ಗುಜರಾತಿನಲ್ಲಿ ಶಾಲೆಯ ಪಠ್ಯಕ್ರಮದಲ್ಲಿ ಶ್ರೀಮದ್ಭಗವದ್ಗೀತೆಯ ಸಮಾವೇಶ !

ಗುಜರಾತಿನಲ್ಲಿರುವ ಭಾಜಪ ಸರಕಾರದ ನಿರ್ಣಯ !

ಗುಜರಾತಿನ ಭಾಜಪ ಸರಕಾರದ ಅಭಿನಂದನಾರ್ಹ ನಿರ್ಣಯ ! ಇಂತಹ ನಿರ್ಣಯವನ್ನು ಈಗ ಭಾಜಪದ ಇತರ ರಾಜ್ಯಗಳಲ್ಲಿನ ಸರಕಾರಗಳು, ಹಾಗೆಯೇ ಕೇಂದ್ರ ಸರಕಾರವೂ ತೆಗೆದುಕೊಳ್ಳಬೇಕು, ಎಂದು ಹಿಂದೂಗಳಿಗೆ ಅನಿಸುತ್ತದೆ ! ಇಂತಹ ಪಠ್ಯಕ್ರಮದಲ್ಲಿ ಶ್ರೀಮದ್ಭಗವದ್ಗೀತೆಯೊಂದಿಗೆ ವೇದ, ಉಪನಿಷತ್ತುಗಳು ಮತ್ತು ಇತರ ಧರ್ಮಗ್ರಂಥಗಳನ್ನೂ ಸೇರಿಸಬೇಕು ಎಂದು ಧರ್ಮಾಭಿಮಾನಿ ಹಿಂದೂಗಳಿಗೆ ಅನಿಸುತ್ತದೆ ! – ಸಂಪಾದಕರು

ಈಗ ಪುರೋ(ಅಧೋ)ಗಾಮಿಗಳು, ಕಾಂಗ್ರೆಸ್ಸಿನವರು ಶಿಕ್ಷಣದ ಕೇಸರೀಕರಣವಾಗುತ್ತಿದೆ ಎಂದು ಕಿರುಚಾಡಿದರೆ ಆಶ್ಚರ್ಯವೆನಿಸಬಾರದು ! – ಸಂಪಾದಕರು

ಕರ್ಣಾವತಿ (ಗುಜರಾತ) – ಗುಜರಾತ ಸರಕಾರವು ಮುಂದಿನ ಶೈಕ್ಷಣಿಕ ವರ್ಷದಿಂದ ರಾಜ್ಯದಲ್ಲಿನ ಶಾಲೆಯ ವಿದ್ಯಾರ್ಥಿಗಳಿಗೆ ಶ್ರೀಮದ್ಭಗವದ್ಗೀತೆಯನ್ನು ಕಲಿಸಲು ನಿರ್ಧರಿಸಿದೆ. ಗುಜರಾತ ರಾಜ್ಯ ಸಂಸತ್ತಿನ ಅಧಿವೇಶನದಲ್ಲಿ ಶಿಕ್ಷಣ ಮಂತ್ರಿಗಳಾದ ಜಿತೂ ವಾಘಾನಿಯವರು ಈ ಬಗ್ಗೆ ಘೋಷಿಸಿದರು.

ವಾಘಾನಿಯವರು ‘ಕೇಂದ್ರ ಸರಕಾರವು ಹೊಸದಾಗಿ ಘೋಷಿಸಿರುವ ರಾಷ್ಟ್ರೀಯ ಶಿಕ್ಷಣ ಧೋರಣೆಯ ಅನುಸಾರವೇ ಈ ಬದಲಾವಣೆಯನ್ನು ಮಾಡಲಾಗಿದೆ. ಭಾರತೀಯ ಸಂಸ್ಕೃತಿ ಮತ್ತು ಜ್ಞಾನ ವ್ಯವಸ್ಥೆಯನ್ನು ಶಾಲೆಯ ಶಿಕ್ಷಣ ವ್ಯವಸ್ಥೆಯಲ್ಲಿ ಸೇರಿಸಲಾಗುತ್ತಿದ್ದು ೨೦೨೨-೨೩ರ ಶೈಕ್ಷಣಿಕ ವಷರ್ದಿಂದ ಈ ಬದಲಾವಣೆಯಾಗಲಿದೆ.
ಶ್ರೀಮದ್ಭಗವದ್ಗೀತೆಯಲ್ಲಿನ ಮೌಲ್ಯಗಳು ಹಾಗೂ ತತ್ತ್ವಗಳನ್ನು ಪ್ರಾಥಮಿಕ ಮಟ್ಟದಲ್ಲಿ ೬ನೇ ತರಗತಿಯಿಂದ ೧೨ನೇ ತರಗತಿಯ ವರೆಗೆ ಕಲಿಸಲಾಗುವುದು. ಗೀತೆಯಲ್ಲಿನ ಶ್ಲೋಕ ‘ಸರ್ವಾಂಗಿ ಶಿಕ್ಷಣ’ ಪುಸ್ತಕದಲ್ಲಿ ಸೇರಿಸಲಾಗುವುದು. ೯ನೇ ತರಗತಿಯಿಂದ ೧೨ ತರಗತಿಯ ವಿದ್ಯಾರ್ಥಿಗಳು ಪ್ರಾಥಮಿಕ ಭಾಷೆಯಲ್ಲಿ ಸಂಗತಿಗಳ ರೂಪದಲ್ಲಿ ಗೀತೆಯನ್ನು ಕಲಿಯಲಿದ್ದಾರೆ. ಇದರೊಂದಿಗೇ ಶಾಲೆಗಳಲ್ಲಿ ಪ್ರಾರ್ಥನೆ, ಶ್ಲೋಕಪಠಣ, ನಾಟಕ, ಪ್ರಶ್ನಮಂಜೂಷ, ಚಿತ್ರಕಲೆ ಮತ್ತು ಭಾಷಣ ಸ್ಪರ್ಧೆಗಳ ಮಾಧ್ಯಮದಿಂದಲೂ ಶ್ರೀಮದ್ಭಗವದ್ಗೀತೆಯ ಶಿಕ್ಷಣವನ್ನು ನೀಡಲಾಗುವುದು’ ಎಂದು ಹೇಳಿದ್ದಾರೆ.