‘ಕಾಶ್ಮೀರದಲ್ಲಿ ೩೯೯ ಹಿಂದೂಗಳ, ಆದರೆ ೧೫ ಸಾವಿರ ಮುಸಲ್ಮಾನರ ಹತ್ಯೆಯಾಗಿದೆ !

‘ದ ಕಶ್ಮೀರ ಫಾಯಿಲ್ಸ್‌’ ಚಲನಚಿತ್ರದ ಮೇಲೆ ಕೇರಳದ ಕಾಂಗ್ರೆಸ್ಸಿನ ಹಿಂದೂದ್ವೇಷಿ ಟ್ವೀಟ್‌

ವಿರೋಧದ ನಂತರ ಟ್ವೀಟ್‌ನ್ನು ತೆಗೆಯಲಾಯಿತು !

ಜಿಹಾದಿ ಭಯೋತ್ಪಾದಕರು ಸಾವಿರಾರು ಹಿಂದೂಗಳನ್ನು ಅತ್ಯಂತ ಕ್ರೂರವಾಗಿ ಹತ್ಯೆ ಮಾಡಿದರು, ಅಸಂಖ್ಯ ಮಹಿಳೆಯರ ಮೇಲೆ ಬಲಾತ್ಕಾರ ಮಾಡಿದರು, ನಾಲ್ಕೂವರೆ ಲಕ್ಷ ಹಿಂದೂಗಳನ್ನು ಕಾಶ್ಮೀರದಿಂದ ಓಡಿಸಿದರು, ಆದರೂ ಕಾಂಗ್ರೆಸ್‌ ಈ ಬಗ್ಗೆ ಚಕಾರವೆತ್ತುತ್ತಿಲ್ಲ, ಎಂಬುದನ್ನು ಗಮನದಲ್ಲಿಡಿ ! ಬದಲಾಗಿ ‘ಕಾಶ್ಮೀರದಲ್ಲಿ ಕಾಶ್ಮೀರಿ ಹಿಂದೂಗಳಿಗಿಂತಲೂ ಮುಸಲ್ಮಾನರ ಹತ್ಯೆಯು ಹೆಚ್ಚಿನ ಪ್ರಮಾಣದಲ್ಲಿ ಆಗಿದೆ, ಎಂದು ಹೇಳಿ ಹಿಂದೂಗಳ ಗಾಯದ ಮೇಲೆ ಉಪ್ಪನ್ನು ಸವರುತ್ತಿದೆ ! ಇದು ಕಾಂಗ್ರೆಸ್ಸಿನ ವಿಪರೀತವಾದ ಹಿಂದೂ ದ್ವೇಷ ಹಾಗೂ ಮುಸಲ್ಮಾನರ ಓಲೈಕೆಯಾಗಿದೆ !- ಸಂಪಾದಕರು 

ಇಂತಹ ಕಾಂಗ್ರೆಸ್ ಇಷ್ಟು ವರ್ಷಗಳ ವರೆಗೆ ಕಾಶ್ಮೀರಿ ಹಿಂದೂಗಳಿಗೆ ನ್ಯಾಯ ಕೊಡಿಸದಿರುವಲ್ಲಿ ವಿಶೇಷವೇನಿದೆ ?- ಸಂಪಾದಕರು 

ತಿರುವನಂಥಪುರಮ್‌ (ಕೇರಳ) – ಕಾಶ್ಮೀರಿ ಹಿಂದೂಗಳನ್ನು ಗುರಿಯಾಗಿಸಿದ್ದವರು ಭಯೋತ್ಪಾದಕರಾಗಿದ್ದರು. ೧೯೯೦ ರಿಂದ ೨೦೦೭ರ ವರೆಗಿನ ೧೭ ವರ್ಷದ ಸಮಯದಲ್ಲಿ ಭಯೋತ್ಪಾದಕ ಆಕ್ರಮಣದಲ್ಲಿ ೩೯೯ ಕಾಶ್ಮೀರಿ ಹಿಂದೂಗಳ, ಆದರೆ ೧೫ ಸಾವಿರ ಮುಸಲ್ಮಾನರ ಹತ್ಯೆ ಮಾಡಲಾಗಿದೆ, ಎಂಬ ಹಿಂದೂದ್ವೇಷಿ ಟ್ವೀಟ್‌ನ್ನು ಕೇರಳದಲ್ಲಿನ ಕಾಂಗ್ರೆಸ್‌ ತನ್ನ ಅಧಿಕೃತ ಟ್ವಿಟ್ಟರ್‌ ಖಾತೆಯಿಂದ ಮಾಡಿದೆ.

