ಅಸ್ಸಾಂನ ಖಾಸಗಿ ಮದರಸಾಗಳಲ್ಲಿ ಭಯೋತ್ಪಾದಕರನ್ನು ನಿರ್ಮಿಸಲಾಗುತ್ತಿದೆ ! – ಭಾಜಪದ ಆರೋಪ

ಅಸ್ಸಾಂನಲ್ಲಿ ಭಾಜಪದ ಸರಕಾರವಿರುವಾಗ ಭಾಜಪವು ಇಂತಹ ಮದರಸಾಗಳ ತನಿಖೆಯನ್ನು ಮಾಡಿ ಅದರಲ್ಲಿ ತಪ್ಪಿತಸ್ಥರೆಂದು ಕಂಡುಬಂದಲ್ಲಿ, ಅದರ ಮೇಲೆ ನಿಷೇಧ ಹೇರಬೇಕು !- ಸಂಪಾದಕರು

ಗೌಹತಿ (ಅಸ್ಸಾಂ) – ಅಸ್ಸಾಂನ ಖಾಸಗಿ ಮದರಸದಲ್ಲಿ ಭಯೋತ್ಪಾದಕರನ್ನು ನಿರ್ಮಿಸಲಾಗುತ್ತಿದೆ. ಈ ಮದರಸಾಗಳಿಂದ ದೇಶವಿರೋಧಿ ಚಟಿವಟಿಕೆಗಳು ನಡೆಯುತ್ತಿವೆ, ಎಂದು ಭಾರತೀಯ ಜನತಾ ಪಕ್ಷದ ಅಸ್ಸಾಂ ಶಾಖೆಯು ಆರೋಪ ಮಾಡಿದೆ. ಮದರಸಾಗಳು ಸರಕಾರದ ಸೂಚನೆಯನ್ನು ಪಾಲಿಸುತ್ತದೆಯೇ ಇಲ್ಲವೇ ?, ಈ ಬಗ್ಗೆ ನಿಗಾವಿಡುವಂತೆ ಭಾಜಪವು ರಾಜ್ಯಾಡಳಿತಕ್ಕೆ ಆದೇಶ ನೀಡಿದೆ.

ಚಾಪೋರಿ ಪ್ರದೇಶದಲ್ಲಿರುವ ನಾಲ್ಕು ಮದರಸಾಗಳಲ್ಲಿ `ಅಲ್ ಕಾಯದಾ’ ಈ ಕಟ್ಟರ ಜಿಹಾದೀ ಭಯೋತ್ಪಾದಕ ಸಂಘಟನೆಗಾಗಿ ‘ಸ್ಲೀಪರ ಸೆಲ್’ (ಅಡಗಿಕೊಂಡು ಭಯೋತ್ಪಾದನೆಯ ಕಾರ್ಯಾಚರಣೆಗಳನ್ನು ಮಾಡುವುದು) ನಿರ್ಮಿಸಲಾಗುತ್ತಿದೆ. ಕಳೆದ ಕೆಲವು ವರ್ಷಗಳಿಂದ ಈ ಕಾರ್ಯ ನಡೆಯುತ್ತಿದೆ, ಎಂದು ಭಾಜಪದ ವಕ್ತಾರ ರಣಜೀಬ ಕುಮಾರ ಶರ್ಮಾರವರು ಅಲ್ಲಿ ತೆಗೆದುಕೊಂಡ ಒಂದು ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದ್ದಾರೆ. ಖಾಸಗಿ ಮದರಸಾಗಳಲ್ಲಿ ಸರಕಾರದ ಮಾರ್ಗಸೂಚಿ ತತ್ತ್ವಗಳ ಪಾಲನೆ ಮಾಡಲಾಗುತ್ತಿಲ್ಲ. ಕಾಂಗ್ರೇಸ ಈವರೆಗೆ ಅಲ್ಪಸಂಖ್ಯಾತರ ಓಲೈಕೆ ಮಾಡುವ ಕೆಲಸವನ್ನು ಮಾಡಿದೆ. ಅವರು ಎಂದಿಗೂ ಭಯೋತ್ಪಾದನೆಯ ವಿರುದ್ಧ ಧ್ವನಿ ಎತ್ತಲಿಲ್ಲ. `ಎ.ಐ.ಯು.ಡಿ.ಎಫ್’. ಹಾಗೂ ‘ಎ.ಎಮ್.ಎಸ್.ಯೂ’ವು ಯಾವಾಗಲೂ ಇಸ್ಲಾಂ ಭಯೋತ್ಪಾದಕ ಸಂಘಟನೆಗಳ ಪರ ವಹಿಸಿದೆ, ಎಂದೂ ಕೂಡ ಶರ್ಮಾರವರು ಆರೋಪಿಸಿದ್ದಾರೆ.