ಭಾರತವನ್ನು ‘ಉರ್ದುಸ್ತಾನ್ ಮಾಡುವ ಪರೀಕ್ಷೆ !

‘ಸಿಕ್ಖ್ ಫಾರ್ ಜಸ್ಟಿಸ್ನ ನಾಯಕ ಗುರುಪತವಂತ್ ಸಿಂಗ್ ಪನ್ನು

ಕರ್ನಾಟಕ ರಾಜ್ಯದಲ್ಲಿ ಹಿಜಾಬ್ ವಿವಾದದ ಮೂಲಕ ಭಾರತವಿರೋಧಿ ಶಕ್ತಿಗಳು ದೇಶದಲ್ಲಿ ಅರಾಜಕತೆಯನ್ನು ಸೃಷ್ಟಿಸಲು ಪ್ರಯತ್ನಿಸುತ್ತಿವೆ. ‘ಪಾಕಿಸ್ತಾನದ ಗುಪ್ತಚರ ಇಲಾಖೆಯು ಖಲಿಸ್ತಾನವಾದಿಗಳ ಮೂಲಕ ಹಿಜಾಬ್ ಪ್ರಕರಣದಿಂದ ಭಾರತೀಯ ಮತಾಂಧರನ್ನು ಪ್ರಚೋದಿಸಲು ಪ್ರಯತ್ನಿಸುತ್ತಿದೆ, ಎಂದು ಭಾರತೀಯ ಗುಪ್ತಚರ ವ್ಯವಸ್ಥೆ ತಿಳಿಸಿದೆ. ಖಲಿಸ್ತಾನವಾದಿ ಸಂಘಟನೆಯ ‘ಸಿಕ್ಖ್ ಫಾರ್ ಜಸ್ಟಿಸ್ನ ನಾಯಕ ಗುರುಪತವಂತ್ ಸಿಂಗ್ ಪನ್ನು ಈತ ಸಾಮಾಜಿಕ ಮಾಧ್ಯಮದಲ್ಲಿ ಈ ಬಗ್ಗೆ ವೀಡಿಯೊವನ್ನು ಪೋಸ್ಟ್ ಮಾಡಿದ್ದಾನೆ. ಅದರಲ್ಲಿ ಭಾರತವನ್ನು ‘ಉರ್ದುಸ್ತಾನ್ ಮಾಡುವಂತೆ ಬಹಿರಂಗವಾಗಿ ಕರೆ ನೀಡಿದ್ದಾನೆ. ಈ ವೀಡಿಯೋದೊಂದಿಗೆ ಗುರುಪತವಂತ್‌ನು ಹಿಜಾಬ್ ಧರಿಸಿ ‘ಅಲ್ಲಾ ಹು ಅಕ್ಬರ್ ಎಂದು ಘೋಷಣೆ ಕೂಗುತ್ತಿರುವ ಕರ್ನಾಟಕದ ಮುಸ್ಕಾನ್ ಖಾನ್ ಎಂಬ ವಿದ್ಯಾರ್ಥಿನಿಯ ಛಾಯಾಚಿತ್ರಗಳನ್ನು ಸಹ ಪ್ರಕಟಿಸಿದ್ದಾನೆ. ದೆಹಲಿ, ರಾಜಸ್ಥಾನ, ಉತ್ತರಪ್ರದೇಶ, ಬಿಹಾರ, ಬಂಗಾಳ ಇತ್ಯಾದಿ ರಾಜ್ಯಗಳಲ್ಲಿ ‘ಹಿಜಾಬ್ ಜನಾಭಿಪ್ರಾಯ ಎಜೆನ್ಸಿಯನ್ನು ಸ್ಥಾಪಿಸಲಾಗಿದ್ದು ಭಾರತೀಯ ಮುಸಲ್ಮಾನರ ಅಭಿಪ್ರಾಯವನ್ನು ಸಂಗ್ರಹ ಆರಂಭಿಸಿದೆ. ಭಾರತೀಯ ಗುಪ್ತಚರ ವ್ಯವಸ್ಥೆಯು ಈ ಬಗ್ಗೆ ಎಚ್ಚರಿಕೆಯ ಸೂಚನೆಯನ್ನು ನೀಡಿದೆ. ಪಾಕಿಸ್ತಾನದ ಸಂಕೇತದಂತೆ ನಡೆದುಕೊಳ್ಳುವ ಖಲಿಸ್ತಾನಿಗಳು ‘ಉರ್ದುಸ್ತಾನನ್ನು ಬಹಿರಂಗವಾಗಿ ಘೋಷಿಸುವುದು, ಇದು ಖಂಡಿತವಾಗಿಯೂ ಇಸ್ಲಾಮಿಕ್ ಮೂಲಭೂತವಾದಿಗಳ ಅಜೆಂಡಾ ಆಗಿರಬಹುದು ಮತ್ತು ಅದನ್ನು ಹಿಜಾಬ್ ಮೂಲಕ ಕಾರ್ಯರೂಪಕ್ಕೆ ತರುವ ಪ್ರಯತ್ನ ನಡೆಯುತ್ತಿರಬಹುದು. ಭಾರತವನ್ನು ಇಸ್ಲಾಮಿಕ್ ರಾಷ್ಟ್ರವನ್ನಾಗಿ ಮಾಡುವ ವ್ಯವಸ್ಥಿತ ಪ್ರಯತ್ನವು ನಡೆಯುತ್ತಿದ್ದು ದೇಶದ ಮತಾಂಧರನ್ನು ಇದರಲ್ಲಿ ಸೇರಿಸಿಕೊಳ್ಳುವುದರ ಪ್ರಯತ್ನವೂ ನಡೆಯುತ್ತಿದೆ.

ಭಾರತದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಹಿಜಾಬ್ ಮೇಲೆ ಯಾವುದೇ ನಿಷೇಧವಿಲ್ಲ. ಹೀಗಿರುವಾಗ ಶೈಕ್ಷಣಿಕ ಸ್ಥಳಗಳಲ್ಲಿ ಹಿಜಾಬ್ ಧರಿಸುವ ಅಟ್ಟಹಾಸ ಮಾಡಿ ಅದನ್ನು ಉದ್ದೇಶಪೂರ್ವಕವಾಗಿ ಪ್ರಪೊಗಂಡಾ ಮಾಡಲಾಗುತ್ತಿದೆ. ಮುಸಲ್ಮಾನರು ಅಲ್ಪಸಂಖ್ಯಾತ ರಾಗಿದ್ದಾಗ ಭಾರತದಲ್ಲಿ ಇಂತಹ ಪರಿಸ್ಥಿತಿ ಇದ್ದರೆ, ಭವಿಷ್ಯದಲ್ಲಿ ಈ ಅಲ್ಪಸಂಖ್ಯಾತರು ಬಹುಸಂಖ್ಯಾತರಾದರೆ ಅವರು ನ್ಯಾಯಾಲಯದ ತೀರ್ಪಿಗಾಗಿ ಕಾಯುತ್ತಾರೆಯೇ ? ಈ ಅಪಾಯವನ್ನು ಅರಿತು, ಫ್ರಾನ್ಸ್, ಬೆಲ್ಜಿಯಂ, ನೆದರ್ಲ್ಯಾಂಡ್, ಇಟಲಿ, ಜರ್ಮನಿ, ಆಸ್ಟ್ರಿಯಾ, ನಾರ್ವೆ, ಸ್ಪೇನ್, ಬ್ರಿಟನ್, ಆಫ್ರಿಕಾ, ರಷ್ಯಾ ಮತ್ತು ವಿಶ್ವದ ಇತರ ಹಲವು ದೇಶಗಳು ಬುರ್ಖಾ ಧರಿಸುವುದನ್ನು ನಿಷೇಧಿಸಿವೆ, ಜೊತೆಗೆ ಸಾರ್ವಜನಿಕ ಸ್ಥಳಗಳಲ್ಲಿ ಮುಖವನ್ನು ಮುಚ್ಚಿಕೊಳ್ಳುವು ದನ್ನು ನಿಷೇಧಿಸಿವೆ. ಬೆಲ್ಜಿಯಂನಲ್ಲಿ ಬುರ್ಖಾ ಮತ್ತು ಹಿಜಾಬ್ ಅನ್ನು ನಿಷೇಧಿಸುತ್ತಾ ಇದು ಮಾನವಹಕ್ಕುಗಳ ಉಲ್ಲಂಘನೆ ಯಾಗುತ್ತಿದೆ ಎಂದು ಮತಾಂಧರು ಕೂಗಾಡಿದರು. ಸಮಸ್ಯೆ ಯುರೋಪಿನ ಮಾನವ ಹಕ್ಕುಗಳ ನ್ಯಾಯಾಲಯಕ್ಕೆ ಹೋದಾಗ, ಆ ಸಮಯದಲ್ಲಿ ಬುರ್ಖಾ ಅಥವಾ ಹಿಜಾಬ್ ಇದರ ಮೇಲೆ ನಿಷೇಧ ಹೇರಿರುವುದರಿಂದ ಯಾವುದೇ ರೀತಿಯ ಮಾನವ ಹಕ್ಕುಗಳ ಉಲ್ಲಂಘನೆ ಆಗುತ್ತಿಲ್ಲ ಎಂದು ಮಾನವ ಹಕ್ಕುಗಳ ಆಯೋಗವು ಸ್ಪಷ್ಟಪಡಿಸುತ್ತಾ ಸರಕಾರದ ನಿರ್ಧಾರವನ್ನು ಬೆಂಬಲಿಸಿತು, ಆ ದೇಶಗಳ ಅದೃಷ್ಟವೆಂದರೆ ಅಲ್ಲಿ ಭಾರತದಂತೆ ಪ್ರಗತಿಪರರ ತಂಡ ಅಥವಾ ದೇಶದ ಹಿತಾಸಕ್ತಿಯೊಂದಿಗೆ ಒಪ್ಪಂದ ಮಾಡಿಕೊಳ್ಳುವ ರಾಜಕೀಯ ಪಕ್ಷಗಳಿಲ್ಲ.

ಮತಾಂತರದಿಂದ ರಾಷ್ಟ್ರಾಂತರವಾಗಿರುವ ಉದಾಹರಣೆ 

ಭಾರತವು ಹಿಂದೂ ಬಹುಸಂಖ್ಯಾತವಿರುವುದರಿಂದಲೇ ಪ್ರಜಾಪ್ರಭುತ್ವವಾಗಿದೆ ಎಂಬುದನ್ನು ಪ್ರಗತಿಪರರು ಅರಿತುಕೊಳ್ಳಬೇಕು. ಭಾರತ ಇಸ್ಲಾಂನ ಪರವಾದಾಗ ಅದು ‘ಉರ್ದುಸ್ತಾನ್ ಆಗುತ್ತದೆ ಎಂಬುದು ಗುರುಪತವಂತ್ ಸಿಂಗ್ ಇವನಿಗೆ ಚೆನ್ನಾಗಿ ತಿಳಿದಿದೆ. ಅದಕ್ಕಾಗಿಯೇ ಆತನು ಹಿಜಾಬ್ ಬಗ್ಗೆ ಜನಾಭಿಪ್ರಾಯವನ್ನು ಸಂಗ್ರಹಿಸುವಾಗ ಭಾರತವನ್ನು ‘ಉರ್ದುಸ್ತಾನ್ ಎಂದು ಘೋಷಿಸಿದ. ನಾಳೆ ಅಲ್ಪಸಂಖ್ಯಾತರು ಬಹುಸಂಖ್ಯಾತರಾದರೆ, ಅವರು ಭಾರತದ ಸಂವಿಧಾನವನ್ನು ಒಪ್ಪಿಕೊಳ್ಳುತ್ತಾರೆಯೇ ? ಅವರು ತ್ರಿವರ್ಣ ಧ್ವಜವನ್ನು ರಾಷ್ಟ್ರಧ್ವಜ ಎಂದು ವಂದಿಸುತ್ತಾರೆಯೇ ? ಭಾರತದ ಜಾತ್ಯತೀತತೆ ಉಳಿಯುವುದೇ ? ಭಾರತವು ಇಸ್ಲಾಮಿಕ್ ಬಹುಸಂಖ್ಯಾತವಾದರೆ, ಅದು ಕುರಾನ್ ಅನ್ನು ಅನುಸರಿಸುತ್ತದೆ, ನಂತರ ಅದು ಉರ್ದುಸ್ತಾನ ಆಗಲಿದೆ, ಎಂದು ಗುರುಪತವಂತನಿಗೆ ತಿಳಿದಿದೆ. ‘ಮತಾಂತರವೇ ರಾಷ್ಟ್ರಾಂತರ ಎಂಬ ಸ್ವಾತಂತ್ರ್ಯವೀರ ಸಾವರಕರ ಅವರ ಸಿದ್ಧಾಂತಕ್ಕೆ ಇದೊಂದು ಉದಾಹರಣೆಯಾಗಿದೆ.