ಈ ಟ್ವೀಟ್‌ನಲ್ಲಿ ಕಾಂಗ್ರೆಸ್‌ ಮುಂದುವರಿದು ಹೀಗೆ ಹೇಳಿದೆ,

೧. ಆಗಿನ ರಾಜ್ಯಪಾಲರಾದ ಜಗಮೋಹನರವರ ಆದೇಶದ ಅನುಸಾರ ಆ ಸಮಯದಲ್ಲಿ ಕಾಶ್ಮೀರದ ಕಣಿವೆಯಿಂದ ಕಾಶ್ಮೀರಿ ಹಿಂದೂಗಳು ಪಲಾಯನ ಮಾಡಿದ್ದರು. ಜಗಮೋಹನರವರು ರಾಷ್ಟ್ರೀಯ ಸ್ವಯಂಸೇವಕ ಸಂಘದ ವಿಚಾರಸರಣಿಯವರಾಗಿದ್ದರು.

೨. ಕಾಶ್ಮೀರಿ ಹಿಂದೂಗಳ ಪಲಾಯನ ಭಾಜಪದ ವಿ.ಪಿ. ಸಿಂಹರವರ ಸರಕಾರದ ಸಮಯದಲ್ಲಿ ಆಗಿದೆ. ವಿ.ಪಿ. ಸಿಂಹ ಸರಕಾರವು ಡಿಸೆಂಬರ್‌ ೧೯೮೯ರಲ್ಲಿ ಅಧಿಕಾರದಲ್ಲಿತ್ತು. ಕಾಶ್ಮೀರಿ ಹಿಂದೂಗಳ ಪಲಾಯನವು ಇದರ ಒಂದು ತಿಂಗಳ ನಂತರ ಆರಂಭವಾಯಿತು. ಭಾಜಪವು ಈ ವಿಷಯದಲ್ಲಿ ಏನೂ ಮಾಡಿಲ್ಲ. ವಿ.ಪಿ ಸಿಂಹರವರ ಸರಕಾರಕ್ಕೆ ಬಿಜೆಪಿಯ ಬೆಂಬಲವು ನವೆಂಬರ್‌ ೧೯೯೦ರ ವರೆಗೆ ಇತ್ತು.

೩. ಕಾಂಗ್ರೆಸ್‌ ಸಂಪಾದಿಸಿದ ಸಂಯುಕ್ತ ಪುರೋಗಾಮಿ ಮೈತ್ರಿ ಸರಕಾರವು ಜಮ್ಮುವಿನಲ್ಲಿ ಕಾಶ್ಮೀರಿ ಹಿಂದೂಗಳಿಗಾಗಿ ೫ ಸಾವಿರದ ೨೪೨ ಮನೆಗಳನ್ನು ಕಟ್ಟಿತ್ತು. ಅದರೊಂದಿಗೆ ಅಲ್ಲಿನ ಹಿಂದೂ ಕುಟುಂಬಗಳಿಗೆ ೫ ಲಕ್ಷ ರೂಪಾಯಿಗಳ ಆರ್ಥಿಕ ಸಹಾಯ ಮಾಡಿತ್ತು. ಕುಟುಂಬದಲ್ಲಿನ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನೂ ನೀಡಿತ್ತು, ರೈತರಿಗಾಗಿ ಕಲ್ಯಾಣಕಾರಿ ಯೋಜನೆಗಳನ್ನು ಹಮ್ಮಿಕೊಂಡಿತ್ತು.

೧೯೮೮ರಲ್ಲಿ ರಾಜೀವ ಗಾಂಧಿಯವರಿಗೆ ಭಯೋತ್ಪಾದನೆಯ ಬಗ್ಗೆ ಮಾಹಿತಿಯನ್ನು ನೀಡಲಾಗಿತ್ತು !

ಕಾಂಗ್ರೆಸ್ಸಿನಿಂದ ಮಾಡಲಾದ ಈ ಟ್ವೀಟ್‌ ಮೇಲೆ ಸಾಮಾಜಿಕ ಮಾಧ್ಯಮಗಳಲ್ಲಿ ಕಾಂಗ್ರೆಸ್ಸಿನ ಮೇಲೆ ಕೆಟ್ಟದಾಗಿ ಟೀಕೆ ಮಾಡಲಾಯಿತು. ಜನರು ಕಾಂಗ್ರೆಸ್ಸಿನ ಮೇಲೆ ಪ್ರಶ್ನೆಗಳ ಸುರಿಮಳೆಯನ್ನೇ ಗೈದರು.

