ತಜಕಿಸ್ತಾನ್: ‘ವಿದೇಶಿ ಇಸ್ಲಾಮಿಕ್ ಪ್ರಭಾವ’ ತಡೆಗೆ ಕ್ರಮ; ಸಾಂಪ್ರದಾಯಿಕ ಉಡುಪುಗಳಿಗೆ ಪ್ರೋತ್ಸಾಹ; ಹಿಜಾಬ್ ಮತ್ತು ಗಡ್ಡಕ್ಕೆ ನಿಷೇಧ

ದುಶಾಂಗ್ಬೆ (ತಜಕಿಸ್ತಾನ್): ಮಧ್ಯ ಏಷ್ಯಾದ ಮುಸ್ಲಿಂ ಬಾಹುಳ್ಯದ ದೇಶ ತಜಕಿಸ್ತಾನದಲ್ಲಿ ಮಹಿಳೆಯರ ಉಡುಪುಗಳ ಕುರಿತು ಶೀಘ್ರದಲ್ಲೇ ಹೊಸ ಮಾರ್ಗಸೂಚಿಗಳನ್ನು ಹೊರಡಿಸಲಾಗುವುದು. ಇದರಲ್ಲಿ ಮಹಿಳೆಯರು ಯಾವ ವಯಸ್ಸಿನಲ್ಲಿ, ಯಾವ ಸಂದರ್ಭಗಳಲ್ಲಿ ಮತ್ತು ಎಲ್ಲಿ ಯಾವ ಬಟ್ಟೆಗಳನ್ನು ಧರಿಸಬೇಕು ಎಂಬುದರ ಕುರಿತು ಶಿಫಾರಸುಗಳಿರಲಿವೆ. ಇತ್ತೀಚಿನ ವರ್ಷಗಳಲ್ಲಿ, ತಜಕಿಸ್ತಾನ್ ಸರಕಾರವು ‘ಸಾಂಪ್ರದಾಯಿಕ’ ತಾಜಿಕ್ ಉಡುಪುಗಳನ್ನು ಉತ್ತೇಜಿಸಿದೆ ಮತ್ತು ರಾಷ್ಟ್ರೀಯ ಸಂಸ್ಕೃತಿಗೆ ವಿರುದ್ಧವೆಂದು ಪರಿಗಣಿಸಲಾದ ಉಡುಪುಗಳನ್ನು ನಿಷೇಧಿಸಿದೆ. ಅಲ್ಲದೆ, ಸರಕಾರ ‘ವಿದೇಶಿ ಇಸ್ಲಾಮಿಕ್ ಪ್ರಭಾವ’ವನ್ನು ತೊಡೆದುಹಾಕಲು ಪ್ರಯತ್ನಿಸುತ್ತಿದೆ.

1. 1992 ರಿಂದ ಅಧಿಕಾರದಲ್ಲಿರುವ ಅಧ್ಯಕ್ಷ ಎಮೋಮಾಲಿ ರಹಮಾನ್, ಈ ಹಿಂದೆ ಇಸ್ಲಾಮಿಕ್ ಹಿಜಾಬ್ ಸಮಾಜಕ್ಕೆ ಒಂದು ಸಮಸ್ಯೆ ಎಂದು ಬಣ್ಣಿಸಿದ್ದರು. ಇದನ್ನು ದೇಶದಲ್ಲಿ ನಿಷೇಧಿಸಲಾಗಿದೆ. ಅವರು ಮಹಿಳೆಯರು ‘ತಾಜಿಕ್ ಶೈಲಿ’ಯಲ್ಲಿ ಉಡುಗೆ ತೊಡಬೇಕೆಂದು ಒತ್ತಾಯಿಸಿದ್ದಾರೆ. ಸರಕಾರವು ದೇಶದಲ್ಲಿ ಉದ್ದ ಗಡ್ಡ ಬಿಡುವುದನ್ನು ಅನೌಪಚಾರಿಕವಾಗಿ ನಿಷೇಧಿಸಿದೆ.

2. 2015 ರ ಆರಂಭದಲ್ಲಿ, ಅನೇಕ ತಾಜಿಕ್ ನಾಗರಿಕರು ಭಯೋತ್ಪಾದಕ ಸಂಘಟನೆ ‘ಇಸ್ಲಾಮಿಕ್ ಸ್ಟೇಟ್’ ಅನ್ನು ಸೇರಿದ್ದರು. ಈ ಘಟನೆಗಳನ್ನು ಗಮನದಲ್ಲಿಟ್ಟುಕೊಂಡು, ತಜಕಿಸ್ತಾನ್ ಸರಕಾರ ಈ ನಿರ್ಧಾರವನ್ನು ತೆಗೆದುಕೊಂಡಿದೆ.

3. ತಜಕಿಸ್ತಾನದ ಜನಸಂಖ್ಯೆಯ ಸುಮಾರು ಶೇ. 98 ರಷ್ಟು ಜನರು ಇಸ್ಲಾಂ ಧರ್ಮವನ್ನು ಪಾಲಿಸುತ್ತಾರೆ. ಇಷ್ಟೊಂದು ದೊಡ್ಡ ಮುಸ್ಲಿಂ ಜನಸಂಖ್ಯೆಯನ್ನು ಹೊಂದಿದ್ದರೂ, ದೇಶದ ಆಡಳಿತವು ಔಪಚಾರಿಕವಾಗಿ ಜಾತ್ಯತೀತ ಸರಕಾರವೆಂದು ಕಾರ್ಯನಿರ್ವಹಿಸುತ್ತದೆ.

ಸಂಪಾದಕೀಯ ನಿಲುವು

ತಜಕಿಸ್ತಾನದಂತಹ ಇಸ್ಲಾಮಿಕ್ ರಾಷ್ಟ್ರಗಳು ಹಿಜಾಬ್ ಮತ್ತು ಗಡ್ಡದಂತಹ ವಿಚಾರಗಳಿಗೆ ಪ್ರೋತ್ಸಾಹ ನೀಡದೆ ಸ್ಥಳೀಯ ಸಂಪ್ರದಾಯಗಳಿಗೆ ಮಹತ್ವ ನೀಡುತ್ತಿವೆ. ಭಾರತದ ಮುಸ್ಲಿಮರು ಭಾರತೀಯ ಸಂಪ್ರದಾಯಗಳನ್ನು ಅಳವಡಿಸಿಕೊಳ್ಳದೆ ಅರೇಬಿಕ್ ಸಂಪ್ರದಾಯಗಳನ್ನು ಅನುಸರಿಸಲು ಪ್ರಯತ್ನಿಸುವುದು ಖೇದಕರ!