ಮತಕ್ಕಾಗಿ ಮೂಲಭೂತವಾದಿಗಳನ್ನು ಉತ್ತೇಜಿಸುತ್ತಿರುವ ಕಾಂಗ್ರೆಸ್ಸಿಗರು !

ತುರ್ಕಸ್ತಾನದ ಖಲೀಫರ ಹುದ್ದೆ ರದ್ದಾಗಬಾರದೆಂದು ಗಾಂಧೀಜಿಯವರು ಹಿಂದೂಗಳನ್ನು ಖಿಲಾಫತ್ ಚಳುವಳಿಯ ಬಲೆಯಲ್ಲಿ ಹೆಣೆದಿದ್ದರು. ಶಹಬಾನೊ ಜೀವನಾಂಶ ಪ್ರಕರಣದಲ್ಲಿ, ಜೀವನಾಂಶ ನೀಡುವ ಪರವಾಗಿ ಸರ್ವೋಚ್ಚ ನ್ಯಾಯಾಲಯವು ನೀಡಿದ ತೀರ್ಪನ್ನು ಆಗಿನ ಪ್ರಧಾನಿ ರಾಜೀವ ಗಾಂಧಿ ಕಾನೂನನ್ನು ರೂಪಿಸಿ ಆ ನಿರ್ಧಾರವನ್ನೇ ಬದಲಾಯಿಸಿದರು. ಅಲ್ಪಸಂಖ್ಯಾತರ ಓಲೈಕೆಗಾಗಿ ದೇಶದ ಹಿತಾಸಕ್ತಿಯನ್ನು ಬಲಿ ಕೊಡುವುದು ಕಾಂಗ್ರೆಸ್‌ನ ಹಳೆಯ ಸಂಪ್ರದಾಯವಾಗಿದೆ. ಈಗಲೂ ಮಹಾವಿದ್ಯಾಲಯಗಳಲ್ಲಿ ಹಿಜಾಬ್‌ನ ಅಟ್ಟಹಾಸದ ಆಂದೋಲನವನ್ನು ಬೆಂಬಲಿಸುವ ಮೂಲಕ ಕಾಂಗ್ರೆಸ್ ದೇಶದ ಹಿತಾಸಕ್ತಿಗೆ ಕುತ್ತು ತರುತ್ತಿದೆ. ‘ಎಂ.ಐ.ಎಂ. ಪಕ್ಷದ ಮುಖ್ಯಸ್ಥ ಸಂಸದ ಅಸಾದುದ್ದೀನ್ ಓವೈಸಿ ಅವರು ‘ಭವಿಷ್ಯದಲ್ಲಿ ಹಿಜಾಬಿ ಜಿಲ್ಲಾಧಿಕಾರಿ, ಮುಖ್ಯಮಂತ್ರಿ ಮತ್ತು ಪ್ರಧಾನಮಂತ್ರಿಯಾಗುತ್ತಾರೆ ಎಂದು ಹೇಳಿಕೆಯ ವೀಡಿಯೊವನ್ನು ಟ್ವೀಟ್ ಮಾಡಿದ್ದಾರೆ, ಇದರಿಂದ ಮಹಾವಿದ್ಯಾಲಯಗಳಲ್ಲಿ ಮಾತ್ರವಲ್ಲದೆ ಭವಿಷ್ಯದ ಸರಕಾರಿ ಉದ್ಯೋಗಗಳಲ್ಲಿಯೂ ಹಿಜಾಬ್ ಧರಿಸುತ್ತಾರೆ, ಎಂದು ಸುಳಿವು ನೀಡಿದ್ದಾರೆ. ಅಂದರೆ ಇದು ಒಂದು ರೀತಿಯಲ್ಲಿ ಭಾರತ ವನ್ನು ಇಸ್ಲಾಮಿಕ್ ರಾಷ್ಟ್ರ ಮಾಡುವ ಬಗ್ಗೆ ಪರೋಕ್ಷವಾಗಿ ನೀಡಿರುವ ಎಚ್ಚರಿಕೆಯಾಗಿದೆ. ಮಾತೃಭೂಮಿಗೆ ವಂದಿಸಲು ಕೂಡ ನಿರಾಕರಿಸುವ ಇಸ್ಲಾಮಿಕ್ ಮೂಲಭೂತವಾದಿಗಳು ಭವಿಷ್ಯದಲ್ಲಿ ಭಾರತದಲ್ಲಿ ಶರಿಯಾವನ್ನು ಜಾರಿಗೆ ತರಲು ಒತ್ತಾಯಿಸಬಹುದು.

