ಕಾನಪುರ ಇಲ್ಲಿಯ ವಿವಾಹಿತ ಹಿಂದೂ ಮಹಿಳೆಗೆ ಮತಾಂಧ ಪ್ರೆಮಿಯಿಂದ ಹತ್ಯೆ !

ಕಾನಪುರ (ಉತ್ತರಪ್ರದೇಶ) – ಇಲ್ಲಿಯ ರತನಪುರ ಕಾಲೋನಿಯಲ್ಲಿ ೫ ದಿನಗಳ ಹಿಂದೆ ನಾಪತ್ತೆಯಾಗಿರುವ ಗೀತಾ ದೇವಿ ಎಂಬ ವಿವಾಹಿತ ಮಹಿಳೆಯ ಹತ್ಯೆಯನ್ನು ಆಕೆಯ ಪ್ರಿಯಕರ ಮುಖ್ತಾರ ಎಂಬಾತನು ಮಾಡಿರುವುದು ಬೆಳಕಿಗೆ ಬಂದಿದೆ. ಗೀತಾ ದೇವಿ ಇವರ ಮೃತದೇಹ ಭಾವುಪೂರ ಮೈಥಾ ಹತ್ತಿರದ ಚರಂಡಿಯಲ್ಲಿ ಎಸೆದಿರುವ ಬಗ್ಗೆ ಮುಖ್ತಾರ್ ಇವನು ವಶಕ್ಕೆ ಪಡೆದ ನಂತರ ಈ ಮಾಹಿತಿ ನೀಡಿದ. ಗೀತಾ ದೇವಿಯ ಪತಿ ಕೇಂದ್ರ ರಿಸರ್ವ್ ಪೊಲೀಸ್ ದಳದಲ್ಲಿ ಇದ್ದಾರೆ. ಮುಖ್ತಾರ ಗೀತಾ ದೇವಿಯ ತಾಯಿಯ ಊರಿನವನಾಗಿದ್ದ. ಇವರಿಬ್ಬರ ನಡುವೆ ವಿವಾಹ ಮೊದಲಿನಿಂದಲೂ ಪ್ರೇಮ ಸಂಬಂಧವಿತ್ತು. ಪತಿ ಮನೆಯಲ್ಲಿ ಇರದೆ ಇರುವಾಗ ಗೀತಾ ದೇವಿಯ ಮನೆಗೆ ಬರುತ್ತಿದ್ದನು. ‘ಗೀತಾ ದೇವಿ ಬೇರೆ ಯಾರ ಜೊತೆಗೆ ಸತತವಾಗಿ ಮಾತನಾಡುತ್ತಿರುವುದುರ ಸಿಟ್ಟಿನಿಂದ ನಾನು ಆಕೆಯ ಕತ್ತು ಹಿಸುಕಿ ಸಾಯಿಸಿದ್ದೇನೆ’, ಎಂದು ಮುಖ್ತಾರ್ ಒಪ್ಪಿಕೊಂಡಿದ್ದಾನೆ. ಈ ಹತ್ಯೆಯ ನಂತರ ಅವನಿಗೆ ಸಹಾಯ ಮಾಡಿರುವ ಬೇರೆ ಇಬ್ಬರನ್ನು ಪೊಲೀಸರು ಹುಡುಕುತ್ತಿದ್ದಾರೆ.