ರಷ್ಯಾದಿಂದ ಬಲವಾಗಿ ಕ್ಷಿಪಣಿ ದಾಳಿ : ಉಕ್ರೇನ್‍ನ ರಾಜಧಾನಿಗೆ ಎರಡು ಬದಿಯಿಂದ ಮುತ್ತಿಗೆ

ಕೀವ (ಉಕ್ರೇನ್) – ರಷ್ಯಾ-ಉಕ್ರೇನ್ ಯುದ್ಧದ 16 ನೇ ದಿನದಂದು ರಷ್ಯಾ ಉಕ್ರೇನ್ ಮೇಲೆ ಬಲವಾಗಿ ಕ್ಷಿಪಣಿಗಳಿಂದ ದಾಳಿಯನ್ನು ಮಾಡಿದೆ. ಇದರೊಂದಿಗೆ ರಷ್ಯಾವು ಉಕ್ರೇನ್‍ನ ರಾಜಧಾನಿ ಕೀವನ್ನು ಎರಡು ಕಡೆಯಿಂದ ಮುತ್ತಿಗೆ ಹಾಕಿದೆ. ಅದೇ ಸಮಯದಲ್ಲಿ ರಷ್ಯಾದ ಸೈನ್ಯವು ಉತ್ತರದ ಇರಪಿನ ಹಾಗೂ ಪೂರ್ವದ ಬ್ರೋವರಿಯಲ್ಲಿಯು ನಿರಂತರವಾಗಿ ಆಕ್ರಮಣ ಮಾಡುತ್ತಿದೆ. ಉಕ್ರೇನ ಬ್ರೋವರಿಯಲ್ಲಿ ರಷ್ಯಾಕ್ಕೆ ಸರಿಯಾದ ಪ್ರತ್ಯುತ್ತರವನ್ನು ನೀಡುತ್ತಾ ರಷ್ಯಾದ 5 ಟ್ಯಾಂಕಗಳನ್ನು ನಷ್ಟ ಮಾಡಿರುವ ಹೇಳಿಕೊಂಡಿದೆ. ರಷ್ಯಾವು ಉಕ್ರೇನನ ಮೇಲೆ ಟ್ಯಾಂಕ್, `ಪಾರಾಟ್ರಪರ್ಸ’, ಭೂ ಸೇನೆ, `ಆ್ಯಂಟಿ-ಟ್ಯಾಂಕ್ ಗೈಡೆಡ್ ಮಿಸಾಯಿಲ್ಸ್’ ಮುಂತಾದ ಶಸ್ತ್ರಾಸ್ತ್ರಗಳ ಮೂಲಕ ದಾಳಿ ಮಾಡುತ್ತಿದೆ.