ರಷ್ಯಾ ಮಾಡಿದ ಆಕ್ರಮಣದಲ್ಲಿ ಉಕ್ರೇನಿನ ಪ್ರಸೂತಿಗೃಹವು ಧ್ವಂಸವಾಗಿದೆ !

* ೧೭ ಜನರು ಗಾಯಗೊಂಡಿದ್ದಾರೆ

* ಅನೇಕ ಜನರು ಅವಶೇಷಗಳ ಕೆಳಗೆ ಸಿಲುಕಿದ್ದರು

ಲವೀವ (ಉಕ್ರೇನ) – ದೇಶದ ದಕ್ಷಿಣ ಪೂರ್ವ ಭಾಗದಲ್ಲಿರುವ ಮಾರಿಯುಪೋಲ ನಗರದಲ್ಲಿನ ಒಂದು ಪ್ರಸೂತಿಗೃಹದ ಮೇಲೆ ರಷ್ಯಾದಿಂದ ಬಾಂಬಿನ ಸುರಿಮಳೆಯಾಯಿತು. ಇಲ್ಲಿ ಅನೇಕ ನವಜಾತ ಶಿಶುಗಳು ಮತ್ತು ಅವುಗಳ ತಾಯಂದಿರ ಮೇಲೆ ಉಪಚಾರ ನಡೆಯುತ್ತಿತ್ತು. ಈ ಆಕ್ರಮಣದಲ್ಲಿ ಪ್ರಸೂತಿಗೃಹಕ್ಕೆ ಬಹಳ ಹಾನಿಯಾಗಿದೆ. ಇದರಲ್ಲಿ ೧೭ ಜನರು ಗಾಯಗೊಂಡರೆ ಅನೇಕ ಮಹಿಳೆಯರು ಹಾಗೂ ಮಕ್ಕಳು ಅವಶೇಷಗಳ ಕೆಳಗೆ ಸಿಲುಕಿದ್ದರು. ಈ ಹಿಂದೆ ‘ಜನವಸತಿ ಇರುವ ಕಡೆಗಳಲ್ಲಿ ಆಕ್ರಮಣ ಮಾಡುವುದಿಲ್ಲ’ ಎಂದು ರಷ್ಯಾ ವಚನ ನೀಡಿತ್ತು; ಆದರೆ ಅದು ವಚನದ ಪಾಲನೆ ಮಾಡಲಿಲ್ಲ ಎಂದು ಉಕ್ರೇನ ಹೇಳುತ್ತಿದೆ. ಮಾರಿಯುಪೋಲ ನಗರದೊಂದಿಗೆ ರಾಜಧಾನಿ ಕೀವನ ಪಶ್ಚಿಮದಲ್ಲಿರುವ ಒಂದು ನಗರದಲ್ಲಿರುವ ಎರಡು ಆಸ್ಪತ್ರೆಗಳ ಮೇಲೂ ರಷ್ಯಾದಿಂದ ಬಾಂಬಗಳ ಸುರಿಮಳೆಯಾಗಿರುವ ವಾರ್ತೆಯು ಅಲ್‌-ಜಜೀರಾ ವಾರ್ತಾವಾಹಿನಿಯಲ್ಲಿ ಪ್ರಸಿದ್ಧವಾಗಿದೆ.

ಉಕ್ರೇನಿನ ರಾಷ್ಟ್ರಾಧ್ಯಕ್ಷರಾದ ವ್ಲೋದಿಮಿರ ಝೆಲೆಂಸ್ಕಿಯವರೂ ಈ ಆಕ್ರಮಣದ ಒಂದು ವಿಡಿಯೋವನ್ನು ಟ್ವೀಟ್‌ ಮಾಡಿ ‘ಈ ಆಕ್ರಮಣವು ಅತ್ಯಾಚಾರವಾಗಿದೆ’, ಎಂದು ಹೇಳಿದ್ದಾರೆ.