ಹಿಜಾಬ್ ಮತ್ತು ಬುರ್ಖಾ ಬೇಕಿದ್ದರೆ, ಮದರಸಾಗೆ ಹೋಗಿ ! – ಶಾಸಕ ಟಿ. ರಾಜಸಿಂಹ

ಶಾಸಕ ಟಿ. ರಾಜ ಸಿಂಹ

ಉಜ್ಜೈನ್ (ಮಧ್ಯ ಪ್ರದೇಶ) – ಯಾರಿಗಾದರು ಬುರ್ಖಾ ಮತ್ತು ಹಿಜಾಬ್ (ಮುಸಲ್ಮಾನ ಮಹಿಳೆಯರು ತಲೆ ಮತ್ತು ಕುತ್ತಿಗೆಯನ್ನು ಮುಚ್ಚಲು ಉಪಯೋಗಿಸುವ ವಸ್ತ್ರ) ಇಷ್ಟೇ ಅವಶ್ಯಕವಾಗಿದ್ದರೆ, ಅವರು ತಮಗಾಗಿ ಬೇರೆ ಶಾಲೆಗಳು ಅಥವಾ ಮಹಾವಿದ್ಯಾಲಯಗಳು ಕಟ್ಟಬೇಕು ಅಥವಾ ಮದರಸಾಗೆ ಹೋಗಬೇಕು. ಡಾಕ್ಟರ್, ಇಂಜಿನಿಯರ್ ಆಗಬೇಕಿದ್ದರೆ, ಅವು ಮದರಸಾಗಳಲ್ಲಿ ವಿದ್ಯಾಭ್ಯಾಸ ಮಾಡಿ ಆಗಲು ಸಾಧ್ಯವಿಲ್ಲ. ಶಾಲೆ ಮತ್ತು ಮಹಾವಿದ್ಯಾಲಯಗಳಲ್ಲಿ ಹೋಗುವುದಕ್ಕಾಗಿ ಹಿಜಾಬ್‍ನ ಹಟ ಹಿಡಿದರೆ, ಭಿಕ್ಷುಕ ಆಗಿದ್ದೀರಿ ಮತ್ತು ಭಿಕ್ಷುಕರಾಗಿಯೆ ಉಳಿಯುವಿರಿ, ಎಂದು ಭಾಗ್ಯನಗರ (ತೆಲಂಗಾಣ) ಇಲ್ಲಿಯ ಭಾಜಪದ ಹಿಂದುತ್ವನಿಷ್ಠ ಶಾಸಕ ಟಿ. ರಾಜ ಸಿಂಹ ಇವರು ಇಲ್ಲಿಯ ಪತ್ರಕರ್ತರ ಜೊತೆಗೆ ಮಾತನಾಡುವಾಗ ಹೇಳಿದರು. ಅವರು ಇಲ್ಲಿ 12 ಜ್ಯೋತಿರ್ಲಿಂಗಗಳಲ್ಲಿ ಒಂದಾದ ಮಹಾಕಾಲೇಶ್ವರ ದೇವಸ್ಥಾನಕ್ಕೆ ದರ್ಶನಕ್ಕಾಗಿ ಬಂದಿದ್ದರು.