೧. ಬುರ್ಖಾ ಮತ್ತು ಹಿಜಾಬ್‌ನ ಬೇಡಿಕೆಯಿಂದಾಗಿ ಧಾರ್ಮಿಕ ಮೂಲಭೂತವಾದದ ಬೆಂಕಿ ದೇಶದಲ್ಲಿ ಎಲ್ಲೆಡೆ ಪಸರಿಸುವುದು
‘ಕರ್ನಾಟಕದ ಶಾಲೆಗಳು ಈ ಸ್ವಧರ್ಮದ ವರ್ಚಸ್ವವನ್ನು ತೋರಿಸುವ ಪ್ರಯೋಗಾಲಯಗಳೇ ಆಗಿಬಿಟ್ಟಿವೆ. ‘ಮುಸಲ್ಮಾನ ವಿದ್ಯಾರ್ಥಿನಿಯರು ಹಿಜಾಬ್‌ಗಾಗಿ ಮಾಡುತ್ತಿರುವ ಆಗ್ರಹವು ಅವರ ಹಟಸಾಧನೆಯಾಗಿದೆಯೇ ಅಥವಾ ಜಿಹಾದ್‌ನ ಒಂದು ಭಾಗವಾಗಿದೆಯೇ ?’, ಎನ್ನುವ ವಿಷಯದಲ್ಲಿ ಸಂಶಯ ಬರುತ್ತದೆ. ಈ ಶಾಲೆಗಳಿಂದ ಧಾರ್ಮಿಕ ಮೂಲಭೂತವಾದದ ವಿಷವನ್ನು ಬಿತ್ತಲಾಗುತ್ತಿದೆ. ೮ ಫೆಬ್ರವರಿ ೨೦೨೨ ರಂದು ಕರ್ನಾಟಕದ ಮಂಡ್ಯ ಜಿಲ್ಲೆಯಲ್ಲಿ ಒಂದು ಚಿತ್ರಸುರುಳಿ ಪ್ರಸಾರವಾಗಿತ್ತು. ಅದರಲ್ಲಿ ಒಂದು ಖಾಸಗಿ ಮಹಾವಿದ್ಯಾಲಯದಲ್ಲಿ ವಿದ್ಯಾರ್ಥಿಗಳು ಶಿಕ್ಷಣ ಪಡೆಯುವ ಬದಲು ‘ಅಲ್ಲಾ ಹೂ ಅಕಬರ್’ ಮತ್ತು ‘ಜಯ ಶ್ರೀರಾಮ |’ ಎನ್ನುವ ಘೋಷಣೆ ಕೂಗುತ್ತಿರುವುದು ಕಾಣಿಸುತ್ತಿತ್ತು.
ಅದರಲ್ಲಿ ಮುಸಲ್ಮಾನ ವಿದ್ಯಾರ್ಥಿನಿಯರು ಬುರ್ಖಾ ಧರಿಸಿದ್ದರು. ಧಾರ್ಮಿಕ ಘೋಷಣೆ ಕೂಗುವ ಈ ಹೋರಾಟವು ಎರಡನೆಯ ದಿನ ಇತರ ಶಾಲೆಗಳಿಗೂ ತಲುಪಿತು. ಅನಂತರ ಉಡುಪಿಯ ಉಚ್ಚ ಮಾಧ್ಯಮಿಕ ವಿದ್ಯಾಲಯದಿಂದ ಒಂದು ಚಿತ್ರಸುರುಳಿ ಪ್ರಸಾರವಾಯಿತು. ಅದರಲ್ಲಿ ಬುರ್ಖಾ ಮತ್ತು ಹಿಜಾಬ್ ಹಾಕಿರುವ ಮುಸಲ್ಮಾನ ವಿದ್ಯಾರ್ಥಿನಿಯು ಒಬ್ಬ ಹಿಂದೂ ವಿದ್ಯಾರ್ಥಿಯನ್ನು ವಿರೋಧಿಸಲು ಧಾರ್ಮಿಕ ಘೋಷಣೆಯನ್ನು ಕೂಗುತ್ತಿದ್ದಳು. ಹಿಂದೂ ವಿದ್ಯಾರ್ಥಿಗಳು ಅವಳನ್ನು ವಿರೋಧಿಸಲು ಕೇಸರಿ ಶಾಲುಗಳನ್ನು ಬೀಸುತ್ತಿದ್ದರು. ಈ ಪರಿಸ್ಥಿತಿಯನ್ನು ನಿಯಂತ್ರಿಸಲು ಕರ್ನಾಟಕದ ಶಾಲೆಗಳು ಮತ್ತು ಮಹಾವಿದ್ಯಾಲಯಗಳನ್ನು ಒಂದು ದಿನ ಮುಚ್ಚಲಾಗಿತ್ತು; ಆದರೆ ದೇಶದ ವಿವಿಧ ಸ್ಥಳಗಳಲ್ಲಿ ಹಿಜಾಬ್‌ನ ಬೇಡಿಕೆ ಮಾಡುತ್ತಾ ತುಂಬಾ ಗೊಂದಲವೆಬ್ಬಿಸಲಾಯಿತು. ಕರ್ನಾಟಕ, ತೆಲಂಗಾಣ, ಬಂಗಾಲ, ಮಹಾರಾಷ್ಟ್ರ ಮತ್ತು ದೆಹಲಿ ಸಹಿತ ಅನೇಕ ಸ್ಥಳಗಳ ಮುಸಲ್ಮಾನ ಸಂಘಟನೆಗಳು ಹಾಗೂ ವಿದ್ಯಾರ್ಥಿಗಳು ಇದರ ವಿರುದ್ಧ ಆಂದೋಲನ ಮಾಡಿದರು.
