ದೇಶದಲ್ಲಿ ಹಿಂದೂಗಳ ನಡುವೆ ಒಡಕು ನಿರ್ಮಿಸುವ ಪ್ರಯತ್ನ ! – ರಾಷ್ಟ್ರೀಯ ಸ್ವಯಂಸೇವಕ ಸಂಘದ ವಾರ್ಷಿಕ ವರದಿ

ಸರಕಾರಿ ವ್ಯವಸ್ಥೆಯಲ್ಲಿ ಪ್ರವೇಶಿಸಲು ವಿಶೇಷ ಸಮುದಾಯದ ಯೋಜನೆಗಳು !

ಕರ್ಣಾವತಿ (ಗುಜರಾತ) – ದೇಶದಲ್ಲಿ ಪ್ರತ್ಯೇಕತಾವಾದಿ ಶಕ್ತಿಗಳ ಹಚ್ಚಾಗುತ್ತಿರುವ ಪ್ರಭಾವವು ಒಂದು ದೊಡ್ಡ ಸವಾಲಾಗಿದೆ. ಜನಗಣನೆಯ ಸಮಯ ಸಮೀಪವಾಗುತ್ತಿರುವಂತೆ, ‘ನಾವು ಹಿಂದೂಗಳಲ್ಲ’ ಎಂದು ಹೇಳಲು ಸಮುದಾಯವನ್ನು ಪ್ರೇರೇಪಿಸಲಾಗುತ್ತದೆ, ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ವಾರ್ಷಿಕ ವರದಿಯಲ್ಲಿ ಹೇಳಲಾಗಿದೆ. ಈ ವರದಿಯನ್ನು ಸಂಘದ ೩ ದಿನಗಳ ಪ್ರತಿನಿಧಿ ಸಭೆಯಲ್ಲಿ ಮಂಡಿಸಲಾಯಿತು. ‘ಸಂವಿಧಾನ ಹಾಗೂ ಧಾರ್ಮಿಕ ಸ್ವಾತಂತ್ರ್ಯದ ಹೆಸರಿನಲ್ಲಿ ದೇಶದಲ್ಲಿ ಕಟ್ಟರತೆ ಹಾಗೂ ಧಾರ್ಮಿಕ ಪ್ರಭುತ್ವವನ್ನು ಹಬ್ಬಿಸಲಾಗುತ್ತಿದೆ. ಈ ಮೂಲಕ ತಮ್ಮ ಉದ್ದೇಶವನ್ನು ಸಾಧಿಸಲು ಸರಕಾರಿ ವ್ಯವಸ್ಥೆಯಲ್ಲಿ ಪ್ರವೇಶಿಸಲು ವಿಶೇಷ ಸಮುದಾಯದ ಯೋಜನೆಯಿದೆ’, ಎಂಬ ಎಚ್ಚರಿಕೆಯನ್ನು ಈ ವರದಿಯಲ್ಲಿ ನೀಡಲಾಗಿದೆ. ‘ಸಮಾಜವನ್ನು ಜಾಗೃತಗೊಳಿಸಿ ಅದನ್ನು ಎದುರಿಸಿ’, ಎಂದು ಕರೆ ನೀಡಲಾಗಿದೆ.

ಈ ವರದಿಯಲ್ಲಿ, ‘ಧಾರ್ಮಿಕ ಕಟ್ಟರತೆ ಒಂದು ಸವಾಲಾಗಿದೆ.’ ಅದಕ್ಕಾಗಿ ಕರ್ನಾಟಕದಲ್ಲಿ ಹಿಜಾಬ ವಿವಾದದಲ್ಲಿ ಓರ್ವ ಹಿಂದುತ್ವನಿಷ್ಠ ಕಾರ್ಯಕರ್ತನ ಕೊಲೆಯಾಯಿತು ಹಾಗೂ ಕೇರಳದ ಸಂದರ್ಭವನ್ನು ನೀಡಲಾಗಿದೆ.