪಾದ್ರಿ ಡಾ. ಸತೀಶ ಕುಮಾರ, ಇಲ್ಲಿಯವರೆಗೆ ಸುಮಾರು 3 ಲಕ್ಷ 50 ಸಾವಿರಕ್ಕೂ ಹೆಚ್ಚು ಹಿಂದೂಗಳನ್ನು ಕ್ರೈಸ್ತ ಧರ್ಮಕ್ಕೆ ಮತಾಂತರಿಸಿರುವುದಾಗಿ ಹೇಳಿಕೊಂಡಿದ್ದಾನೆ. ಮುಂದಿನ 10 ವರ್ಷಗಳಲ್ಲಿ ಸತೀಶ ಕುಮಾರ ಭಾರತದಾದ್ಯಂತ ಇಂತಹ 40 ಚರ್ಚ್‌ಗಳನ್ನು ಸ್ಥಾಪಿಸಲು ಯೋಜಿಸುತ್ತಿದ್ದನು ಎಂದು ಬಹಿರಂಗವಾಗಿದೆ.

4. ಅಕ್ಟೋಬರ್ 26, 2024 ರಂದು, ‘ಎಕ್ಸ್’ ನಲ್ಲಿ ‘ಸಿಬಿಎನ್ ನ್ಯೂಸ’(‘ದಿ ಕ್ರಿಶ್ಚಿಯನ್ ಬ್ರಾಡ್ಕಾಸ್ಟಿಂಗ್ ನೆಟ್ವರ್ಕ್’ನ) ಒಂದು ವೀಡಿಯೊವನ್ನು ಪ್ರಸಾರವಾಗಿತ್ತು. ಈ ವೀಡಿಯೊದಲ್ಲಿ ಕಲವರಿ ಟೆಂಪಲ್ ಚರ್ಚ್‌ನ ಮತಾಂತರ ಘಟನೆಗಳ ಬಗ್ಗೆ ಮಾಹಿತಿಯನ್ನು ನೀಡಲಾಗಿತ್ತು. ತದ ನಂತರ, ಅಕ್ಟೋಬರ್ 28 ರಂದು, ‘ಕಾನೂನು ಹಕ್ಕುಗಳ ರಕ್ಷಣಾ ವೇದಿಕೆ’ಯು ‘ಎಕ್ಸ್’ನಲ್ಲಿ, ಕಾಕಿನಾಡ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಕಂದಾಯ ಅಧಿಕಾರಿಗಳು ಕಲವರಿ ಟೆಂಪಲ್ ಚರ್ಚ್ ಅನ್ನು ವಶಪಡಿಸಿಕೊಂಡಿದ್ದಾರೆ. ಚರ್ಚ ವಿರುದ್ಧ ಭೂಕಬಳಿಕೆ, ಸಂಶಯಾಸ್ಪದ ಒಪ್ಪಂದಗಳ ಮೂಲಕ ಹೊಸ ಚರ್ಚ್‌ಗಳನ್ನು ನಿರ್ಮಿಸುವುದು, ಕಾನೂನು ಉಲ್ಲಂಘನೆ ಮಾಡುವುದು ಇತ್ಯಾದಿ ಹಲವು ಆರೋಪಗಳಿವೆ.

ಕಲವರಿ ಟೆಂಪಲ್ ಚರ್ಚ್ ಮಾಹಿತಿ

‘ಕಲವರಿ ಟೆಂಪಲ್ ಚರ್ಚ್’ ಅನ್ನು 2005 ರಲ್ಲಿ ಸತೀಶ ಕುಮಾರ ಸ್ಥಾಪಿಸಿದ್ದನು. ಕಲವರಿ ಟೆಂಪಲ್ ಚರ್ಚ್ ಏಷ್ಯಾದ ಅತಿದೊಡ್ಡ ಚರ್ಚ್‌ಗಳಲ್ಲಿ ಒಂದಾಗಿದೆ. ಇದರ ಸದಸ್ಯತ್ವ 4 ಲಕ್ಷಕ್ಕೂ ಹೆಚ್ಚು ಇದೆ. ಪ್ರತಿ ವಾರ 20 ಸಾವಿರಕ್ಕೂ ಹೆಚ್ಚು ಜನರು ಈ ಚರ್ಚ್‌ಗೆ ಹಾಜರಾಗುತ್ತಾರೆ. ಚರ್ಚ್ ಹೊರತುಪಡಿಸಿ, ಸತೀಶ ಕುಮಾರನ ಸಂಸ್ಥೆಯು ‘ಕಲವರಿ ಬೈಬಲ್ ಕಾಲೇಜು’, ‘ಕಲವರಿ ಆಸ್ಪತ್ರೆ’ ಮತ್ತು ‘ಕಲವರಿ ಶಾಲೆ’ಯನ್ನು ನಡೆಸುತ್ತಿದೆ. ಆಂಧ್ರಪ್ರದೇಶ ಮತ್ತು ಹೊರಗಿನ ರಾಜಕಾರಣಿಗಳು ಸೇರಿದಂತೆ ಪ್ರತಿಯೊಂದು ಕ್ಷೇತ್ರದಲ್ಲೂ ಪಾದ್ರಿ ಸತೀಶ ಕುಮಾರ ಹೆಚ್ಚಿನ ಪ್ರಭಾವ ಬೀರಿದ್ದಾನೆಂದು ನಂಬಲಾಗಿದೆ.

