ಹಸುವಿನ ಹಾಲಿನ ಮಹತ್ವವು ಭಾರತದಲ್ಲಿನ ಜನರಿಗೆ ಪ್ರಾಚೀನ ಕಾಲದಿಂದಲೂ ತಿಳಿದಿದೆ, ಇತ್ತೀಚೆಗೆ ಸಂಶೋಧಕರಿಗೂ ತಿಳಿಯಲಾರಂಭಿಸಿದೆ !
ನವ ದೆಹಲಿ – ಭಾರತದಲ್ಲಿ ಕೊರೋನಾದ ೩ನೇ ಅಲೆ ಬಂದು ಹೋದ ಬಳಿಕ ಕೆಲವು ತಜ್ಞರ ಹೇಳಿಕೆಯಂತೆ, ಕೊರೋನಾದ ನಾಲ್ಕನೇಯ ಅಲೆ ಬರುವ ಸಾಧ್ಯತೆಯಿದೆ. ಈ ಹಿನ್ನಲೆಯಲ್ಲಿ ಹಸುವಿನ ಹಾಲು ಕುಡಿಯುವುದರಿಂದ ಕೊರೋನಾದ ಸೋಂಕು ನಾಶವಾಗಲು ಸಹಾಯವಾಗುತ್ತದೆ, ಎಂಬ ಸಂಶೋಧನೆ ನಡೆಯಿತು. ಅದರ ವರದಿಯನ್ನು ‘ಜರ್ನಲ ಆಫ ಡೈರೀ ಸಾಯನ್ಸ’ನಲ್ಲಿ ಪ್ರಕಟಿಸಲಾಗಿದೆ ಎಂದು ಹೇಳಿದ್ದಾರೆ.
ಈ ವರದಿಯಲ್ಲಿ ‘ಯುನಿವರ್ಸಿಟಿ ಆಫ ಮಿಶಿಗನ’ ಮತ್ತು ‘ಗ್ಲೆನಬಿಯಾ ಪಿಎಲ್ಸೀ ರಿಸರ್ಚ ಆಂಡ ಡೆವೆಲಪಮೆಂಟ’ರವರ ಸಂಶೋಧಕರು ಹಸುವಿನ ಹಾಲಿನಲ್ಲಿ ಒಂದು ವಿಶೇಷ ರೀತಿಯ ‘ಪ್ರೊಟಿನ’ ಸಿಗುತ್ತದೆ ಹಾಗೂ ಅದು ಕೊರೋನಾವನ್ನು ನಿರ್ಮಿಸುವ ‘ಸಾರ್ಸ-ಕೊ-೨’ ಎಂಬ ವೈರಾಣುವನ್ನು ತಡೆಯುವ ಕಾರ್ಯ ಮಾಡುತ್ತದೆ. ಈ ‘ಪ್ರೊಟಿನ’ ಹಲವಾರು ವೈರಾಣುಗಳ ವಿರುದ್ಧ ಕಾರ್ಯ ಮಾಡುತ್ತದೆ ಎಂದು ಹೇಳಿದ್ದಾರೆ.