Yogi Adityanath Appeal : ಮುಸ್ಲಿಮರು ಸನಾತನ ಧರ್ಮದ ಚಿಹ್ನೆಗಳನ್ನು ಶಾಂತಿಯುತವಾಗಿ ಹಿಂದೂಗಳಿಗೆ ಹಿಂದಿರುಗಿಸಿ ! –  ಯೋಗಿ ಆದಿತ್ಯನಾಥ್ 

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಮನವಿ

ಯೋಗಿ ಆದಿತ್ಯನಾಥ್

ಪ್ರಯಾಗರಾಜ್ (ಉತ್ತರ ಪ್ರದೇಶ) – ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಮುಸ್ಲಿಮರಿಗೆ, ಸನಾತನ ಧರ್ಮಕ್ಕೆ ಸಂಬಂಧಿಸಿದ ಚಿಹ್ನೆಗಳನ್ನು ಶಾಂತಿಯುತವಾಗಿ ಹಿಂದೂಗಳಿಗೆ ಹಿಂದಿರುಗಿಸಬೇಕು ಮತ್ತು ಈ ಬಗ್ಗೆ ಯಾವುದೇ ವಿವಾದ ಇರಬಾರದು ಎಂದು ಕರೆ ನೀಡಿದ್ದಾರೆ. ಅವರು ಇಲ್ಲಿ ‘ಆಜ್ ತಕ್’ ಸುದ್ದಿ ವಾಹಿನಿ ನಡೆಸಿದ ಸಂದರ್ಶನದಲ್ಲಿ ಮಾತನಾಡುತ್ತಿದ್ದರು.

ಯೋಗಿ ಆದಿತ್ಯನಾಥ್ ಮಂಡಿಸಿದ ಸೂತ್ರಗಳು

1. ಇಸ್ಲಾಂ ಬರುವ ಮೊದಲಿನಿಂದಲೂ ಸನಾತನ ಧರ್ಮ ಅಸ್ತಿತ್ವದಲ್ಲಿದೆ !

ಶ್ರೀ ಹರಿ ವಿಷ್ಣುವಿನ 10 ನೇ ಅವತಾರವು ಸಂಭಲ್‌ನಲ್ಲಿ ಜನಿಸಲಿದೆ. ಇದರ ಬಗ್ಗೆ ನಮ್ಮ ಪುರಾಣಗಳಲ್ಲಿ ಉಲ್ಲೇಖವಿದೆ. ಇತ್ತೀಚಿನ ದಿನಗಳಲ್ಲಿ ಸಂಭಲ್‌ನಲ್ಲಿ ಕಂಡುಬರುವ ಎಲ್ಲವೂ ಸನಾತನ ಧರ್ಮಕ್ಕೆ ಸಂಬಂಧಿಸಿದೆ ಮತ್ತು ಇದಕ್ಕೆ ಪುರಾವೆಗಳು ಸಿಗುತ್ತಿವೆ. ಭಾರತದಲ್ಲಿ ಬರೆಯಲ್ಪಟ್ಟ ಎಲ್ಲಾ ಪುರಾಣಗಳು 3 ಸಾವಿರದ 500 ರಿಂದ 5 ಸಾವಿರ ವರ್ಷಗಳ ಹಿಂದೆ ರಚಿತವಾಗಿವೆ. ಇದನ್ನು ಬರೆಯುವಾಗ, ಭೂಮಿಯಲ್ಲಿ ಇಸ್ಲಾಂ ಇರಲಿಲ್ಲ, ಸನಾತನ ಧರ್ಮ ಮಾತ್ರ ಅಸ್ತಿತ್ವದಲ್ಲಿತ್ತು. ಇಸ್ಲಾಂ ಇಲ್ಲದಿದ್ದಾಗ, ಜಾಮಾ ಮಸೀದಿ ಎಲ್ಲಿಂದ ಬಂತು ? ‘ಐನ್-ಎ-ಅಕ್ಬರಿ’ (16 ನೇ ಶತಮಾನದ ಅಕ್ಬರನ ಆಳ್ವಿಕೆಯ ವಿವರಗಳ ಪುಸ್ತಕ) ಇದರಲ್ಲಿ, 1526 ರಲ್ಲಿ ಸಂಭಲ್‌ನಲ್ಲಿ ಮತ್ತು 1528 ರಲ್ಲಿ ಅಯೋಧ್ಯೆಯಲ್ಲಿ ದೇವಾಲಯಗಳನ್ನು ಕೆಡವಿ, ಅಲ್ಲಿ ಕಟ್ಟಡಗಳನ್ನು ನಿರ್ಮಿಸಲಾಯಿತು ಎಂದು ಹೇಳುತ್ತದೆ. ಆದ್ದರಿಂದ, ಈ ಸ್ಥಳಗಳನ್ನು ಹಿಂದಿರುಗಿಸಬೇಕೆಂದು ಹಿಂದೂಗಳು ಒತ್ತಾಯಿಸಿದರೆ, ಅದನ್ನು ಸ್ವೀಕರಿಸಬೇಕು. ಅವರ ಧರ್ಮಗ್ರಂಥಗಳು ಹಾಗೆ ಹೇಳಿದರೆ, ಅವರು ತಮ್ಮ ತಪ್ಪನ್ನು ಒಪ್ಪಿಕೊಳ್ಳಬೇಕು. ಇಂತಹ ಪರಿಸ್ಥಿತಿಯಲ್ಲಿ, ಸನಾತನದ ಚಿಹ್ನೆಗಳನ್ನು ಅವರಿಗೆ (ಹಿಂದೂಗಳಿಗೆ) ಶಾಂತಿಯುತವಾಗಿ ಹಿಂದಿರುಗಿಸಬೇಕು. ಅಂತಹ ಚಿಹ್ನೆಗಳು ಮರಳುವುದರ ಬಗ್ಗೆ ಯಾವುದೇ ವಿವಾದ ಇರಬಾರದು ಎಂದು ಹೇಳಿದರು.