ಈ ಘಟನೆ ಕೇವಲ ಒಂದು ರಾಜ್ಯದ ಕೆಲವೇ ಶಾಲೆಗಳಿಗೆ ಸೀಮಿತವಾಗಿರದೆ ಅದರ ಮೂಲಕ ಧಾರ್ಮಿಕ ಮೂಲಭೂತವಾದದ ಬೆಂಕಿ ದೇಶದಲ್ಲಿ ಎಲ್ಲೆಡೆ ಹರಡಿತು.
೨. ಖಟ್ಲೆಯಲ್ಲಿನ ಅಂತಿಮ ನಿರ್ಣಯ ಬರುವ ತನಕ ಕರ್ನಾಟಕದ ಶಾಲೆಗಳು ಮತ್ತು ಮಹಾವಿದ್ಯಾಲಯಗಳಲ್ಲಿ ಧಾರ್ಮಿಕ ಉಡುಗೆಗಳನ್ನು ನಿರ್ಬಂಧಿಸಬೇಕೆಂದು ಕರ್ನಾಟಕ ಉಚ್ಚ ನ್ಯಾಯಾಲಯವು ಆದೇಶ ನೀಡಿದೆ !
೯ ಫೆಬ್ರವರಿ ೨೦೨೨ ರಂದು ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ಈ ಪ್ರಕರಣದಲ್ಲಿ ಆಲಿಕೆ ನಡೆಯಿತು. ವಿವಾದ ಹೆಚ್ಚುತ್ತಾ ಇದ್ದ ಕಾರಣ ಈ ಪ್ರಕರಣದ ಆಲಿಕೆಯು ಮುಖ್ಯ ನ್ಯಾಯಾಧೀಶರ ಮುಂದೆ ನಡೆಯಲಿಕ್ಕಿದೆ. ‘ಖಟ್ಲೆಯ ಅಂತಿಮ ನಿರ್ಣಯ ಬರುವ ತನಕ ಕರ್ನಾಟಕದ ಶಾಲೆಗಳು ಮತ್ತು ಮಹಾವಿದ್ಯಾಲಯಗಳಲ್ಲಿ ಧಾರ್ಮಿಕ ಉಡುಗೆಗಳನ್ನು ಧರಿಸುವ ಹಾಗಿಲ್ಲ’ವೆಂದು ಕರ್ನಾಟಕ ಉಚ್ಚ ನ್ಯಾಯಾಲಯದ ೩ ನ್ಯಾಯಾಧೀಶರ ವಿಭಾಗೀಯ ಪೀಠವು ಆದೇಶ ನೀಡಿದೆ. ಈಗ ಮುಖ್ಯ ನ್ಯಾಯಾಧೀಶರು ಇದರ ನಿರ್ಣಯವನ್ನು ನೀಡುವರು.
೩. ಹಿಜಾಬ್‌ನ ವಿವಾದದಿಂದ ಜನರಲ್ಲಿ ಹಬ್ಬಿಸಲಾಗುತ್ತಿರುವ ತಪ್ಪು ತಿಳುವಳಿಕೆಗಳು !
ಈ ಸಂಪೂರ್ಣ ವಿವಾದದಲ್ಲಿ ಜನರಲ್ಲಿ ಸತತವಾಗಿ ಮೂರು ದೊಡ್ಡ ವಿಷಯದಲ್ಲಿ ತಪ್ಪು ತಿಳುವಳಿಕೆಗಳನ್ನು ಹಬ್ಬಿಸಲಾಗುತ್ತಿದೆ.
