ಕರ್ನಾಟಕ ಸರಕಾರವೂ ಕೂಡ ಶಾಲೆಗಳಲ್ಲಿ ಶ್ರೀಮದ್ಭಗವದ್ಗೀತೆ ಕಲಿಸುವ ವಿಚಾರದಲ್ಲಿ !

ಶಿಕ್ಷಣ ತಜ್ಞರ ಜೊತೆಗೆ ಚರ್ಚಿಸಿ ನಿರ್ಣಯ ಕೈಗೊಳ್ಳುವರು !

ದೇಶದಲ್ಲಿನ ಭಾಜಪ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಮತ್ತು ಕೇಂದ್ರ ಸರಕಾರವು ತಮ್ಮ ವ್ಯಾಪ್ತಿಗೆ ಬರುವ ಶಾಲೆಗಳಲ್ಲಿ ಹಿಂದೂಗಳ ಧರ್ಮಗ್ರಂಥ ಕಲಿಸಲು ಪ್ರಾರಂಭಿಸಬೇಕೆಂದು ಧರ್ಮಾಭಿಮಾನಿ ಹಿಂದೂಗಳಿಗೆ ಅನಿಸುತ್ತದೆ !

ಬೆಂಗಳೂರು – ಗುಜರಾತ ಸರಕಾರ ೬ ನೇ ತರಗತಿಯಿಂದ ೧೨ ನೇ ತರಗತಿಯವರೆಗೆ ವಿದ್ಯಾರ್ಥಿಗಳಿಗೆ ಶ್ರೀಮದ್ಭಗವದ್ಗೀತೆ ಕಲಿಸುವ ನಿರ್ಣಯ ತೆಗೆದುಕೊಂಡು ನಂತರ ಈಗ ಭಾಜಪ ಸರಕಾರ ಇರುವ ಕರ್ನಾಟಕ ಸರಕಾರವೂ ಈ ರೀತಿಯ ನಿರ್ಣಯ ತೆಗೆದುಕೊಳ್ಳುವ ಬಗ್ಗೆ ವಿಚಾರ ಮಾಡುತ್ತಿದೆ.

(ಸೌಜನ್ಯ : ಇಂಡಿಯಾ ಟುಡೇ)

ರಾಜ್ಯದ ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಇವರು, ‘ಸಾಂಸ್ಕೃತಿಕ ಮೌಲ್ಯಗಳು ಕುಸಿಯುತ್ತಿರುವಾಗ ಅದನ್ನು ತಡೆಯಲು ಕರ್ನಾಟಕದ ಶಾಲೆಗಳಲ್ಲಿ ಶ್ರೀಮದ್ಭಗವದ್ಗೀತೆ ಕಲಿಸುವ ಯೋಚನೆ ಸರಕಾರ ಮಾಡುತ್ತಿದೆ. ಶಾಲೆಯ ಪಠ್ಯಕ್ರಮದಲ್ಲಿ ನೀತಿಶಾಸ್ತ್ರ ಕಲಿಸಬೇಕು, ಹೀಗೆ ಅನೇಕ ನಾಗರಿಕರ ಬೇಡಿಕೆಯಾಗಿದೆ. ಶಾಲೆಗಳಲ್ಲಿ ಈ ಮೊದಲು ನೀತಿಶಾಸ್ತ್ರ ೧ ಗಂಟೆ ತೆಗೆದುಕೊಳ್ಳಲಾಗುತ್ತಿತ್ತು. ಅದು ವಾರದಲ್ಲಿ ಒಂದು ಗಂಟೆ ಇರುತ್ತಿತ್ತು. ಅದರಲ್ಲಿ ರಾಮಾಯಣ, ಮಹಾಭಾರತ ಇದರ ಕಥೆಗಳ ಆಧಾರಿತ ಪಾಠಗಳನ್ನು ನೀಡುತ್ತಿದ್ದರು. ಈಗ ಆ ವಿಷಯವಾಗಿ ನಿರ್ಣಯ ತೆಗೆದುಕೊಳ್ಳುವ ಮುನ್ನ ಶಿಕ್ಷಣ ತಜ್ಞರ ಜೊತೆಗೆ ಚರ್ಚಿಸಲಾಗುವುದು ಹಾಗೂ ನೀತಿಶಾಸ್ತ್ರ ಕಲಿಸಬೇಕೊ ಅಥವಾ ಬೇಡವೋ, ಇದರ ನಿರ್ಣಯವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇವರ ಜೊತೆ ಚರ್ಚಿಸಿದ ನಂತರ ತೆಗೆದುಕೊಳ್ಳಲಾಗುವುದು.’ ಎಂದು ಹೇಳಿದರು.