ಉಕ್ರೇನ ‘ನಾಟೊ’ದ ಸದಸ್ಯತ್ವದ ಹಟ ಬಿಡಲಿದೆ !

ಕೊನೆಗೂ ರಷ್ಯಾದ ಬೇಡಿಕೆಗಳನ್ನು ಒಪ್ಪಿಕೊಂಡ ಝೆಲೆಂಸ್ಕೀ

ಕೀವ (ಉಕ್ರೇನ) – ನಾವು ಇನ್ನುಮುಂದೆ ‘ನಾಟೊ’ (ನಾರ್ಥ ಆಟಲ್ಯಾಂಟಿಕ ಟ್ಟೀಟಿ ಆರ್ಗನಾಯಝೇಶನ) ಸಂಘಟನೆಯ ಸದಸ್ಯತ್ವದ ಹಟವನ್ನು ಬಿಟ್ಟು ಬಿಡುವೆವು, ಎಂದು ಉಕ್ರೇನನ ಅಧ್ಯಕ್ಷರಾದ ವ್ಲೊದಿಮಿರ ಝೆಲೆಂಸ್ಕೀಯವರು ಆಶ್ವಾಸನೆ ನೀಡಿದ್ದಾರೆ. ಉಕ್ರೇನ ‘ನಾಟೊ’ದ ಸದಸ್ಯತ್ವಕ್ಕಾಗಿ ಪಟ್ಟು ಹಿಡಿಯುವುದೇ ರಷ್ಯಾವು ದಾಳಿ ಮಾಡುವುದರ ಹಿಂದಿನ ಮುಖ್ಯ ಕಾರಣವಾಗಿತ್ತು. ರಷ್ಯಾ ಹಾಗೂ ಉಕ್ರೇನ್ ನಡುವೆ ೧೪ ದಿನಗಳಿಂದ ಯುದ್ಧ ನಡೆಯುತ್ತಿದೆ. ಇವರಿಬ್ಬರ ನಡುವೆ ೩ ಸುತ್ತಿನ ಮಾತುಕತೆ ನಡೆದಿತ್ತು. ಮೂರನೇಯ ಸುತ್ತಿನಲ್ಲಿ ರಷ್ಯಾವು ಕೆಲವು ಷರತ್ತುಗಳನ್ನಿಟ್ಟಿತು. ‘ಅದನ್ನು ಪೂರ್ತಿ ಮಾಡಿದರೆ ಮಾತ್ರ ಯುದ್ಧವನ್ನು ನಿಲ್ಲಿಸುವೆವು’, ಎಂದು ರಷ್ಯಾ ಹೇಳಿತ್ತು. ಅವುಗಳ ಪೈಕಿ ಒಂದು ಷರತ್ತು ‘ಉಕ್ರೇನ ‘ನಾಟೊ’ದಲ್ಲಿ ಭಾಗವಹಿಸಬಾರದು’, ಎಂದಿತ್ತು.
ಉಕ್ರೇನನ ಮೇಲೆ ದಾಳಿ ಮಾಡುವ ಮೊದಲು ರಷ್ಯಾದ ರಾಷ್ಟ್ರಾಧ್ಯಕ್ಷರಾದ ವ್ಲಾದಿಮಿರ ಪುತಿನರವರು ಉಕ್ರೇನಗೆ ಸೇರಿದ ಎರಡು ರಾಜ್ಯಗಳಾದ ಡೆನೆತ್ಸಕ ಮತ್ತು ಲುಹಾನ್ಸ್ಕ ಅನ್ನು ‘ಸ್ವತಂತ್ರ್ಯ ದೇಶ’ಗಳೆಂದು ಘೋಷಿಸಿತ್ತು. ಈ ದೇಶಗಳಿಗೆ ಉಕ್ರೇನ ಮಾನ್ಯತೆ ನೀಡಬೇಕೆಂಬ ಷರತ್ತು ಕೂಡ ಇತ್ತು. ಆ ಷರತ್ತಿನ ಬಗ್ಗೆ ಕೂಡ ಒಪ್ಪಂದ ಮಾಡಿಕೊಳ್ಳಲು ತಯಾರಾಗಿರುವುದಾಗಿ ಝೆಲೆಂಸ್ಕೀಯವರು ಹೇಳಿದ್ದಾರೆ.

ರಷ್ಯಾವನ್ನು ‘ಭಯೋತ್ಪಾದಕ ದೇಶ’ವೆಂದು ಘೋಷಿಸಿ ! – ಝೆಲೆಂಸ್ಕೀಯವರ ಬೇಡಿಕೆ

ಉಕ್ರೇನ ರಾಷ್ಟ್ರಾಧ್ಯಕ್ಷ ಝೆಲೆಂಸ್ಕೀಯವರು ಮಾರ್ಚ ೮ರಂದು ರಾತ್ರಿ ಬ್ರಿಟನ ಸಂಸತ್ತನ್ನು ಸಂಬೋಧಿಸುವಾಗ ಉಕ್ರೇನಗೆ ಸಹಾಯ ಮಾಡಲು ಆವಾಹನೆ ನೀಡಿದರು. ಅದೇ ಸಮಯದಲ್ಲಿ ಝೆಲೆಂಸ್ಕೀಯವರು ‘ರಷ್ಯಾವನ್ನು ‘ಭಯೋತ್ಪಾದಕ ದೇಶ’ವೆಂದು ಘೋಷಿಸಲಿ’, ಎಂದು ಬ್ರಿಟೀಷ ಸಂಸತ್ತಿನ ಮುಂದೆ ಬೇಡಿಕೆ ಇಟ್ಟಿದರು. ಜೊತೆಗೆ ‘ಬ್ರಿಟನನ ವಾಯುಮಾರ್ಗವು ಸುರಕ್ಷಿತವಾಗಿರಲು ರಷ್ಯಾದ ಮೇಲೆ ಕಠಿಣ ನಿರ್ಬಂಧಗಳನ್ನು ಹೇರಬೇಕು’, ಎಂದು ಕೂಡ ಬೇಡಿಕೆ ಮಾಡಿದರು.

ಝೆಲೆಂಸ್ಕೀಯವರು ತಮ್ಮ ಮಾತನ್ನು ಮುಂದುವರೆಸುತ್ತಾ, ನಾವು ಶತ್ರುಗಳ ಮುಂದೆ ಬಾಗುವುದಿಲ್ಲ ಹಾಗೂ ಪರಾಭವಗೊಳ್ಳುವುದಿಲ್ಲ. ನಾವು ನಮ್ಮ ದೇಶಕ್ಕಾಗಿ ಕೊನೆಯ ಉಸಿರಿರುವರೆಗೂ ಹೋರಾಡುವೆವು ಎಂದು ಹೇಳಿದರು.