ಅ. ಮೊದಲನೆಯದಾಗಿ ಧಾರ್ಮಿಕ ಉಡುಪಿನ ಈ ವಿಷಯವು ಶಾಲೆಯಲ್ಲಿನ ಸಮವಸ್ತ್ರಕ್ಕೆ ಸಂಬಂಧಿಸಿದೆ; ಆದರೆ ಒಂದು ವಿಶಿಷ್ಟ ವಿಚಾರಶೈಲಿಯ ಜನರು ಅದನ್ನು ಹಿಜಾಬ್‌ನ ವಿಷಯವನ್ನಾಗಿ ಮಾಡಿದರು. ‘ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಒಂದು ಸಮಾನವಾದ ಸಮವಸ್ತ್ರ ಇರಬೇಕೋ ಅಥವಾ ಬೇಡವೋ ?’, ಎಂಬ ವಿಷಯವು ವಿವಾದದ ಸ್ವರೂಪವನ್ನು ಪಡೆದು ಅದನ್ನು ಹಿಜಾಬ್‌ನ ವರೆಗೆ ಸೀಮಿತಗೊಳಿಸಲಾಗಿದೆ.
ಆ. ಎರಡನೆಯ ವಿಷಯವೆಂದರೆ ಭಾರತದಲ್ಲಿ ಇಂದಿನವರೆಗೆ ಯಾವುದೇ ಮುಸಲ್ಮಾನ ಮಹಿಳೆಗೆ ಹಿಜಾಬ್ ಧರಿಸದಂತೆ ತಡೆಯೊಡ್ಡಲಿಲ್ಲ. ಇಂದು ಕೂಡ ನಮ್ಮ ದೇಶದಲ್ಲಿ ಮುಸಲ್ಮಾನ ಮಹಿಳೆಯರು ತಮ್ಮ ಇಚ್ಛೆಗನುಸಾರ ಹಿಜಾಬ್, ಬುರ್ಖಾ ಇತ್ಯಾದಿ ಧರಿಸಲು ಸಾಧ್ಯವಿದೆ. ಅದು ಸಂವಿಧಾನವು ಅವರಿಗೆ ನೀಡಿರುವ ಅಧಿಕಾರವಾಗಿದೆ. ಶಾಲೆಯಲ್ಲಿ ವಿದ್ಯಾರ್ಥಿನಿಯರು ಧಾರ್ಮಿಕ ಉಡುಗೆಗಳನ್ನು ಧರಿಸಿ ತರಗತಿಯಲ್ಲಿ ಕುಳಿತುಕೊಳ್ಳಬಹುದೇ, ಎನ್ನುವ ವಿಷಯದಲ್ಲಿಯೂ ವಿವಾದವಿದೆ; ಆದರೆ ಈ ವಿಷಯವನ್ನು ಮುಂದಿಟ್ಟು ಭಾರತದಲ್ಲಿ ಮುಸಲ್ಮಾನ ಮಹಿಳೆಯರಿಗೆ ಹಿಜಾಬ್ ಧರಿಸಲು ನಿರ್ಬಂಧ ಹೇರಲಾಗುತ್ತಿದೆ, ಎನ್ನುವ ಸ್ವರೂಪವನ್ನು ನೀಡಲಾಗುತ್ತಿದೆ.
ಇ. ಮೂರನೆಯ ಹಾಗೂ ಎಲ್ಲಕ್ಕಿಂತ ಮಹತ್ವದ ವಿಷಯವೆಂದರೆ ಕರ್ನಾಟಕದ ಈ ಮುಸಲ್ಮಾನ ವಿದ್ಯಾರ್ಥಿನಿಯರು ಹಿಜಾಬ್ ಧರಿಸುವ ಬೇಡಿಕೆಯನ್ನು ಮಾಡುತ್ತಾ ಆಂದೋಲನವನ್ನು ಆರಂಭಿಸಿರುವ ಈ ಎಲ್ಲ ವಿದ್ಯಾರ್ಥಿನಿಯರು ಈ ಹಿಂದೆ ಹಿಜಾಬ್ ಧರಿಸದೆಯೇ ಶಾಲೆಗೆ ಬರುತ್ತಿದ್ದರು. ಆದ್ದರಿಂದ ಕೇವಲ ಒಂದು ತಿಂಗಳಿಂದ ಹೀಗೆ ಹಿಜಾಬ್‌ಗಾಗಿ ಆಗ್ರಹಿಸುತ್ತಾರೆಂದರೆ, ಇದರ ಬಗ್ಗೆ ಸಂದೇಹವು ಮೂಡುತ್ತದೆ.
೪. ಹಿಜಾಬ್‌ನ ವಿಷಯದ ವಿವಾದವು ಒಂದು ದೊಡ್ಡ ಷಡ್ಯಂತ್ರವಾಗಿದೆ !
