ರಷ್ಯಾ ಶೀಘ್ರದಲ್ಲೇ `ನಾಟೋ’ದ ಸದಸ್ಯ ದೇಶಗಳ ಮೇಲೆ ಸಹ ದಾಳಿ ನಡೆಸುವರು ! – ಉಕ್ರೇನ್‍ನ ಎಚ್ಚರಿಕೆ

ಉಕ್ರೇನ್ ಅಧ್ಯಕ್ಷ ವ್ಲೊದಿಮಿರ್ ಝೆಲೆಂಕ್ಸಿ

ಕಿವ (ಉಕ್ರೇನ್) – ಮಾರ್ಚ್ 13 ರಂದು ರಷ್ಯಾನಿಂದ ಪೋಲೆಂಡ್ ಗಡಿ ಹತ್ತಿರದ ಉಕ್ರೇನ್ ಸೈನ್ಯ ತರಬೇತಿ ಕೇಂದ್ರದ ಮೇಲೆ ದಾಳಿ ನಡೆಸಿತು. ಕ್ರೂಜ್ ಕ್ಷಿಪಣಿಯ ಮೂಲಕ ಮಾಡಿದ ದಾಳಿಯಲ್ಲಿ 35 ಜನರು ಸಾವನ್ನಪ್ಪಿದ್ದರು ಹಾಗೂ 134 ಜನರು ಗಾಯಗೊಂಡರು. ಪೋಲ್ಯಾಂಡ್ `ನಾಟೋ’ದ(ನಾರ್ಥ ಅಟ್ಲಾಂಟಿಕ್ ಟ್ರೀಟಿ ಆರ್ಗನೈಸೇಶನ್’ನ) ಸದಸ್ಯ ದೇಶವಾಗಿದ್ದು ಆ ದೇಶದ ಗಡಿಯ ಬಳಿ ಇರುವ ಪ್ರಶಿಕ್ಷಣ ನೆಲೆಯು ಪಾಶ್ಚಿಮಾತ್ಯ ದೇಶಗಳಿಂದ ಉಕ್ರೇನಿಗೆ ಸಹಾಯ ಒದಗಿಸುವುದರ ಪ್ರಮುಖ ಕೇಂದ್ರವಾಗಿದೆ. ಆದ್ದರಿಂದಲೇ ರಷ್ಯಾವು ಈ ನೆಲೆಯ ಮೇಲೆ ಆಕ್ರಮಣ ನಡೆಸಿದೆ ಎಂದು ಹೇಳಲಾಗುತ್ತಿದೆ. ಈ ಆಕ್ರಮಣದ ನಂತರ ಉಕ್ರೇನ್ ಅಧ್ಯಕ್ಷ ವ್ಲೊದಿಮಿರ್ ಝೆಲೆಂಕ್ಸಿ ಅವರು `ನಾಟೋ’ ದೇಶಗಳ ಮೇಲೆ `ರಷ್ಯಾ ಶೀಘ್ರದಲ್ಲೇ ದಾಳಿ ನಡೆಸಬಹುದು’, ಎಂದು ಎಚ್ಚರಿಕೆ ನೀಡಿದೆ.

ಈ ಸಮಯದಲ್ಲಿ ಝೆಲೆಂಕ್ಸಿ ಇವರು ಮತ್ತೊಮ್ಮೆ ‘ನಾಟೋ’ ರಷ್ಯಾಗಾಗಿ `ನೋ ಫೈ ಝೋನ್’ (ನಿರ್ಬಂಧಿತ ವಾಯು ಕ್ಷೇತ್ರ) ಘೋಷಿಸಲು ಪುನರುಚ್ಚರಿಸಿದೆ. ಉಕ್ರೇನಿನ ಬೇಡಿಕೆ ಈ ಮೊದಲು `ನಾಟೋ’ ತಳ್ಳಿಹಾಕಿತ್ತು. ಈ ನಿರ್ಬಂಧ ಹೇರದಿದ್ದರಿಂದ ರಷ್ಯಾ ಪೋಲ್ಯಾಂಡ್ ಗಡಿಭಾಗದಲ್ಲಿ ದಾಳಿ ನಡೆಸಿರುವ ದಾವೆ ಝೆಲೆಂಕ್ಸಿ ಇವರು ಮಾಡಿದ್ದಾರೆ.