‘ಕರ್ನಾಟಕ ಉಚ್ಚ ನ್ಯಾಯಾಲಯದ ಆದೇಶದ ಪಾಲನೆ ಮಾಡಲು ನಿರಾಕರಿಸಿರುವ ಇಂತಹ ವಿದ್ಯಾರ್ಥಿನಿಯರು ಶಿಕ್ಷಣ ಪಡೆದು ಏನು ಸಾಧಿಸುವರು ?’, ಎಂಬ ಪ್ರಶ್ನೆ ಉದ್ಭವಿಸುತ್ತದೆ ! ಇಂತಹವರಿಗೆ ಮಹಾವಿದ್ಯಾಲಯವೇ ಮಹಾವಿದ್ಯಾಲಯದಿಂದ ಹೊರಗಟ್ಟುವುದೇ ಸೂಕ್ತ, ಎಂದು ಜನರಿಗೆ ಅನಿಸುತ್ತದೆ ! – ಸಂಪಾದಕರು
ಬೆಂಗಳೂರು – ಕರ್ನಾಟಕ ಉಚ್ಚ ನ್ಯಾಯಾಲಯ ರಾಜ್ಯ ಸರಕಾರದ ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ಧರಿಸಿ ಬರಲು ನಿಷೇಧ ಹೇರಿದ್ದ ನಿರ್ಧಾರ ಎತ್ತಿ ಹಿಡಿದಿದೆ. ಹೀಗೆ ಇರುವಾಗಲೂ ರಾಜ್ಯದಲ್ಲಿ ಮತಾಂಧ ವಿದ್ಯಾರ್ಥಿನಿಯರು ಅದನ್ನು ಪಾಲಿಸದಿರುವ ಘಟನೆಗಳು ಬೆಳಕಿಗೆ ಬರುತ್ತಿವೆ. ರಾಜ್ಯದ ಉಪ್ಪಿನಂಗಡಿಯಲ್ಲಿ ೨೩೧ ಮತಾಂಧ ವಿದ್ಯಾರ್ಥಿನಿಯರು ಹಿಜಾಬ್ ಧರಿಸದೆ ಪರೀಕ್ಷೆ ಬರೆಯಲು ನಿರಾಕರಿಸಿದ್ದಾರೆ.
Karnataka: 231 Muslim students including boys refuse to appear for exams after college authorities ask girls to remove hijabhttps://t.co/3ruW2IWEUn
— OpIndia.com (@OpIndia_com) March 19, 2022
ಇಲ್ಲಿಯ ಸರಕಾರಿ ಪಿಯು ಮಹಾವಿದ್ಯಾಲಯದ ಆವರಣದಲ್ಲಿ ಈ ವಿದ್ಯಾರ್ಥಿನಿಯರು ಆಂದೋಲನ ನಡೆಸಿದರು. ಈ ಸಂದರ್ಭದಲ್ಲಿ ಮಹಾವಿದ್ಯಾಲಯ ಆಡಳಿತ, ‘ಕರ್ನಾಟಕ ಉಚ್ಚ ನ್ಯಾಯಾಲಯದ ಆದೇಶ ಪಾಲಿಸುವುದು ಅನಿವಾರ್ಯವಿದೆ.’ ಎಂದು ಹೇಳಿದರು.
(ಸೌಜನ್ಯ : Tv9 Kannada)