ವಿವಾದ ನಡೆಯುತ್ತಿರುವ ಈ ಶಾಲೆಗೆ ‘ಝೀ ನ್ಯೂಸ್’ ಈ ವಾರ್ತಾವಾಹಿನಿಯ ತಂಡದವರು ಭೇಟಿಕೊಟ್ಟಿದ್ದರು. ‘ಅಲ್ಲಿ ಸಿಕ್ಕಿರುವ ಸಾಕ್ಷಿಗಳಿಂದ ಈ ಪ್ರಕರಣದ ಹಿಂದೆ ದೊಡ್ಡ ಷಡ್ಯಂತ್ರವಿರಬಹುದು’, ಎಂದು ಅನಿಸುತ್ತದೆ. ೯ ಫೆಬ್ರವರಿ ೨೦೨೨ ರಂದು ಉಡುಪಿಯ ಸರಕಾರಿ ಉಚ್ಚ ಮಾಧ್ಯಮಿಕ ವಿದ್ಯಾಲಯಕ್ಕೆ ಸಂಬಂಧಿಸಿ ಪ್ರಸಾರವಾದ ಒಂದು ಛಾಯಾಚಿತ್ರದಲ್ಲಿ ಮಹಾವಿದ್ಯಾಲಯದ ೬ ಮುಸಲ್ಮಾನ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ತರಗತಿಯಲ್ಲಿ ಕುಳಿತುಕೊಳ್ಳುವ ಬೇಡಿಕೆಯನ್ನು ಮಾಡಿದ್ದರು.
ಛಾಯಾಚಿತ್ರದಲ್ಲಿ ಅವರು ಹಿಜಾಬ್ ಧರಿಸಿರಲಿಲ್ಲ. ಅವರು ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ಹಿಜಾಬ್ ಧರಿಸುವ ಬೇಡಿಕೆಯನ್ನು ಮಾಡುತ್ತಾ ಖಟ್ಲೆಯನ್ನು ದಾಖಲಿಸಿದ್ದಾರೆ. ಇದರಿಂದ ಸ್ಪಷ್ಟವಾಗುವುದೇನೆಂದರೆ, ಈ ಘಟನೆಯ ಮೊದಲು ಎಲ್ಲ ಮುಸಲ್ಮಾನ ವಿದ್ಯಾರ್ಥಿನಿಯರು ಹಿಜಾಬ್ ಧರಿಸದೆಯೇ ವಿದ್ಯಾಲಯಕ್ಕೆ ಬರುತ್ತಿದ್ದರು. ಇವರಲ್ಲಿ ಕೆಲವು ವಿದ್ಯಾರ್ಥಿನಿಯರು ಕಳೆದ ೧೦ ವರ್ಷಗಳಿಂದ ಈ ವಿದ್ಯಾಲಯದಲ್ಲಿ ಕಲಿಯುತ್ತಿದ್ದಾರೆ. ಈ ಅವಧಿಯಲ್ಲಿ ಅವರಿಂದ ಹಿಜಾಬ್ ಧರಿಸುವ ವಿಷಯದಲ್ಲಿ ಯಾವುದೇ ಬೇಡಿಕೆ ಬಂದಿರಲಿಲ್ಲ. ಇಷ್ಟರ ವರೆಗೆ ಅವರು ಮಹಾವಿದ್ಯಾಲಯವು ಹಾಕಿಕೊಟ್ಟಿರುವ ನಿಯಮಗಳನ್ನೂ ಪಾಲನೆ ಮಾಡಿದ್ದಾರೆ. ಈ ಛಾಯಾಚಿತ್ರವು ಈ ವಿಷಯಗಳಿಗೆ ದೊಡ್ಡ ಸಾಕ್ಷಿಯಾಗಿದೆ. ಇನ್ನೊಂದು ಸಾಕ್ಷಿಯೆಂದರೆ ಪ್ರತಿಯೊಬ್ಬ ವಿದ್ಯಾರ್ಥಿಗೆ ಮಹಾವಿದ್ಯಾಲಯದಲ್ಲಿ ಪ್ರವೇಶ ನೀಡುವಾಗ ಅವನ ತಾಯಿ-ತಂದೆಯರಿಂದ ಕೆಲವು ಕಾಗದಪತ್ರಗಳಿಗೆ ಸಹಿ ಮಾಡಿಸಿಕೊಳ್ಳಲಾಗುತ್ತದೆ. ಈ ಕಾಗದಪತ್ರಗಳಲ್ಲಿ ಅನುಮತಿಯಿರುವ ಒಂದು ಅರ್ಜಿ ಇರುತ್ತದೆ. ಅದರಲ್ಲಿ ‘ವಿದ್ಯಾರ್ಥಿಯು ಶಾಲೆಯ ನಿಯಮಗಳನ್ನು ಪಾಲನೆ ಮಾಡಬೇಕು ಹಾಗೂ ಅವುಗಳ ಉಲ್ಲಂಘನೆ ಮಾಡಿದರೆ ಶಾಲೆಯ ಆಡಳಿತ ಮಂಡಳಿಯು ವಿದ್ಯಾರ್ಥಿಯ ವಿರುದ್ಧ ಕ್ರಮತೆಗೆದುಕೊಳ್ಳಬಹುದು’, ಎಂದು ಬರೆದು ಪಾಲಕರ ಅನುಮತಿಯನ್ನು ತೆಗೆದುಕೊಳ್ಳಲಾಗುತ್ತದೆ. ಈಗ ಹಿಜಾಬ್ ಧರಿಸುವ ಬೇಡಿಕೆಯನ್ನು ಮಾಡುತ್ತಿರುವ ಮುಸಲ್ಮಾನ ವಿದ್ಯಾರ್ಥಿನಿಯರ ಪಾಲಕರೂ ಈ ಅನುಮತಿಯನ್ನು ಬರೆದು ಸಹಿ ಮಾಡಿಕೊಟ್ಟಿದ್ದಾರೆ. ಆ ಅರ್ಜಿಯಲ್ಲಿನ ೧೯ ವಿಷಯಗಳ ಬಗ್ಗೆ ವಿದ್ಯಾರ್ಥಿಗಳ ಮತ್ತು ಪಾಲಕರ ಅನುಮತಿ ತೆಗೆದುಕೊಳ್ಳಲಾಗಿದೆ. ಅರ್ಜಿಯ ೮ ನೆ ನಿಯಮವನ್ನು ‘ಎಲ್ಲ ವಿದ್ಯಾರ್ಥಿಗಳು ಪಾಲಿಸಬೇಕಾಗಿದೆ’, ಎಂದು ಬರೆಯಲಾಗಿದೆ ಹಾಗೂ ೯ ನೆಯ ನಿಯಮದಲ್ಲಿ ಎಲ್ಲ ವಿದ್ಯಾರ್ಥಿಗಳು ಸಮವಸ್ತ್ರ ಧರಿಸಿ ಮತ್ತು ಗುರುತುಪತ್ರವನ್ನು ಇಟ್ಟುಕೊಂಡು ವಿದ್ಯಾಲಯಕ್ಕೆ ಬರಬೇಕು, ಎಂದು ಬರೆಯಲಾಗಿದೆ.
೫. ಹಿಜಾಬ್‌ನ ಬೇಡಿಕೆ ಮಾಡುವ ವಿಷಯದಲ್ಲಿ ಅಕ್ಟೋಬರ್ ೨೦೨೧ರಿಂದಲೇ ನಿಯೋಜನೆಯಾಗಿದೆ
ಅನೇಕ ವರ್ಷಗಳಿಂದ ವಿದ್ಯಾರ್ಥಿಗಳು ವಿದ್ಯಾಲಯದ ನಿಯಮಗಳನ್ನು ಪಾಲಿಸುತ್ತಿದ್ದರು; ಆದರೆ ಅನಿರೀಕ್ಷಿತವಾಗಿ ಅವರು ಹಿಜಾಬ್ ಧರಿಸುವ ಬೇಡಿಕೆಯನ್ನು ಮಾಡಿರುವುದರಿಂದ ವಿವಾದ ಉದ್ಭವಿಸಿದೆ. ಈ ಪ್ರಕರಣದ ಹಿಂದೆ ಯಾರದ್ದೊ ಕೈವಾಡ ಇದೆ ಎಂಬುದು ಖಚಿತ. ಈ ವಿಷಯದ ಮೂಲಕ ಶಾಲೆಗಳನ್ನು ‘ಧರ್ಮದ ಪ್ರಯೋಗಾಲಯ’ವನ್ನಾಗಿ ಮಾಡುವ ಉದ್ದೇಶವಿರಬಹುದು. ಉಡುಪಿಯ ಮಹಾವಿದ್ಯಾಲಯದಲ್ಲಿ ಅಕ್ಟೋಬರ್ ೨೦೨೧ ರಿಂದ ವಿದ್ಯಾರ್ಥಿಗಳು ಹಿಜಾಬ್‌ನ ಬೇಡಿಕೆಯನ್ನು ಮಾಡಲು ಪ್ರಾರಂಭಿಸಿದರು. ಕೆಲವು ಮುಸಲ್ಮಾನ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿಕೊಂಡು ತರಗತಿಯಲ್ಲಿ ಕುಳಿತುಕೊಳ್ಳುವ ಬೇಡಿಕೆಯನ್ನು ಮಾಡಿದ್ದರು; ಆದರೆ ಅಲ್ಲಿನ ಪ್ರಾಚಾರ್ಯರು ನಿರಾಕರಿಸಿದರು. ಅನಂತರ ‘ಸೋಶಲ್ ಡೆಮೋಕ್ರಟಿಕ್ ಪಾರ್ಟಿ ಆಫ್ ಇಂಡಿಯಾ’ ಈ ಸಂಘಟನೆಯು ವಿದ್ಯಾರ್ಥಿನಿಯರನ್ನು ಉತ್ತೇಜಿಸಲು ಪ್ರಾರಂಭಿಸಿತು.
