ಆಪತ್ಕಾಲ ಮತ್ತು ಸನಾತನ ಧರ್ಮದ ಪುನರ್ಸ್ಥಾಪನೆಯ ಬಗ್ಗೆ ವಿವಿಧ ಸಂತರು ಮತ್ತು ಭವಿಷ್ಯಕಾರರು ನುಡಿದ ಭವಿಷ್ಯವಾಣಿಗಳು !

ಕಲಿಯುಗಾಂತರ್ಗತ ಕಲಿಯುಗವು ಕೊನೆಗೊಳ್ಳಲಿದ್ದು ಈಗ ಕಲಿಯುಗಾಂತರ್ಗತ ಸತ್ಯಯುಗ ಬರಲಿದೆ. ಅಧರ್ಮದ ಪರಾಕಾಷ್ಠೆಯನ್ನು ತಲುಪಿದ ಮನುಷ್ಯನು ತನ್ನ ವಿನಾಶದ ಮಾರ್ಗವನ್ನು ತಾನೇ ನಿರ್ಮಿಸಿದ್ದಾನೆ. ಅಧರ್ಮ ನಾಶವಾಗಲು ಯಾವುದಾದರೂ ಮಹಾಭಾರತ ಘಟಿಸಲೇಬೇಕಾಗುತ್ತದೆ. ಪರಿವರ್ತನೆಯಾಗುವ ಮೊದಲು ಸಂಧಿಕಾಲ ಬರುತ್ತದೆ ಮತ್ತು ಈ ಸಂಧಿಕಾಲದಲ್ಲಿ ಈಶ್ವರನು ಅವತಾರ ತಾಳಿ ಪಾಪ ಮತ್ತು ಅಧರ್ಮವನ್ನು ನಾಶ ಮಾಡುತ್ತಾನೆ. ಮುಂಬರುವ ಭೀಕರ ಕಾಲ ಮತ್ತು ಅಧರ್ಮ ನಾಶವಾದ ನಂತರ ಆಗುವ ಸನಾತನ ಧರ್ಮದ ಪುನರ್‌ಸ್ಥಾಪನೆಯ ಬಗ್ಗೆ ವಿವಿಧ ಸಂತರು ಮತ್ತು ಭವಿಷ್ಯಕಾರರು ಮಾಡಿದ ಭವಿಷ್ಯವಾಣಿಗಳನ್ನು ಇಲ್ಲಿ ನೀಡುತ್ತಿದ್ದೇವೆ.

೧. ಓಡಿಶಾದ ಸಂತರಾದ ಅಚ್ಯುತಾನಂದ ಇವರು ಸನಾತನ ಧರ್ಮದ ಪುನರ್ಸ್ಥಾಪನೆಯ ಬಗ್ಗೆ ಭವಿಷ್ಯವಾಣಿಯನ್ನು ಬರೆದಿಡುವುದು

