ಟಿಬೆಟ್‍ನಲ್ಲಿ ಹೊಸವರ್ಷದ ನಿಮಿತ್ತವಾಗಿ ಆಯೋಜಿಸಿದ ಧಾರ್ಮಿಕ ಕಾರ್ಯಕ್ರಮದ ಮೇಲೆ ಚೀನಾದಿಂದ ನಿಷೇಧ !

ಚೀನಾದ ದರ್ಪ ! ಚೀನಾ ಒಂದೊಂದು ದೇಶವನ್ನು ನುಂಗಿ ಅದರ ಸಾಂಸ್ಕøತಿಕ ಪರಿಚಯವನ್ನು ಯಾವ ರೀತಿಯಲ್ಲಿ ಅಳಿಸಿ ಹಾಕುತ್ತದೆ ಎಂಬುದು ಇದರಿಂದ ಗಮನಕ್ಕೆ ಬರುತ್ತದೆ !- ಸಂಪಾದಕರು 

ಚೀನಾದ ಸೈನ್ಯವು ಭಾರತದೊಳಗೆ ನುಸುಳುವ ಪ್ರಯತ್ನ ಮಾಡುವ ಮೊದಲೇ ಅದರ ಮೇಲೆ ಭಾರತವು ಆಕ್ರಮಣ ಮಾಡಿ ಅದಕ್ಕೆ ತಕ್ಕ ಪಾಠ ಕಲಿಸಬೇಕು !- ಸಂಪಾದಕರು 

ಹಾಂಗ್‍ಕಾಂಗ್ – ತಿಬೆಟ್‍ನಲ್ಲಿ ತಿಬೆಟೀ ಹೊಸವರ್ಷ ‘ಲೊಸರ’ನ ನಿಮಿತ್ತ ಅನೇಕ ಧಾರ್ಮಿಕ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತದೆ. ಚೀನಾವು ತಿಬೆಟ್‍ನ ರಾಜಧಾನಿ ಲಹಾಸಾ ಹಾಗೂ ಅದರ ಸುತ್ತಮುತ್ತಲಿನ ನಗರಗಳಲ್ಲಿ ‘ಲೊಸರ’ನ ನಿಮಿತ್ತವಾಗಿ ಆಯೋಜಿಸಲಾಗುವ ಧಾರ್ಮಿಕ ಕಾರ್ಯಕ್ರಮದ ಮೇಲೆ ನಿಷೇಧ ಹೇರಿದೆ. ಇದರಿಂದ ತಿಬೆಟ್‍ನ ಜನರಿಗೆ ಹೊಸವರ್ಷವನ್ನು ಆಚರಿಸುವುದಕ್ಕೆ ಅಡಚಣೆ ಬರಲಿದೆ ಕಳೆದ ವರ್ಷವು ಚೀನಾವು ಕೊರೋನಾ ಮಹಾಮಾರಿಯ ಕಾರಣವನ್ನು ಮುಂದಿಟ್ಟು ‘ಲೊಸರ’ನ ನಿಮಿತ್ತವಾಗಿ ಆಯೋಜಿಸಿದ್ದ ಕಾರ್ಯಕ್ರಮಗಳ ಮೇಲೆ ನಿಷೇಧ ಹೇರಲಾಗಿತ್ತು. ಆ ಸಮಯದಲ್ಲಿ `ಕಾರ್ಯಕ್ರಮವನ್ನು ಆಯೋಜಿಸುವವರಿಗೆ ಕಠಿಣವಾದ ದಂಡವನ್ನು ನೀಡಲಾಗುವುದು’, ಎಂದು ಸರಕಾರವು ಹೇಳಿದೆ.

ತಿಬೆಟ್ ಜನರ ಧಾರ್ಮಿಕ ಕಾರ್ಯಕ್ರಮದ ಮೇಲೆ ಈ ರೀತಿ ನಿಷೇಧ ಹೇರಿ ಅಲ್ಲಿಯ ತಿಬೆಟಿ ಸಂಸ್ಕೃತಿಯ ಮೇಲೆ ಪ್ರಹಾರ ಮಾಡುವ ಪ್ರಯತ್ನವನ್ನು ಮಾಡಲಾಗುತ್ತಿದೆ, ಎಂದು ‘ಹಾಂಗಕಾಂಗ್ ಪೋಸ್ಟ’ವು ಹೇಳಿದೆ. ‘ಸರಕಾರಿ ಕೆಲಸ ಮಾಡುವ ತಿಬೆಟ್ ಜನರಿಗೆ ಈ ದಿನ ಕೆಲಸದಲ್ಲಿ ಹಾಜರಿರಲು ಸೂಚನೆಯನ್ನು ನೀಡಲಾಗಿದೆ. ಅವರು ರಜೆ ತೆಗೆದುಕೊಂಡು ಹಬ್ಬವನ್ನು ಆಚರಿಸಬಾರದು, ಇದಕ್ಕಾಗಿ ಹೀಗೆ ಮಾಡಲಾಗಿದೆ, ಎಂದು ಹಾಂಗಕಾಂಗ್ ಪೋಸ್ಟ ಹೇಳಿದೆ.