ಆಂದೋಲನವನ್ನು ಆರಂಭಿಸಲು ಈ ರಾಜಕೀಯ ಪಕ್ಷವು ಮುಸಲ್ಮಾನ ವಿದ್ಯಾರ್ಥಿನಿಯರಿಗೆ ಸಹಾಯ ಮಾಡಿತು. ಈ ರಾಜಕೀಯ ಪಕ್ಷಕ್ಕೆ ಸಂಬಂಧಿಸಿದ ‘ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ’ ಈ ವಿದ್ಯಾರ್ಥಿಗಳ ಸಂಘಟನೆಯು ಕರ್ನಾಟಕದಲ್ಲಿ ದೊಡ್ಡ ಪ್ರಮಾಣದಲ್ಲಿ ವಿರೋಧವನ್ನು ತೋರಿಸಲು ಆಂದೋಲನಗಳನ್ನು ಆಯೋಜಿಸುತ್ತಿದೆ. ಅದರಲ್ಲಿ ಭಾಗವಹಿಸಲು ಮುಸಲ್ಮಾನ ವಿದ್ಯಾರ್ಥಿನಿಯರನ್ನು ಪ್ರೋತ್ಸಾಹಿಸುತ್ತದೆ ಕೂಡಾ. ‘ಸೋಶಲ್ ಡೆಮೋಕ್ರಟಿಕ್ ಪಾರ್ಟಿ ಆಫ್ ಇಂಡಿಯಾ’ ಈ ಸಂಘಟನೆಯೇ ಎಲ್ಲವನ್ನೂ ಮಾಡುತ್ತಿದೆ; ಏಕೆಂದರೆ ಅದು ಪೊಪ್ಯುಲರ್ ಫ್ರಂಟ್ ಆಫ್ ಇಂಡಿಯಾದೊಂದಿಗೆ ಜೋಡಿಸಲ್ಪಟ್ಟಿದೆ.
ದೆಹಲಿಯಿಂದ ೨ ಸಾವಿರ ಕಿ.ಮೀ. ದೂರದಲ್ಲಿರುವ ಕರ್ನಾಟಕ ರಾಜ್ಯದ ಉಡುಪಿಯಲ್ಲಿ ಸದ್ಯ ಉದ್ವಿಗ್ನ ವಾತಾವರಣವಿದೆ. ಇಲ್ಲಿನ ಜನರು ಕೇಳುತ್ತಿರುವ ಪ್ರಶ್ನೆಯೆಂದರೆ, “ಇಷ್ಟು ವರ್ಷ ಈ ಮುಸಲ್ಮಾನ ವಿದ್ಯಾರ್ಥಿನಿಯರು ಹಿಜಾಬ್ ಧರಿಸದೆ ಶಿಕ್ಷಣವನ್ನು ಪಡೆಯುತ್ತಿದ್ದರು. ಈಗ ಮಾತ್ರ ಅದಕ್ಕೆ ಧಾರ್ಮಿಕ ಬಣ್ಣವನ್ನು ಏಕೆ ಹಚ್ಚಲಾಯಿತು ?” ಈ ವಿಷಯದಲ್ಲಿ ಪತ್ತೆಹಚ್ಚಿದಾಗ ಗಮನಕ್ಕೆ ಬಂದ ಅಂಶವೆಂದರೆ, ೨೦೨೨ ರಲ್ಲಿ ಆರಂಭವಾದ ಈ ಆಂದೋಲನದ ಸಂಹಿತೆಯನ್ನು ಅಕ್ಟೋಬರ ೨೦೨೧ ರಲ್ಲಿಯೆ ಬರೆಯಲಾಗಿತ್ತು.