‘೪೦೦ ವರ್ಷಗಳ ಹಿಂದೆ ಓಡಿಶಾದಲ್ಲಿ ಸಂತ ಅಚ್ಯುತಾನಂದರು ಭವಿಷ್ಯ ಮಾಲಿಕೆಗಳ ರಚನೆಯನ್ನು ಮಾಡಿದ್ದಾರೆ. ಅವರನ್ನು ಭಗವಾನ ಶ್ರೀಕೃಷ್ಣನ ಪರಮಭಕ್ತ ಸುದಾಮಾರವರ ಅವತಾರವೆಂದು ತಿಳಿಯಲಾಗುತ್ತದೆ. ಸಂತ ಅಚ್ಯುತಾನಂದರು ತಮ್ಮ ಭವಿಷ್ಯ ಮಾಲಿಕೆಯಲ್ಲಿ ಕಲಿಯುಗವು ಕೊನೆಗೊಳ್ಳುವ ಭವಿಷ್ಯವಾಣಿಯನ್ನು ಮಾಡಿದ್ದಾರೆ. ಇದರಲ್ಲಿ ಅವರು ಈಶ್ವರ ಪ್ರಕಟನಾಗುವ ಮೊದಲು ಭಾರತದ ಕೊನೆಯ ಪ್ರಧಾನಮಂತ್ರಿಗಳ ಬಗ್ಗೆ ಹೇಳಿದ್ದಾರೆ. ಅವರು ಹೇಳಿದ ಪ್ರಧಾನಮಂತ್ರಿಗಳ ಗುಣಗಳು ಸದ್ಯದ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಹೋಲುತ್ತವೆ. ಅರ್ಥಾತ ಮೋದಿಯವರು ಪ್ರಜಾಪ್ರಭುತ್ವಪ್ರಧಾನ ಭಾರತದ ಕೊನೆಯ ಪ್ರಧಾನಮಂತ್ರಿಗಳಾಗುವರು. ಅನಂತರ ಈಶ್ವರನ ಪ್ರಕಟೀಕರಣ ಆರಂಭವಾಗುವುದು. ಸಂಪೂರ್ಣ ಜಗತ್ತಿನಲ್ಲಿ ಸನಾತನ ಧರ್ಮದ ಪುನರ್ಸ್ಥಾಪನೆಯಾಗುವುದು. ನಾವು ಅತ್ಯಂತ ಭಾಗ್ಯಶಾಲಿಗಳಾಗಿದ್ದೇವೆ, ಏಕೆಂದರೆ ಈ ಕಾಲದಲ್ಲಿ ನಮ್ಮ ಜನ್ಮವಾಗಿದೆ. ನಮಗೆ ಆ ಸಾಕ್ಷಾತ್ ಸತ್ಪುರುಷನ (ಈಶ್ವರನ) ದರ್ಶನವೂ ಆಗಬಹುದು.

೨. ಪದ್ಮಪುರಾಣದಲ್ಲಿ ಅಧರ್ಮದ ನಾಶವನ್ನು ಮಾಡಿ ಧರ್ಮದ ಸ್ಥಾಪನೆಯನ್ನು ಮಾಡುವ ಸತ್ಪುರುಷನ ಬಗ್ಗೆ ಭವಿಷ್ಯವಾಣಿ ಇದೆ

ಪದ್ಮಪುರಾಣದಲ್ಲಿನ ೬ ನೇ ಖಂಡದಲ್ಲಿ ೭೧ ನೇ ಪ್ರಕರಣದಲ್ಲಿ ಶ್ಲೋಕ ಕ್ರಮಾಂಕ ೨೭೯ ರಿಂದ ೨೮೨ ರಲ್ಲಿ, ‘ಓರ್ವ ಸತ್ಪುರುಷರು ಬರುವರು, ಅವರು ಅಧರ್ಮದ ನಾಶವನ್ನು ಮಾಡುವರು. ಅವರು ಪೃಥ್ವಿಯ ಮೇಲಿನ ದುಃಸ್ಥಿತಿಯನ್ನು ಸುಧಾರಿಸುವರು ಮತ್ತು ಧರ್ಮಸ್ಥಾಪನೆಯನ್ನು ಮಾಡುವರು. ಅವರು ಸಂಪೂರ್ಣ ಜಗತ್ತಿನ ಏಕೈಕ ಆಡಳಿತಗಾರರಾಗಿರುವರು, ಅವರ ಮೇಲೆ ಯಾರ ನಿಯಂತ್ರಣವೂ ಇರಲಾರದು, ಅಂದರೆ ಅವರು ಎಲ್ಲರಿಗಿಂತ ಶ್ರೇಷ್ಠವಾಗಿರುವರು. ಅವರು ಸಂಪೂರ್ಣ ಜಗತ್ತಿನಲ್ಲಿ ಧರ್ಮದ ವಿಜಯದ ಧ್ವಜವನ್ನು ಹಾರಿಸುವರು.’ ಎಂದು ಭವಿಷ್ಯವಾಣಿ ಇದೆ.