ಸತೀಶ ಕುಮಾರ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಕ್ರೈಸ್ತ ಸಮುದಾಯಗಳಲ್ಲಿಯೂ ಹೆಚ್ಚಿನ ಪ್ರಭಾವ ಬೀರಿದ್ದಾನೆ. ಅವನು ಆಗಾಗ್ಗೆ ಧರ್ಮಪ್ರಚಾರದ ಕೆಲಸಕ್ಕಾಗಿ ಅಮೇರಿಕ, ದಕ್ಷಿಣ ಆಫ್ರಿಕಾ ಮತ್ತು ಕೊರಿಯಾ ಸೇರಿದಂತೆ ವಿವಿಧ ದೇಶಗಳಿಗೆ ಪ್ರಯಾಣಿಸುತ್ತಿದ್ದನು. 2018 ರಲ್ಲಿ, ಆಗಿನ ಅಮೇರಿಕದ ಉಪಾಧ್ಯಕ್ಷ ಮೈಕ್ ಪೆನ್ಸ್ ಅವರು’X’ ನಲ್ಲಿ ಸತೀಶ ಕುಮಾರ ಅವರೊಂದಿಗಿನ ಭೇಟಿಯ ಫೋಟೋಗಳನ್ನು ಪ್ರಸಾರ ಮಾಡಿದ್ದರು. ಅವರು ಈ ಭೇಟಿಯನ್ನು ‘ಸ್ಫೂರ್ತಿದಾಯಕ’ ಎಂದು ಬಣ್ಣಿಸಿದ್ದರು.

 

ಸಂಪಾದಕೀಯ ನಿಲುವು

  • ಚರ್ಚ್ ಅನ್ನು ಕೆಡವುದಷ್ಟಕ್ಕೆ ಸೀಮಿತವಾಗಿರದೇ ಮತಾಂತರಗೊಳಿಸುವ ಸಂಬಂಧಿಸಿದ ಪಾದ್ರಿಗಳ ವಿರುದ್ಧವೂ ಕ್ರಮ ಕೈಗೊಳ್ಳಬೇಕು, ಇಲ್ಲದಿದ್ದರೆ ಮತ್ತೊಂದು ಚರ್ಚ್ ಅನ್ನು ನಿರ್ಮಿಸುವ ಮೂಲಕ ಮತಾಂತರದ ಕೆಲಸ ಮುಂದುವರಿಯುತ್ತದೆ !
  • ಭಾರತ ಜಾತ್ಯತೀತ ದೇಶವಾಗಿರುವಾಗ, ಈ ರೀತಿ ಬಹಿರಂಗವಾಗಿ ಚರ್ಚ್‌ಗಳಲ್ಲಿ ಹಿಂದೂಗಳನ್ನು ಮತಾಂತರಗೊಳಿಸಲಾಗುತ್ತದೆ ಈ ಕುರಿತು ಜಾತ್ಯತೀತರು ಏಕೆ ಬಾಯಿ ತೆರೆಯುವುದಿಲ್ಲ ? ಹಾಗೂ ಸರಕಾರ ಮತಾಂತರ ವಿರೋಧಿ ಕಾನೂನನ್ನು ಏಕೆ ಜಾರಿಗೆ ತರುವುದಿಲ್ಲ ?, ಎನ್ನುವ ಪ್ರಶ್ನೆಗಳು ಹಿಂದೂಗಳ ಮನಸ್ಸಿನಲ್ಲಿ ಉದ್ಭವಿಸುತ್ತವೆ !