ಸೌದಿ ಅರೇಬಿಯಾದಲ್ಲಿ ಭಯೋತ್ಪಾದಕ ಸಂಘಟನೆಯ ಜೊತೆ ಸಂಬಂಧವಿರುವ 81 ಜನರಿಗೆ ಒಂದೇ ದಿನ ಗಲ್ಲು ಶಿಕ್ಷೆ

ಭಾರತದಲ್ಲಿ ಭಯೋತ್ಪಾದಕರಿಗೆ ಸಾಮಾನ್ಯವಾದ ಶಿಕ್ಷೆಯಾಗುತ್ತಿಲ್ಲ, ಅಂತಹವರ ಜೊತೆಗೆ ಸಂಬಂಧ ಇರುವವರೆಗೆ ಶಿಕ್ಷೆ ಹೇಗೆ ಆಗುವುದು ? ಭಾರತದಲ್ಲಿ ಇಂತಹ ಸ್ಥಿತಿ ಇರುವುದರಿಂದ ಇಲ್ಲಿಯ ಜಿಹಾದಿ ಭಯೋತ್ಪಾದನೆಯನ್ನು 3 ದಶಕಗಳಿಂದ ಮುಗಿಸಲಾಗಿಲ್ಲ, ಇದು ನೈಜಸ್ಥಿತಿಯಾಗಿದೆ !- ಸಂಪಾದಕರು

ರಿಯಾಧ (ಸೌದಿ ಅರೇಬಿಯಾ) – ಸೌದಿ ಅರೇಬಿಯಾದಲ್ಲಿ ಒಂದೇ ದಿನ 81 ಜನರಿಗೆ ಗಲ್ಲು ಶಿಕ್ಷೆ ನೀಡಲಾಗಿದೆ. ಭಯೋತ್ಪಾದಕ ಸಂಘಟನೆಯ ಜೊತೆಗೆ ಸಂಬಂಧ ಇರುವುದರ ಜೊತೆಗೆ ಅನೇಕ ಗಂಭೀರ ಆರೋಪದಲ್ಲಿ ತಪ್ಪಿತಸ್ಥರಾಗಿರುವುದರಿಂದ ಅವರಿಗೆ ಗಲ್ಲು ಶಿಕ್ಷೆ ವಿಧಿಸಲಾಗಿತ್ತು. ಇದರಲ್ಲಿನ ಕೆಲವು ಜನರು ಇಸ್ಲಾಮಿಕ್ ಸ್ಟೇಟ್ ಮತ್ತು ಅಲ್ ಕಾಯದಾ ಈ ಭಯೋತ್ಪಾದಕ ಸಂಘಟನೆಯ ಜೊತೆಗೆ ಸಂಬಂಧ ಹೊಂದಿದ್ದಾರೆ. ಎಲ್ಲರಿಗೆ ಗಲ್ಲು ಶಿಕ್ಷೆ ನೀಡುವ ಸ್ಥಳದ ವಿಷಯ ಮಾತ್ರ ಗೌಪ್ಯವಾಗಿ ಇಡಲಾಯಿತು.