೩. ೪೦೦ ವರ್ಷಗಳ ಹಿಂದೆ ಫ್ರೆಂಚ್ ಭವಿಷ್ಯಕಾರ ನಾಸ್ಟ್ರಾಡಾಮಸ್ ಇವರು ಮುಂಬರುವ ಭೀಕರ ಕಾಲದ ಭವಿಷ್ಯವಾಣಿಯನ್ನು ಮಾಡಿದ್ದಾರೆ

ಫ್ರೆಂಚ್ ಭವಿಷ್ಯಕಾರ ಮೈಕಲ್ ದ ನಾಸ್ಟ್ರಾಡಾಮಸ್ ಇವರ ಭವಿಷ್ಯವಾಣಿಯ ಮೇಲೆ ಜಗತ್ತಿನಲ್ಲಿನ ಎಲ್ಲ ಜನರ ವಿಶ್ವಾಸವಿದೆ; ಏಕೆಂದರೆ ಅವರ ಭವಿಷ್ಯವಾಣಿಗಳು ಯಾವಾಗಲೂ ಸತ್ಯ ಸಿದ್ಧವಾಗಿವೆ. ಅವರು ‘೨೦೨೦ ನೇ ಇಸವಿಯು ಅತ್ಯಂತ ಹಿಂಸಕ ವರ್ಷವಾಗಿರಲಿದೆ, ಆಗ ಜಗತ್ತಿನ ದೊಡ್ಡ ದೊಡ್ಡ ದೇಶಗಳಲ್ಲಿ ಗೃಹಯುದ್ಧದ ಪರಿಸ್ಥಿತಿ ಇರುವುದು. ೨೦೨೦ ನೇ ಇಸವಿಯಲ್ಲಿಯೇ ಶತಮಾನದ ಎಲ್ಲಕ್ಕಿಂತ ದೊಡ್ಡ ಆರ್ಥಿಕ ಸಂಕಟವೂ ಬರುವುದು. ಇದೇ ಕಾಲದಲ್ಲಿ ಜನರು ಅತ್ಯಂತ ಜಾಗೃತರಾಗುವರು ಮತ್ತು ಅವರು ಅಧ್ಯಾತ್ಮದ ಕಡೆಗೆ ಹೊರಳುವರು’, ಎಂಬ ಭವಿಷ್ಯವಾಣಿಯನ್ನು ಮಾಡಿದ್ದಾರೆ.  ನಾಸ್ಟ್ರಾಡಾಮಸ್ ಇವರ ಭವಿಷ್ಯವಾಣಿಗಳನ್ನು ಅವರ ‘ಸೆಂನ್ಚುರಿಸ್’ ಹೆಸರಿನ ಪುಸ್ತಕದಲ್ಲಿ ಪ್ರಕಟಿಸಲಾಗಿದೆ. ಅವರ ಭವಿಷ್ಯವಾಣಿಯಲ್ಲಿ ಮುಂದೆ ಹೀಗೂ ಹೇಳಲಾಗಿದೆ. ‘ಈ ಜಗತ್ತನ್ನು ರಕ್ಷಿಸುವ ತಾರಣಹಾರನು ಜನ್ಮಕ್ಕೆ ಬರುವನು. ಅವನು ಯಾವ ದೇಶದಲ್ಲಿ ಜನ್ಮಕ್ಕೆ ಬರುವನೋ, ಆ ದೇಶದ ಹೆಸರು ಒಂದು ಸಮುದ್ರದ ಹೆಸರಿಗೆ ಸಂಬಂಧಿಸಿರುವುದು.’ ಸಂಪೂರ್ಣ ಜಗತ್ತಿನಲ್ಲಿ ಕೇವಲ ಭಾರತ ಮಾತ್ರ ಪ್ರಾಚೀನ ಕಾಲದಿಂದಲೂ ಹಿಂದ್ ಮಹಾಸಾಗರಕ್ಕೆ ಸಂಬಂಧಿಸಿದೆ’ ಇದು ಎಲ್ಲರಿಗೂ ಗೊತ್ತೇಯಿದೆ. ನಾಸ್ಟ್ರಾಡಾಮಸ್ ಮುಂದೆ ಹೇಳುತ್ತಾರೆ, ‘ಯಾವಾಗ ಯಾವಾಗ ನಾನು ಆ ತಾರಣಹಾರನನ್ನು (ರಕ್ಷಕನನ್ನು) ನೋಡುತ್ತೇನೆಯೋ, ಆಗ ನನ್ನ ತಲೆಯು ಅವನ ಚರಣಗಳಲ್ಲಿ ಬಾಗುತ್ತದೆ. ಅವನು ಜಗತ್ತಿಗೆ ಈ ಮೊದಲು ಎಂದೂ ಸಿಗದ ಜ್ಞಾನವನ್ನು ನೀಡುವನು. ತಮ್ಮನ್ನು ಜ್ಞಾನಿ ಮತ್ತು ವಿದ್ವಾಂಸರೆಂದು ತಿಳಿದುಕೊಳ್ಳುವವರು ಅವನೆದುರು ನತಮಸ್ತಕರಾಗುವರು.’ (ಆಧಾರ : ‘ಹಿಂದಿ ಸಾಗರ’ ಯೂ ಟ್ಯೂಬ್ ವಾಹಿನಿ)ಮಥುರಾದಲ್ಲಿನ ಸಂತರಾದ ತುಲಸಿದಾಸರು ಭವಿಷ್ಯವಾಣಿಯನ್ನು ಮಾಡಿ ಭೀಕರ ಆಪತ್ಕಾಲದ ಬಗ್ಗೆ ಜನರನ್ನು ಜಾಗೃತಗೊಳಿಸುವುದು ಮತ್ತು ಓರ್ವ ಶುಭ್ರವಸ್ತ್ರಗಳನ್ನು ಧರಿಸಿದ ವ್ಯಕ್ತಿಯೇ ಈ ಯುಗ ಪರಿವರ್ತನೆಗೆ ನಿಮಿತ್ತನಾಗಲಿರುವನು ಎಂದು ಹೇಳುವುದು !