೬. ‘ಪೊಪ್ಯುಲರ್ ಫ್ರಂಟ್ ಆಫ್ ಇಂಡಿಯಾ’ ಮತ್ತು ‘ಸೋಶಲ್ ಡೆಮೋಕ್ರಟಿಕ್ ಪಾರ್ಟಿ ಆಫ್ ಇಂಡಿಯಾ’ ಈ ಸಂಘಟನೆಯೂ ಷಡ್ಯಂತ್ರದಲ್ಲಿ ಭಾಗವಹಿಸಿದೆ
‘ಪೊಪ್ಯುಲರ್ ಫ್ರಂಟ್ ಆಫ್ ಇಂಡಿಯಾ’ ಈ ಸಂಘಟನೆಯ ಮೇಲೆ ದೆಹಲಿಯ ಶಾಹೀನ್‌ಬಾಗ್‌ನಲ್ಲಿ ಪೌರತ್ವ ಕಾನೂನಿಗೆ ವಿರೋಧಿಸಲು ಮಾಡಿದ ಆಂದೋಲನಕ್ಕೆ ಹಣವನ್ನು ಪೂರೈಸಿದ ಆರೋಪವಿದೆ. ದೆಹಲಿಯ ಗಲಭೆಯಲ್ಲಿಯೂ ಈ ಸಂಘಟನೆಯ ಕೈವಾಡವಿತ್ತು, ಎಂದು ‘ಎನ್.ಐ.ಎ. (ರಾಷ್ಟ್ರೀಯ ತನಿಖಾ ದಳ)’ ಯು ಸರ್ವೋಚ್ಚ ನ್ಯಾಯಾಲಯಕ್ಕೆ ಹೇಳಿದೆ. ಸದ್ಯ ಝಾರ್‌ಖಂಡದಲ್ಲಿ ಈ ಸಂಘಟನೆಗೆ ನಿರ್ಬಂಧವನ್ನು ಹೇರಲಾಗಿದ್ದು ಕೇಂದ್ರ ಸರಕಾರವೂ ಈ ವಿಷಯದಲ್ಲಿ ವಿಚಾರ ಮಾಡುತ್ತಿದೆ. ‘ಡೆಮೊಕ್ರಟಿಕ್ ಪಾರ್ಟಿ ಆಫ್ ಇಂಡಿಯಾ’ ಇದು ‘ಪೊಪ್ಯುಲರ್ ಫ್ರಂಟ್ ಆಫ್ ಇಂಡಿಯಾ’ದ ರಾಜಕೀಯ ಶಾಖೆಯಾಗಿದೆ. ಈಗ ಇವೆಲ್ಲವನ್ನೂ ತಾಳೆ ಹಚ್ಚಿ ನೋಡಿದರೆ ಶಾಹೀನ್‌ಬಾಗ್ ಆಂದೋಲನದಿಂದ ಇದರ ಪ್ರಾರಂಭವಾಗುತ್ತದೆ. ‘ಡೆಮೋಕ್ರಟಿಕ್ ಪಾರ್ಟಿ ಆಫ್ ಇಂಡಿಯಾ’ ಈ ಸಂಘಟನೆಯು ಕರ್ನಾಟಕದಲ್ಲಿ ಹಿಜಾಬ್‌ನ ವಿಷಯದಲ್ಲಿ ವಿದ್ಯಾರ್ಥಿನಿಯರನ್ನು ಉದ್ರೇಕಿಸುತ್ತಿದೆ. ಈ ರೀತಿಯಲ್ಲಿ ಕ್ರಮೇಣ ಈ ಆಂದೋಲನವು ಕರ್ನಾಟಕದಿಂದ ದೇಶದ ಎಲ್ಲೆಡೆ ಹರಡುತ್ತಿದೆ. ಈ ಸಮಸ್ಯೆಯನ್ನು ಕರ್ನಾಟಕದ ಶಾಲೆಯಲ್ಲಿಯೇ ಬಗೆಹರಿಸಬೇಕಾಗಿತ್ತು, ಹಾಗಾಗದೆ ಅದಕ್ಕೆ ಶಾಹೀನ್‌ಬಾಗ್‌ನಲ್ಲಿ ಆಂದೋಲನ ಮಾಡಲಾಯಿತು. ಇದರಿಂದ ಭಾರತವನ್ನು ವಿಭಜಿಸಲು ಸಾಧನವೆಂದು ಶಾಲೆಗಳನ್ನು ಉಪಯೋಗಿಸಲಾಗುತ್ತಿದೆ.
೭. ಹೆಣ್ಣುಮಕ್ಕಳ ಮಹಾವಿದ್ಯಾಲಯದಲ್ಲಿ ಮುಸಲ್ಮಾನ ವಿದ್ಯಾರ್ಥಿನಿಯರಿಂದ ಹಿಜಾಬ್‌ನ ಬೇಡಿಕೆ
