ಉತ್ತರಪ್ರದೇಶದಲ್ಲಿ ಭಯತ್ಪಾದಕ ಆಕ್ರಮಣಕ್ಕೆ ಸಂಬಂಧಿಸಿದ ೧೪ ಖಟ್ಲೆಗಳನ್ನು ಅಂದಿನ ಸಮಾಜವಾದಿ ಪಕ್ಷದ ಸರಕಾರವು ಹಿಂದೆ ಪಡೆದಿತ್ತು !

ನವದೆಹಲಿ – ಉತ್ತರಪ್ರದೇಶದಲ್ಲಿ ಸಮಾಜವಾದಿ ಪಕ್ಷದ ಸರಕಾರವಿರುವಾಗ ೨೦೧೩ರಲ್ಲಿ ರಾಜ್ಯದಲ್ಲಿನ ೭ ಜಿಲ್ಲೆಗಳಲ್ಲಿ ನಡೆದ ಭಯೋತ್ಪಾದಕ ಆಕ್ರಮಣಕ್ಕೆ ಸಂಬಂಧಿಸಿದ ೧೪ ಖಟ್ಲೆಗಳನ್ನು ಹಿಂಪಡೆಯಲಾಗಿತ್ತು. ಇವುಗಳಲ್ಲಿನ ಕೆಲವು ಖಟ್ಲೆಗಳನ್ನು ಹಿಂಪಡೆಯಲು ನ್ಯಾಯಾಲಯವೇ ನಿರಾಕರಿಸಿತ್ತು. ಮುಂದೆ ಈ ಪ್ರಕರಣದಲ್ಲಿ ಈ ಆರೋಪಿಗಳಿಗೆ ಅಪರಾಧಿಗಳೆಂದು ೧೦ ವರ್ಷಗಳ ವರೆಗೆ ಶಿಕ್ಷೆಯಾಯಿತು. ಭಾಜಪವು ಈ ಹಿಂದೆ ಸಮಾಜವಾದಿ ಪಕ್ಷವು ಭಯೋತ್ಪಾದಕ ಆಕ್ರಮಣದಲ್ಲಿನ ಆರೋಪಿಗಳಿಗೆ ಸಹಾನುಭೂತಿ ತೋರಿಸಿದೆ ಎಂದು ಆರೋಪಿಸಿತ್ತು.
ಸಮಾಜವಾದಿ ಪಕ್ಷದ ಸರಕಾರವು ಹಿಂಪಡೆದಿರುವ ಖಟ್ಲೆಗಳಲ್ಲಿ ಲಕ್ಷ್ಮಣಪುರಿಯಲ್ಲಿನ ೬, ಕಾನಪೂರದಲ್ಲಿನ ೩, ಹಾಗೆಯೇ ವಾರಣಾಸಿ, ಗೋರಖಪುರ, ಬಿಜನೌರ, ರಾಮಪೂರ ಮತ್ತು ಬಾರಾಬಂಕಿಯಲ್ಲಿ ಹೀಗೆ ಪ್ರತಿಯೊಂದು ಕಡೆಗಳಲ್ಲಿ ೧ ಖಟ್ಲೆಯಿತ್ತು. ವಿಶೇಷವೆಂದರೆ ಮಾರ್ಚ ೫, ೨೦೧೩ರಲ್ಲಿ ಹಿಂಪಡೆಯಲಾದ ವಾರಣಾಸಿಯ ಖಟ್ಲೆಯು ಮಾರ್ಚ ೭, ೨೦೦೬ರಲ್ಲಿ ಅಲ್ಲಿನ ಸಂಕಟಮೋಚನ ದೇವಸ್ಥಾನ ಹಾಗೂ ರೈಲು ನಿಲ್ದಾಣದಲ್ಲಿ ನಡೆದ ಬಾಂಬ್ ಸ್ಫೋಟಕ್ಕೆ ಸಂಬಂಧಿಸಿತ್ತು.