೧. ಟ್ವಿಟ್ಟರ್‌ನಲ್ಲಿರುವ ‘ಪಲ್ಲಿವಿಸಿಟಿ’ ಎಂಬ ಬಳಕೆದಾರರು ಕಾಂಗ್ರೆಸ್ಸಿಗೆ ‘೧೯೯೦ರ ಮೊದಲು ಕಾಶ್ಮೀರದಲ್ಲಿ ಎಲ್ಲರೂ ಆರಾಮದಲ್ಲಿದ್ದರು ಎಂಬಂತೆ ನೀವು ಏಕೆ ಹೇಳುತ್ತಿದ್ದೀರಿ, ರಾಜ್ಯಪಾಲ ಜಗಮೋಹನರವರು ೧೯೮೮ರ ಆರಂಭದಿಂದ ಆಗಿನ ಪ್ರಧಾನಮಂತ್ರಿ ರಾಜೀವ ಗಾಂಧಿಯವರಿಗೆ ಕಾಶ್ಮೀರದಲ್ಲಿ ಭಯೋತ್ಪಾದಕರು ಸಂಘಟಿತರಾಗುತ್ತಿರುವ ಬಗ್ಗೆ ಮಾಹಿತಿ ನೀಡಿದ್ದರು, ಎಂಬುದನ್ನು ತಾವು ಅಲ್ಲಗಳೆಯಲು ಸಾಧ್ಯವಿಲ್ಲ’, ಎಂದು ಹೇಳಿದರು.

೨. ‘ವಿಜಯ’ ಎಂಬ ಹೆಸರಿನ ಬಳಕೆದಾರರು ‘ರಾಜ್ಯಪಾಲರಾದ ಜಗಮೋಹನರವರು ಆಗಿನ ಕೇಂದ್ರ ಸರಕಾರಕ್ಕೆ ‘ನಿಮಗೆ ಹಾಗೂ ನಿಮ್ಮ ಸುತ್ತಮುತ್ತಲಿನ ಜನರಿಗೆ ಈ (ಭಯೋತ್ಪಾದಕರು ಸಂಘಟಿತರಾಗುತ್ತಿರುವ) ಸಂಕೇತದ ವಿಷಯದಲ್ಲಿ ಗಮನ ನೀಡಲು ಸಮಯ, ಆಸಕ್ತಿ ಹಾಗೂ ದೃಷ್ಟಿಯೂ ಇಲ್ಲ’ ಎಂದು ಬರೆದಿದ್ದರು. ಜಗಮೋಹನರವರಿಗೆ ಸರಕಾರದಿಂದ ಕಾಶ್ಮೀರಿ ಹಿಂದೂಗಳ ವಿಷಯದಲ್ಲಿ ಆಗುತ್ತಿದ್ದ ದುರ್ಲಕ್ಷ್ಯವು ಅಪರಾಧವೆಂದು ಅನಿಸುತ್ತಿತ್ತು’ ಎಂದು ಬರೆದಿದ್ದಾರೆ.

೩. ‘ಸುಮಿತ ಭಸೀನ’ ಎಂಬ ಹೆಸರಿನ ಬಳಕೆದಾರರು ಕಾಂಗ್ರೆಸ್ಸಿನ ಮಾಜಿ ಪ್ರಧಾನಮಂತ್ರಿ ಡಾ. ಮನಮೋಹನ ಸಿಂಗರವರ ಕಾಶ್ಮೀರದಲ್ಲಿನ ಪ್ರತ್ಯೇಕತಾವಾದಿ ನೇತಾರ ಯಾಸೀನ ಮಲಿಕನೊಂದಿಗಿನ ಛಾಯಾಚಿತ್ರವನ್ನು ಪ್ರಸಾರ ಮಾಡಿ ‘ಕಾಂಗ್ರೆಸ್ ಇದರ ಮೇಲೆ ಸ್ಪಷ್ಟೀಕರಣ ನೀಡಬೇಕು’ ಎಂದು ಮನವಿ ಮಾಡಿದ್ದಾರೆ.

೪. ‘ಕುಮಾರ ೪೦೧೮’ ಎಂಬ ಹೆಸರಿನ ಬಳಕೆದಾರರು ‘ಇಂತಹ ಘಟನೆಗಳು ಒಂದೇ ದಿನದಲ್ಲಿ ನಡೆಯುವುದಿಲ್ಲ. ರಾಜೀವ ಗಾಂಧಿಯವರು ಡಿಸೆಂಬರ್‌ ೧೯೮೯ರ ವರೆಗೆ ಪ್ರಧಾನಮಂತ್ರಿಯಾಗಿದ್ದರು. ಕಾಶ್ಮೀರದಲ್ಲಿ ೧೯೮೬ರಿಂದ ದಂಗೆಗಳು ಆರಂಭವಾಗಿದ್ದವು. ಆಗ ರಾಜೀವ ಗಾಂಧಿಯವರ ಸರಕಾರವು ಅಧಿಕಾರದಲ್ಲಿತ್ತು’, ಎಂಬುದನ್ನು ಕಾಂಗ್ರೆಸ್ಸಿಗೆ ನೆನಪಿಸಿಕೊಟ್ಟರು.

ಈ ವಿರೋಧದ ನಂತರ ಕೇರಳ ಕಾಂಗ್ರೆಸ್‌ ತಮ್ಮ ಹಿಂದೂದ್ವೇಷಿ ಟ್ವೀಟ್‌ನ್ನು ತೆಗೆದು ಹಾಕಿತು.