ಮಥುರಾದ ಸಂತರಾದ ತುಲಸಿದಾಸ ಇವರು ೧೯೭೧ ರಿಂದ ಮುಂದಿನ ಅನೇಕ ವರ್ಷಗಳವರೆಗೆ ಅವರ ‘ಶಾಕಾಹಾರಿ’ ಎಂಬ ವರ್ತಮಾನಪತ್ರಿಕೆಯಲ್ಲಿ ಮುಂಬರುವ ಕಾಲದ ಬಗ್ಗೆ ಭವಿಷ್ಯವಾಣಿಯನ್ನು ಬರೆದು ಜನರನ್ನು ಜಾಗೃತ ಮಾಡಿದರು.

ಅವರು, ‘ಸತ್ಯಯುಗವು ಒಂದು ದಿನದಲ್ಲಿ ಬರುವುದಿಲ್ಲ. ಯುಗ ಪರಿವರ್ತನೆಯು ಒಂದು ಬಹಳ ದೊಡ್ಡ ಸಂಕ್ರಮಣಕಾಲವಾಗಿರುತ್ತದೆ. ಯಾವಾಗ ಒಂದು ಯುಗವು ಮುಗಿದು ಇನ್ನೊಂದು ಯುಗವು ಬರುತ್ತದೆಯೋ, ಆಗ ಈ ಎರಡೂ ಯುಗಗಳಲ್ಲಿ ಸಂಘರ್ಷವಾಗಿ ವಿನಾಶವಾಗುತ್ತದೆ. ಯುಗ ಪರಿವರ್ತನೆಯ ಸಮಯದಲ್ಲಿ ಎಲ್ಲ ಕಡೆಗೆ ಹಾಹಾಕಾರ ಏಳುವುದು. ಜನರು ಕೀಟ, ಇರುವೆಗಳಂತೆ ಸಾಯುವರು. ಎಲ್ಲಕಡೆಗೆ ಮೃತದೇಹಗಳ ರಾಶಿ ಬಿದ್ದಿರುವುದು ಮತ್ತು ಅವುಗಳನ್ನು ಎತ್ತುವವರು ಯಾರೂ ಇರಲಾರರು. ತಿನ್ನಲು ಆಹಾರದ ಒಂದು ಕಣವೂ ಸಿಗಲಾರದು. ಅಣ್ಣತಮ್ಮಂದಿರು ಪರಸ್ಪರರ ಶತ್ರುಗಳಾಗುವರು. ಕುಟುಂಬಗಳು ಪರಸ್ಪರರಲ್ಲಿ ಜಗಳಾವಾಗುವುವು. ಜಾತಿಜಾತಿಗಳಲ್ಲಿ ಜಗಳಗಳಾಗುವವು. ಸಮಾಜದಲ್ಲಿ ಭೀಕರ ಯುದ್ಧಗಳಾಗುವವು. ಅನೇಕ ಚಿಕ್ಕ-ದೊಡ್ಡ ದೇಶಗಳು ಜಗತ್ತಿನ ನಕಾಶೆಯಿಂದ ಇಲ್ಲವಾಗುವವು. ಇಲ್ಲಿಯವರೆಗೆ ನಾವು