ಹಿಜಾಬ್ ಪ್ರಕರಣದ ಮೇಲೆ ಚರ್ಚೆ ಮಾಡುವ ಸ್ವಯಂಸೇವಕ ಸಂಘ ಮತ್ತು ಪ್ರಚಾರಕರ ಮೇಲೆ ಮತಾಂಧರಿಂದ ದಾಳಿ !

ಹಿಂದುತ್ವನಿಷ್ಠ ಯೋಗಿ ಸರಕಾರ ಇರುವ ಉತ್ತರಪ್ರದೇಶದಲ್ಲಿ ಮತಾಂಧರು ಹಿಂದುತ್ವನಿಷ್ಠರ ಮೇಲೆ ದಾಳಿ ನಡೆಸಲು ಹಿಂಜರೆಯುವುದಿಲ್ಲ, ಇದರ ಅರ್ಥ ಅವರಿಗೆ ಕಾನೂನಿನ ಭಯ ಉಳಿದಿಲ್ಲ. ಇಂಥವರ ಮೇಲೆ ಕಠಿಣ ಕ್ರಮಕೈಗೊಂಡು ಅವರಿಗೆ ಆದಷ್ಟು ಬೇಗನೆ ಶಿಕ್ಷೆ ನೀಡಲು ಸರಕಾರ ಪ್ರಯತ್ನಿಸಬೇಕು, ಎಂದು ಹಿಂದುಗಳಿಗೆ ಅನಿಸುತ್ತದೆ !

ಕಾನಪುರ (ಉತ್ತರಪ್ರದೇಶ) – ಇಲ್ಲಿಯ ಘಾಟಂಪೂರ ಕೋಟದ್ವಾರೆ ಮೊಹಲ್ಲಾದ ಮಾರುಕಟ್ಟೆಯಲ್ಲಿ ಮತಾಂಧರು ನಡೆಸಿರುವ ದಾಳಿಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಚಾರಕ ಗಾಯಗೊಂಡಿದ್ದಾರೆ. ಇಲ್ಲಿ ಸಂಘದ ಕೆಲವು ಜನರು ಕರ್ನಾಟಕದ ಹಿಜಾಬ್ ಪ್ರಕರಣ ವಿಷಯವಾಗಿ ಚರ್ಚೆ ನಡೆಸುತ್ತಿರುವಾಗ ಅಬರಾರ್ ಅಹಮದ್, ಅಮೀರ್ ಹಸನ್, ಸಮೀರ್ ಕೈಂಡ, ಶಹಾಬುದ್ದೀನ್, ಗುಡ್ಡು, ಛೋಟೆ, ಝಲ್ಫಕಾರ್, ಇಫ್ತಿಕಾರ್, ಇತಿಶ್ಯಾಕ್, ಕಾಸಿಮ್, ಸದ್ದಾಮ್, ಕಮಲ್ ಹಾಸನ್, ಶಾಹಿದ್ ಮುಂತಾದ ೨೦ ಜನರು ಸಂಘದ ಶಾಲೆಯ ಶಿಕ್ಷಕ ಯಶರಾಜ್ ಮತ್ತು ಸಂಘದ ನಗರ ಪ್ರಚಾರಕ ಭಾಸ್ಕರ್ ಸಿಂಹ ಅಲಿಯಾಸ್ ಮನೀಷ ಇವರ ಮೇಲೆ ದಾಳಿ ನಡೆಸಿದ್ದಾರೆ.

ಆ ಸಮಯದಲ್ಲಿ ಭಾಸ್ಕರ್ ಸಿಂಹ ಇವರ ಕತ್ತಿನಲ್ಲಿರುವ ಚಿನ್ನದ ಸರ ಮತ್ತು ಜೇಬಿನಲ್ಲಿನ ೩೫ ಸಾವಿರ ರೂಪಾಯಿ ಮತಾಂಧರು ಕಸಿದುಕೊಂಡಿದ್ದಾರೆ. ಈ ಘಟನೆಯಿಂದ ಇಲ್ಲಿ ಒತ್ತಡದ ವಾತಾವರಣ ನಿರ್ಮಾಣವಾಗಿರುವದರಿಂದ ಹೆಚ್ಚಿನ ಸಂಖ್ಯೆಯ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಪೊಲೀಸರು ಈ ಪ್ರಕರಣದ ದೂರನ್ನು ದಾಖಲಿಸಿದ್ದಾರೆ.