ನವ ದೆಹಲಿ – ಕುತುಬ್ ಮಿನಾರ ಪ್ರದೇಶದಲ್ಲಿನ ೨೭ ಹಿಂದೂ ಮತ್ತು ಜೈನ ಬಸದಿಗಳನ್ನೂ ಕೆಡವಿ ಅಲ್ಲಿ ನಿರ್ಮಿಸಿರುವ ‘ಕುವ್ವತ್-ಉಲ್-ಇಸ್ಲಾಮ್’ ಈ ಮಸೀದಿಯ ವಿರುದ್ಧ ನೀಡಿರುವ ಅರ್ಜಿಗೆ ಇಲ್ಲಿ ಸಾಕೇತ ಜಿಲ್ಲೆಯ ನ್ಯಾಯಾಲಯದಲ್ಲಿ ಕೇಂದ್ರ ಸರಕಾರದ ಸಂಸ್ಕೃತಿ ಸಚಿವಾಲಯ ಮತ್ತು ಪುರಾತತ್ವ ಇಲಾಖೆ ದೆಹಲಿ ಕ್ಷೇತ್ರದ ಮಹಾಸಂಚಾಲಕರು ಇವರಿಗೆ ನೋಟಿಸ್ ಕಳಿಸಿ ಇದಕ್ಕೆ ಉತ್ತರಿಸಬೇಕೆಂದು ಹೇಳಿದೆ. ಈ ಅರ್ಜಿ ಭಗವಾನ ವಿಷ್ಣು ಮತ್ತು ಜೈನ ದೇವತೆ ಇವರ ವತಿಯಿಂದ ದಾಖಲಿಸಲಾಗಿದೆ.
Qutub Minar परिसर में 27 मंदिरों के होने का दावा, कोर्ट ने सरकार से मांगा जवाब, जानें पूरी मामला#QutubMinar #Delhi #Temples https://t.co/BLQWLdgBow
— ABP News (@ABPNews) February 23, 2022
ನ್ಯಾಯಾಲಯದ ವಿಚಾರಣೆಗೆ ಸಮಯದಲ್ಲಿ ಭಗವಾನ ವಿಷ್ಣು ಇವರ ವತಿಯಿಂದ ನ್ಯಾಯವಾದಿ ವಿಷ್ಣುಶಂಕರ ಜೈನ್ ಇವರು ಯುಕ್ತಿವಾದವನ್ನು ಮಂಡಿಸಿದರು. ಅವರು, ಮಂದಿರದ ವಿಷಯವಾಗಿ ಯಾವುದೇ ವಿವಾದವಿರಲಿಲ್ಲ. ಅದನ್ನು ಕೆಡವಲಾಗಿದೆ. ಆದ್ದರಿಂದ ಇದನ್ನು ಸಾಬೀತು ಪಡಿಸುವ ಯಾವುದೇ ಅವಶ್ಯಕತೆ ಇಲ್ಲ. ಕಳೆದ ೮೦೦ ವರ್ಷಗಳಿಂದ ನಾವು ಪೀಡಿತರಾಗಿದ್ದೇವೆ. ಈಗ ಪೂಜೆಯ ಅಧಿಕಾರ ಕೇಳುತ್ತಿದ್ದೇವೆ, ಅದು ನಮ್ಮ ಮೂಲಭೂತ ಅಧಿಕಾರವಾಗಿದೆ. ಪುರಾತತ್ವ ಇಲಾಖೆ ಕಾಯಿದೆ ೧೯೫೮ರ ಕಲಂ ೧೮ ರ ಪ್ರಕಾರ ಸಂರಕ್ಷಿತ ಸ್ಮಾರಕಗಳಲ್ಲಿ ಪೂಜೆ ಮಾಡುವ ಅಧಿಕಾರ ನೀಡಬಹುದು ಎಂದು ಹೇಳಿದರು.