ಶರೀರ ಬೆಚ್ಚಗಿರಲಿ ಎಂದು ಜನರು ಒಬ್ಬರನೊಬ್ಬರು ಅಪ್ಪಿಕೊಂಡು ದಿನಕಳೆಯುತ್ತಿದ್ದಾರೆ !
ಮಧುಮೇಹ ಮತ್ತು ಕರ್ಕ ರೋಗ ಇದರ ಔಷಧಿಗಳಿಗಾಗಿ ಒದ್ದಾಟ
ಭವಿಷ್ಯದಲ್ಲಿ ಬರುವ ಆಪತ್ಕಾಲದಲ್ಲಿ ಭಾರತದಲ್ಲಿ ಇಂತಹ ಸ್ಥಿತಿ ನಿರ್ಮಾಣವಾದರೆ ಜನರು ಅದನ್ನು ಎದುರಿಸಲು ಸಿದ್ಧರಿದ್ದಾರೆಯೇ ?- ಸಂಪಾದಕರು
ಮಾರಿಯುಪೊಲ (ಉಕ್ರೇನ್) – ರಷ್ಯಾ ಮತ್ತು ಉಕ್ರೇನ್ ಇವರಲ್ಲಿ ನಡೆಯುತ್ತಿರುವ ಯುದ್ಧ 16 ದಿನ ಕಳೆದಿದೆ. ರಷ್ಯಾದ ಸೈನ್ಯ ಉಕ್ರೇನ್‍ನ ಅನೇಕ ನಗರಗಳಲ್ಲಿ ಪ್ರವೇಶಿಸಿ ವಶಪಡಿಸಿಕೊಂಡಿದೆ. ಕೆಲವು ನಗರಗಳನ್ನು ಸುತ್ತುವರೆದಿದೆ. ಸಾಮಾನ್ಯ ನಾಗರೀಕರು ರಷ್ಯಾದ ಸೈನ್ಯಕ್ಕೆ ಗುರಿಯಾಗುತ್ತಿದ್ದಾರೆ. ಮಾರಿಯುಪೊಲನಲ್ಲಿ ಒಂದು ಆಸ್ಪತ್ರೆಯ ಮೇಲೆ ನಡೆದ ದಾಳಿಯಲ್ಲಿ 6 ವರ್ಷದ ಹೆಣ್ಣು ಮಗು ಸಹಿತ 3 ಜನರು ಸಾವನ್ನಪ್ಪಿದ್ದಾರೆ. ಈ ನಗರಗಳಿಗೆ ಸುತ್ತುವರೆದಿರುವದರಿಂದ ಆಹಾರ ನೀರು ಮತ್ತು ವಿದ್ಯುತ್ ಇಲ್ಲದೆ ಜನರು ದಿನಕಳೆಯುತ್ತಿದ್ದಾರೆ. ಈ ಪ್ರದೇಶಗಳಲ್ಲಿ ಕೊರೆಯುವ ಚಳಿ ಇರುವುದರಿಂದ ಇಂತಹ ಚಳಿಯಲ್ಲಿ ಆಹಾರ ನೀರು ಇಲ್ಲದೆ ದಿನ ಕಳೆಯುವುದು ಉಕ್ರೇನ್ ಜನರಿಗೆ ಬಹಳ ಕಷ್ಟವಾಗುತ್ತದೆ. ಆದ್ದರಿಂದ ನಾಗರಿಕರು ಆಹಾರ ನೀರಿಗಾಗಿ ಪರಸ್ಪರರ ಮೇಲೆ ದಾಳಿ ಮಾಡಲು ಆರಂಭಿಸಿದ್ದಾರೆ.