ಹಿಜಾಬ್‌ಗಾಗಿ ಆಂದೋಲನ ನಡೆಸುತ್ತಿರುವ ಕಾಂಗ್ರೆಸ್ಸಿಗರು ಈ ಇಸ್ಲಾಮಿಕ್ ಮೂಲಭೂತವಾದಿಗಳಿಗೇ ಪ್ರೋತ್ಸಾಹ ನೀಡುತ್ತಿದ್ದಾರೆ. ಈ ಆಂದೋಲನದಲ್ಲಿ ಕಾಂಗ್ರೆಸ್ ಜೊತೆಗೆ ಪ್ರಗತಿಪರ, ಎಡಪಂಥೀಯರು ಸಹ ಸೇರಿಕೊಂಡಿದ್ದಾರೆ; ಆದರೆ ಭಾರತದ ಹಲವು ಕಾನ್ವೆಂಟ್ ಶಾಲೆಗಳಲ್ಲಿ ಹಿಂದೂ ಹೆಣ್ಣುಮಕ್ಕಳಿಗೆ ಕುಂಕುಮ ಹಚ್ಚಿಕೊಳ್ಳುವುದನ್ನು ನಿಷೇಧಿಸಲಾಗಿದೆ, ಇದರ ವಿರುದ್ಧ ಯಾರೂ ಧ್ವನಿ ಎತ್ತಲಿಲ್ಲ. ಹಿಜಾಬ್‌ಗಾಗಿ ‘ಫತ್ವಾ ಜಾರಿಗೊಳಿಸಲಾಗುತ್ತದೆ; ಆದರೆ, ಹಣೆಗೆ ಕುಂಕುಮವನ್ನು ಹಚ್ಚಿಕೊಳ್ಳಲು ಅನುಮತಿ ನೀಡದಿದ್ದರೂ ಹಿಂದೂ ಪೋಷಕರು ತಮ್ಮ ಮಕ್ಕಳನ್ನು ‘ಕಾನ್ವೆಂಟ್ಗಳಿಗೆ ಕಳುಹಿಸುತ್ತಾರೆ. ಹಿಂದೂಗಳು ಸ್ವಧರ್ಮದ ಬಗ್ಗೆ ಇಷ್ಟೊಂದು ನಿರಾಸಕ್ತಿ ತೋರಿದರೆ ಓವೈಸಿಯ ಪ್ರಕಾರ ಹಿಜಾಬಿ ಪ್ರಧಾನಿಯಾದರೆ ಹಿಂದೂ ಹೆಣ್ಣುಮಕ್ಕಳೂ ಹಿಜಾಬ್ ಧರಿಸಬೇಕಾಗುವುದು ಖಚಿತ ! ಆದ್ದರಿಂದ ಹಿಂದೂಗಳು ತಮ್ಮ ಅಸ್ತಿತ್ವಕ್ಕಾಗಿಯಾದರೂ ‘ಹಿಂದೂ ರಾಷ್ಟ್ರ ಸ್ಥಾಪನೆಗೆ ಕೊಡುಗೆ ನೀಡುವುದು ಅನಿವಾರ್ಯವಾಗಿದೆ.