ಮುಸಲ್ಮಾನ ವಿದ್ಯಾರ್ಥಿನಿಯರು ತರಗತಿಯಲ್ಲಿ ಹಿಜಾಬ್ ಧರಿಸುವ ಬೇಡಿಕೆಯನ್ನು ಮುಂದಿಟ್ಟಿದ್ದಾರೆ. ಅವರ ಹೇಳಿಕೆಗನುಸಾರ, ನಾವು ಹಿಜಾಬ್ ಧರಿಸದೇ ಹುಡುಗರ ಮುಂದೆ ಬರುವಹಾಗಿಲ್ಲ. ಮಹತ್ವದ ವಿಷಯವೆಂದರೆ, ಈ ವಿದ್ಯಾರ್ಥಿಗಳು ಕಲಿಯುತ್ತಿರುವ ಮಹಾವಿದ್ಯಾಲಯವು ಹೆಣ್ಣುಮಕ್ಕಳ ಮಹಾವಿದ್ಯಾಲಯವಾಗಿದೆ. ಇಲ್ಲಿ ಹುಡುಗರ ಸಂಬಂಧವೆಲ್ಲಿದೆ ? ಈ ಪ್ರಕರಣದ ಮೂಲಕ್ಕೆ ಹೋದಾಗ ತಿಳಿದ ಅಂಶವೆಂದರೆ, ಕರ್ನಾಟಕದಲ್ಲಿ ಸರಕಾರಿ ಶಾಲೆಗಳ ಅಧ್ಯಕ್ಷರು ಸ್ಥಳೀಯ ಶಾಸಕರಾಗಿರುತ್ತಾರೆ. ಉಡುಪಿಯ ಇಂದಿನ ಶಾಸಕರು ಭಾಜಪದವರಾಗಿದ್ದಾರೆ ಹಾಗೂ ರಾಜ್ಯದಲ್ಲಿಯೂ ಭಾಜಪದ ಸರಕಾರವಿದೆ. ಆದ್ದರಿಂದ ‘ಪೊಪ್ಯುಲರ್ ಫ್ರಂಟ್ ಆಫ್ ಇಂಡಿಯಾ’ದ ಶಾಖೆಯಾದ ‘ಸೋಶಲ್ ಡೆಮೋಕ್ರಟಿಕ್ ಪಾರ್ಟಿ ಆಫ್ ಇಂಡಿಯಾ’ ಮತ್ತು ‘ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ’ ಸಂಘಟನೆಗಳು ಈ ವಿಷಯವನ್ನು ಎತ್ತಿಹಿಡಿಯಲು ಪ್ರಾರಂಭಿಸಿವೆ.
೮. ಹಿಜಾಬ್‌ನ ವಿಷಯದಲ್ಲಿ ಜಿಹಾದ್‌ನ ವಿಷವನ್ನು ಯಾರು ಬಿತ್ತಿದರು ?
ಕೇರಳದಲ್ಲಿ ‘ಪೊಪ್ಯುಲರ್ ಫ್ರಂಟ್ ಆಫ್ ಇಂಡಿಯಾ’ ಮತ್ತು ‘ಸೋಶಲ್ ಡೆಮೋಕ್ರಟಿಕ್ ಪಾರ್ಟಿ ಆಫ್ ಇಂಡಿಯಾ’ ಈ ಸಂಘಟನೆಗಳ ಪ್ರಭಾವವಿದೆ. ಕೇರಳದಿಂದ ಉಡುಪಿ ಕೇವಲ ೧೦೦ ಕಿ.ಮೀ. ಅಂತರದಲ್ಲಿದೆ. ಉಡುಪಿಯಲ್ಲಿ ಅಲ್ಪಸಂಖ್ಯಾತರ ಸಂಖ್ಯೆ ಶೇ. ೧೦ ರಷ್ಟಿದೆ. ಅಲ್ಲಿನ ಮಹಾವಿದ್ಯಾಲಯಗಳಲ್ಲಿ ಕಲಿಯುವ ಈ ವಿದ್ಯಾರ್ಥಿಗಳು ಕರ್ನಾಟಕದ ಚುನಾವಣೆಯ ಸಮಯದಲ್ಲಿ ಹೊಸ ಮತದಾರರೆಂದು ಭಾಗವಹಿಸುವರು. ಆದ್ದರಿಂದ ಹಿಜಾಬ್‌ನ ವಿಷಯವನ್ನು ಬೆಂಕಿಯಂತೆ ಎಲ್ಲೆಡೆ ಹರಡಿಸಲಾಗುತ್ತಿದೆ. ‘ಅದರ ಹಿಂದೆ ಷಡ್ಯಂತ್ರವಿದೆ’, ಎಂದು ಉಡುಪಿಯ ಶಾಸಕರು ಸಂಶಯಪಟ್ಟಿದ್ದಾರೆ. ಮನೆಯಲ್ಲಿ ಪಾಲಕರು ಒತ್ತಡ ಹೇರದೇ ಮಹಾವಿದ್ಯಾಲಯದಲ್ಲಿ ಕಲಿಯುವ ವಿದ್ಯಾರ್ಥಿಗಳು ಹಿಜಾಬ್ ಧರಿಸುವ ನಿರ್ಣಯವನ್ನು ಮಾಡಲು ಸಾಧ್ಯವಿಲ್ಲ. ಹೇಗೆ ಮಹಾವಿದ್ಯಾಲಯದಲ್ಲಿ ಈ ವಿಷಯವನ್ನು ಹಬ್ಬಿಸಲಾಯಿತೋ, ಇದರಿಂದ ವಿಶಿಷ್ಟ ಉದ್ದೇಶದಿಂದಲೇ ಇದೆಲ್ಲ ನಡೆಸಲಾಗುತ್ತಿದೆ, ಎಂಬುದು ಸ್ಪಷ್ಟವಾಗುತ್ತದೆ. (ಆಧಾರ : ‘ಡಿ.ಎನ್.ಎ ಝೀ ನ್ಯೂಸ್)