People are attacking each other for food as Russian forces bombard Ukrainian city of Mariupol: Red Cross https://t.co/vmMcxT4sue
— Insider News (@InsiderNews) March 10, 2022
1. ಮಾರಿಯುಪೊಲನಲ್ಲಿ ರೆಡ್ ಕ್ರಾಸ್ ಸಂಸ್ಥೆ ಸಹಾಯ ತಲುಪಿಸಲು ಪ್ರಯತ್ನಿಸುತ್ತಿದೆ. ಈ ಸಂಸ್ಥೆಯ ಅಧಿಕಾರಿಗಳು, ಮಾರಿಯುಪೊಲದಲ್ಲಿನ ಸ್ಥಿತಿ ಬಹಳ ಭಯಾನಕವಾಗಿದೆ, ಅಲ್ಲಿಯ ಜನರು ಅನ್ನ ಮತ್ತು ನೀರಿಗಾಗಿ ಪರಸ್ಪರರ ಮೇಲೆ ದಾಳಿ ಮಾಡುತ್ತಿದ್ದಾರೆ. ನೀರು ಇಲ್ಲದೆ ಜನರು ಹಿಮ ಕರಗಿಸಿ ನೀರನ್ನು ಕುಡಿಯಲು ಪ್ರಾರಂಭಿಸಿದ್ದಾರೆ. ಆಹಾರ ಸ್ವಲ್ಪ ಇದ್ದರೆ ಚಿಕ್ಕಮಕ್ಕಳಿಗೆ ತಿನ್ನಲು ನೀಡಲಾಗುತ್ತಿಲ್ಲ. ಮಾರಿಯುಪೊಲದ ರಸ್ತೆಯ ಮೇಲೆ ಕಡಿಮೆ ಪಕ್ಷ 1 ಸಾವಿರ 200 ಜನರ ಮೃತದೇಹಗಳು ಬಿದ್ದಿದೆ. ಇವರೆಲ್ಲರೂ ರಷ್ಯಾದ ದಾಳಿಯಲ್ಲಿ ಸಾವನ್ನಪ್ಪಿದವರಾಗಿದ್ದಾರೆ ಎಂದು ಹೇಳಿದರು.
2. ಸಾಶಾ ವೊಲಕೋವ ಈ ಮಾರಿಯುಪೊಲನಲ್ಲಿನ ರೆಡ್ ಕ್ರಾಸ್ ದಳದ ಪ್ರಮುಖರು, `ಈ ನಗರದಲ್ಲಿ ತರಕಾರಿಗಳು ಕಾಳಸಂತೆ ಆರಂಭವಾಗಿದೆ. ಇತರ ಆಹಾರ ಪದಾರ್ಥ ಮಾತ್ರ ಎಲ್ಲಿಯೂ ಸಿಗುತ್ತಿಲ್ಲ. ಮಾರಿಯುಪೊಲನಲ್ಲಿ 5 ದಿನಗಳ ಮೊದಲು ಔಷಧಗಳ ಸಂಗ್ರಹ ದೋಚಲಾಗಿತ್ತು. ಜನರು ಭೂಗತದಲ್ಲಿ ಆಶ್ರಯ ಪಡೆಯುತ್ತಿದ್ದಾರೆ -9 ಸೆಲ್ಸಿಯಸ್ ತಾಪಮಾನದಲ್ಲಿ ಶರೀರದಲ್ಲಿ ಉಷ್ಣತೆ ಇರುವುದಕ್ಕಾಗಿ, ಜನರು ಒಬ್ಬರನ್ನೊಬ್ಬರು ಅಪ್ಪಿಕೊಂಡು ಕಾಲಕಳೆಯುತ್ತಿದ್ದಾರೆ ಎಂದು ಹೇಳಿದರು.
3. ಸಾಶಾ ವೊಲಕೋವ ಇವರು, `ಜನರು ಮಧುಮೇಹ ಮತ್ತು ಕರ್ಕ ರೋಗದ ಔಷಧಿಗಾಗಿ ತಿರುಗಾಡುತ್ತಿದ್ದಾರೆ; ಆದರೆ ಅವರಿಗೆ ಎಲ್ಲಿಯೂ ಔಷಧಿ ಸಿಗುತ್ತಿಲ್ಲ. ಸಾವನ್ನಪ್ಪಿದ ಜನರನ್ನು ಕಾರ್ಪೆಟ್‍ನಲ್ಲಿ ಅಥವಾ ಪ್ಲಾಸ್ಟಿಕ್ ಬ್ಯಾಗಿನಲ್ಲಿ ಸುತ್ತಿ 80 ಅಡಿ ಆಳವಾದ ತೆಗ್ಗಿನಲ್ಲಿ ತಳ್ಳುತ್ತಿದ್ದಾರೆ.’ ಎಂದು ಹೇಳಿದರು.