2. ವಿವಾದಾತ್ಮಕ ಕಟ್ಟಡಗಳನ್ನು ಮಸೀದಿಗಳೆಂದು ಕರೆಯುವ ಬದಲು ವಿವಾದಾತ್ಮಕ ರಚನೆಗಳೆಂದು ಕರೆಯಬೇಕು !

ವಿವಾದಾತ್ಮಕ ಕಟ್ಟಡಗಳನ್ನು ಮಸೀದಿಗಳೆಂದು ಕರೆಯಬಾರದು. ನಾವು ಇದರ ಬಗ್ಗೆ ಮಾತನಾಡುವುದನ್ನು ನಿಲ್ಲಿಸಿದ ದಿನ, ಜನರು ಅಲ್ಲಿಗೆ ಹೋಗುವುದನ್ನು ನಿಲ್ಲಿಸುತ್ತಾರೆ. ಯಾವುದೇ ಧರ್ಮಕ್ಕೆ ಘಾಸಿ ಮಾಡಿ ಮಸೀದಿಯಂತಹ ಕಟ್ಟಡದಲ್ಲಿ ನಡೆಸುವ ಪೂಜೆ ದೇವರಿಗೆ ಸ್ವೀಕಾರಾರ್ಹವಲ್ಲ ಎಂಬುದು ಇಸ್ಲಾಂನಲ್ಲಿಯೂ ಇದೆ. ಇಸ್ಲಾಂನಲ್ಲಿ, ಪೂಜೆಗೆ ಯಾವುದೇ ಕಟ್ಟಡದ ಅಗತ್ಯವಿಲ್ಲ. ಅದು ಸನಾತನದಲ್ಲಿದೆ. ಇದರ ಬಗ್ಗೆ ಯಾವುದೇ ಒತ್ತಾಯ ಇರಲು ಸಾಧ್ಯವಿಲ್ಲ.

3. ಈ ದೇಶವನ್ನು ಮುಸ್ಲಿಂ ಲೀಗ್‌ನ ಮನಸ್ಥಿತಿಯಿಂದ ನಡೆಸಲಾಗುವುದಿಲ್ಲ, ಬದಲಾಗಿ ಭಾರತೀಯ ಸಿದ್ಧಾಂತದಿಂದ ನಡೆಸಲಾಗುವುದು.

4. ಪ್ರಪಂಚದಾದ್ಯಂತದ ಕಿರುಕುಳಕ್ಕೊಳಗಾದ ಜನರಿಗೆ ಭಾರತ ಯಾವಾಗಲೂ ಆಶ್ರಯ ನೀಡಿದೆ.

5. ಹೊಸ ಭಾರತದ ಬಗ್ಗೆ ಯೋಚಿಸುವ ಸಮಯ ಬಂದಿದೆ.

6. ವಕ್ಫ್ ‘ಬೋರ್ಡ್’ ಅಲ್ಲ, ‘ಭೂ ಮಾಫಿಯಾ’ ಆಗಿದೆ.

ಸಂಪಾದಕೀಯ ನಿಲುವು

  • ಅಂತಹ ಚಿಹ್ನೆಗಳನ್ನು ಮಸೀದಿಗಳ ಬದಲಿಗೆ ವಿವಾದಾತ್ಮಕ ರಚನೆಗಳು ಎಂದು ಕರೆಯಬೇಕೆಂದು ಸಹ ಕರೆ ನೀಡಿದರು
  • ಮುಸ್ಲಿಮರು ಹಿಂದೂಗಳಿಂದ ವಶಪಡಿಸಿಕೊಂಡ ವಸ್ತುಗಳನ್ನು ಹಿಂದಿರುಗಿಸುತ್ತಿದ್ದರೆ, ಪ್ರಸ್ತುತ ಈ ರಿತಿಯ ಪರಿಸ್ಥಿತಿ ಉದ್ಭವಿಸುತ್ತಿರಲಿಲ್ಲ. ಈಗಲೂ ಸಹ, ಅಂತಹ ಕರೆಗಳಿಂದ ಮುಸ್ಲಿಮರು ಹಿಂದೂಗಳ ವಸ್ತುಗಳನ್ನು ಹಿಂದಿರುಗಿಸುವ ಸಾಧ್ಯತೆಯಿಲ್ಲ. ಆದ್ದರಿಂದ, ಹಿಂದೂಗಳು ಕಾನೂನು ಹೋರಾಟದ ಮೂಲಕ ಹಿಂದೂಗಳ ಆಸ್ತಿಗಳನ್ನು ಪಡೆಯಬೇಕಾಗುತ್ತದೆ, ಇದು ವಾಸ್ತವವಾಗಿದೆ !