ಚುರು (ರಾಜಸ್ಥಾನ) ಇಲ್ಲಿಯ `ರಾಮ ದರಬಾರ’ದ ಪ್ರತಿಮೆಯನ್ನು ಧ್ವಂಸ ಮಾಡಿದ್ದರಿಂದ ಹಿಂದೂಗಳ ಆಂದೋಲನ

ರಸ್ತೆ ಅಗಲೀಕರಣ ಪೂರ್ಣವಾದ ನಂತರ ಮತ್ತೆ ಪ್ರತಿಮೆ ಸ್ಥಾಪಿಸಲಾಗುವುದು ಸರಕಾರದಿಂದ ಆಶ್ವಾಸನೆ

ರಾಜಸ್ಥಾನದಲ್ಲಿ ಹಿಂದೂ ದ್ವೇಷಿ ಕಾಂಗ್ರೆಸ ಸರಕಾರ ಅಧಿಕಾರದಲ್ಲಿರುವುದರಿಂದ ಈ ರೀತಿಯ ಹಿಂದೂ ವಿರೋಧಿ ಘಟನೆಗಳು ನಡೆಯುತ್ತವೆ. ಸರಕಾರ ಈ ರೀತಿಯ ಧೈರ್ಯ ಬೇರೆ ಧರ್ಮದವರ ಸಂದರ್ಭದಲ್ಲಿ ತೋರಿಸುವವರೆ ?- ಸಂಪಾದಕರು 

`ರಾಮ ದರಬಾರನ ಪ್ರತಿಮೆಯನ್ನು ‘ಜೆಸಿಬಿ’ ಯಂತ್ರದ ಮೂಲಕ ಧ್ವಂಸ ಮಾಡುತ್ತಿರುವುದು

ಚುರು (ರಾಜಸ್ಥಾನ) – ರಸ್ತೆ ಅಗಲೀಕರಣ ಹೆಸರಿನಲ್ಲಿ ಇಲ್ಲಿಯ ಸಾಲಾಸರ ಮಾರ್ಗದಲ್ಲಿರುವ ಸುಜಾನಗಡ್‍ದ ಪ್ರವೇಶ ದ್ವಾರದಲ್ಲಿರುವ `ರಾಮ ದರಬಾರನ ಪ್ರತಿಮೆಯನ್ನು ಧ್ವಂಸ ಮಾಡಿದ್ದರಿಂದ ಅಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಯಿತು. ಭಗವಾನ್ ಶ್ರೀ ರಾಮ ಮತ್ತು ಇತರ ದೇವತೆಗಳ ಮೂರ್ತಿಗಳನ್ನು ಅಲ್ಲಿಂದ ಸ್ಥಳಾಂತರಿಸುವ ಬದಲು ಗುತ್ತಿಗೆದಾರನು ಅದನ್ನು ನೇರ `ಜೆಸಿಬಿ’ ಯಂತ್ರದ ಮೂಲಕ ಧ್ವಂಸ ಮಾಡಿರುವುದರಿಂದ ಹಿಂದೂ ಸಂಘಟನೆಗಳು ಅಲ್ಲಿ `ರಸ್ತೆತಡೆ’ ಅಂದೋಲನ ನಡೆಸಿ ಹನುಮಾನ್ ಚಾಲೀಸಾದ ಪಾರಾಯಣ ಮಾಡಿದರು. ಆ ಸಮಯದಲ್ಲಿ ಪೊಲೀಸ್ ಅಧಿಕಾರಿ ಮತ್ತು ಸರಕಾರಿ ಅಧಿಕಾರಿ ಇವರು ಆಂದೋಲನ ನಡೆಯುವ ಸ್ಥಳಕ್ಕೆ ಬಂದು ಆಂದೋಲನಕಾರರಲ್ಲಿ ಕ್ಷಮೆಯಾಚಿಸಿದರು, ಹಾಗೂ `ರಸ್ತೆ ಅಗಲೀಕರಣದ ಕೆಲಸ ಮುಗಿದ ನಂತರ ಮತ್ತೆ ಅಲ್ಲಿ ಪ್ರವೇಶದ್ವಾರ ನಿರ್ಮಿಸಿ ಮತ್ತೆ `ರಾಮ ದರಬಾರಿ’ನ ಪ್ರತಿಮೆಗಳನ್ನು ಸ್ಥಾಪಿಸಲಾಗುವುದು ಎಂದು ಆಶ್ವಾಸನೆ ನೀಡಿದರು; ಆದರೆ ಅವರು ಲಿಖಿತ ಸ್ವರೂಪದಲ್ಲಿ ಆಶ್ವಾಸನೆ ನೀಡಲು ನಿರಾಕರಿಸಿದರು. (ಒಂದುವೇಳೆ ಸರಕಾರ ನಿಜವಾಗಿಯೂ `ರಾಮ ದರಬಾರಿ’ನ ಪ್ರತಿಮೆ ಮತ್ತೆ ಸ್ಥಾಪಿಸುವುದಿದ್ದರೇ ಅವರು ಲಿಖಿತಸ್ವರೂಪದಲ್ಲಿ ಆಶ್ವಾಸನೆ ನೀಡಲು ಏನು ಅಡಚಣೆ ? ಇದರಿಂದ `ಸರಕಾರದ ಇದು ಕೇವಲ ಆಶ್ವಾಸನೆಯಾಗಿದ್ದು ಪ್ರತ್ಯಕ್ಷದಲ್ಲಿ ಅವರು `ರಾಮ ದರಬಾರಿ’ನ ಪ್ರತಿಮೆ ಸ್ಥಾಪಿಸುವುದಿಲ್ಲ’, ಎಂದು ಹಿಂದೂಗಳು ತಿಳಿದುಕೊಳ್ಳಬೇಕೆ ? – ಸಂಪಾದಕರು)