ನೆರೆ, ಬರಗಾಲ, ಹಸಿವೆಯಿಂದ ಸಾಯುವುದು, ಸಾಂಕ್ರಾಮಿಕ ರೋಗಗಳನ್ನು ಮತ್ತು ಅರಾಜಕತೆಯನ್ನು ನೋಡಿದ್ದೇವೆ; ಆದರೆ ಅದಕ್ಕಿಂತಲೂ ಹೆಚ್ಚು ಭಯಾನಕ ಸ್ಥಿತಿಯು ಮುಂದೆ ಬರಲಿದೆ. ಮುಂದಿನ ಕಾಲದಲ್ಲಿ ಎಂತಹ ರೋಗಗಳು ಬರುವವು ಎಂದರೆ ಆಧುನಿಕ ವೈದ್ಯರಿಗೆ (ಡಾಕ್ಟರರಿಗೆ) ಅವುಗಳ ಹೆಸರೂ ಗೊತ್ತಿರಲಾರದು. ದೇಶ-ವಿದೇಶಗಳಲ್ಲಿನ ಸರಕಾರಗಳು ಬದಲಾಗುವವು. ಚಿಕ್ಕ ಚಿಕ್ಕ ರಾಷ್ಟ್ರಗಳು ಭಾರತದಲ್ಲಿ ವಿಲೀನಗೊಳ್ಳುವವು. ದೇಶದಲ್ಲಿ ನೈಸರ್ಗಿಕ ಆಪತ್ತುಗಳಿಂದ ದೊಡ್ಡ ಪ್ರಮಾಣದಲ್ಲಿ ಮನುಷ್ಯಹಾನಿಯಾಗುವುದು. ಜಾಗತಿಕ ಯುದ್ಧವಾಗುವುದು. ವಿಷಾಣು ಬಾಂಬ್‌ಗಳನ್ನು ಪ್ರಯೋಗಿಸಲಾಗುವುದು.

ನಿಮಗೇನು ಸತ್ಯಯುಗವು ಹಾಗೆಯೇ ಶಾಂತವಾಗಿ ಬರುವುದು ಎಂದು ಅನಿಸುತ್ತದೆಯೇ ? ಈ ಭಯಾನಕ ಘಟನೆಗಳ ನಂತರ ಯಾವ ಒಂದು ಮುಷ್ಠಿಯಷ್ಟು ಜನರು ಉಳಿಯುವರೋ, ಅವರು ಸತ್ಯಯುಗದ ಹೊಸ ಸೂರ್ಯನು ಉದಯಿಸುವುದನ್ನು ನೋಡುವರು. ಓರ್ವ ಶುಭ್ರವಸ್ತ್ರಗಳನ್ನು ಧರಿಸುವ ವ್ಯಕ್ತಿಯು ಈ ಯುಗ ಪರಿವರ್ತನೆಗೆ ಕಾರಣನಾಗುವನು. ನೀವು ಆದಷ್ಟು ಬೇಗನೆ ಆ ಆಧ್ಯಾತ್ಮಿಕ ಶಕ್ತಿಯೊಂದಿಗೆ ಸೇರಿಕೊಂಡರೆ ಮಾತ್ರ ನಿಮ್ಮ ರಕ್ಷಣೆಯಾಗುವುದು.