ಮುಸ್ಲಿಮರ ಪರವಾಗಿ ವಕಾಲತ್ತು ವಹಿಸಿರುವ ನ್ಯಾಯವಾದಿ ದೇವದತ್ತ ಕಾಮತ್ ಅವರ ಮೇಲೆ ಸಾಮಾಜಿಕ ಜಾಲತಾಣಗಳಿಂದ ಟೀಕೆ

ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ನಡೆಯುತ್ತಿರುವ ಹಿಜಾಬ್ ಪ್ರಕರಣ

ನ್ಯಾಯವಾದಿ ಕಾಮತ್ ಕಾಂಗ್ರೆಸ್ ಪದಾಧಿಕಾರಿ !

ನ್ಯಾಯವದಿ ಕಾಮತ್ ಕಾಂಗ್ರೆಸ್ ಪದಾದಿಕಾರಿಯಾಗಿರುವದರಿಂದ ಅವರು ಮುಸ್ಲಿಮರ ಪರವಾಗಿ ಬಲವಾಗಿ ವಕಾಲತ್ತು ವಹಿಸುತ್ತಿರುವುದು ಸ್ಪಷ್ಟವಾಗಿದೆ ! ಕಾಂಗ್ರೆಸನಲ್ಲಿ ಮ. ಗಾಂಧೀಜಿ ಉದಯವಾದಾಗಿನಿಂದ ಇವರೆಗೆ ಸ್ಥಿತಿ ಯಥಾಸ್ಥಿತಿಯಾಗಿದೆ !- ಸಂಪಾದಕರು 

ನ್ಯಾಯವಾದಿ ದೇವದತ್ತ ಕಾಮತ್

ಬೆಂಗಳೂರು – ಕರ್ನಾಟಕದಲ್ಲಿ ಹಿಜಾಬ್ ಪ್ರಕರಣಕ್ಕೆ ಸಮಬಂಧಿಸಿದಂತೆ ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿದೆ. ನ್ಯಾಯವದಿ ದೇವದತ್ತ ಕಾಮತ ಮುಸ್ಲಿಂ ವಿದ್ಯಾರ್ಥಿನಿಗಳ ಪರ ವಾದ ಮಂಡಿಸುತ್ತಿದ್ದಾರೆ. ಕುಂಕುಮ, ತೀಲಕ, ಟಿಕಲಿ, ಪೇಟ, ಶಿಲುಬೆಗೆ ಅವಕಾಶವಿರುವಾಗ ಹಿಜಾಬ್ ಅನ್ನು ಏಕೆ ನಿಷೇಧಿಸಲಾಗಿದೆ ?’ ಎಂದು ಅವರು ಯುಕ್ತಿವಾದ ಮಾಡಿದ್ದಾರೆ. ಅದಕ್ಕಾಗಿ ಸಾಮಾಜಿಕ ಜಾಲತಾಣಗಳಲ್ಲಿ ಅವರ ವಿರುದ್ಧ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ವಿಶೇಷವೆಂದರೆ ನ್ಯಾಯವಾದಿ ದೇವದತ್ತ ಕಾಮತ ಅವರು ಕಾಂಗ್ರಸ್ ಪದಾಧಿಕಾರಿಯಾಗಿದ್ದಾರೆ. ಆದ್ದರಿಂದ ಅವರು ಮುಸಲ್ಮಾನರ ಪರ ಬಲವಾಗಿ ವಕಾಲತ್ತು ವಹಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ನ್ಯಾಯವಾದಿ ಕಾಮತ್ ಅವರು ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್‍ನ ಶಾಸನ ರಚನೆಯ ಸಮನ್ವಯ ಸಮಿತಿಯ ಅದ್ಯಕ್ಷರಾಗಿದ್ದಾರೆ. ಕಾಮತ ಕಾಂಗ್ರೆಸ್‍ಗೆ ಸಂಬಂಧಿಸಿದ ಪ್ರಕರಣಗಳ ವಿರುದ್ಧ ಹೋರಾಡುತ್ತಿದ್ದಾರೆ. 2018 ರಲ್ಲಿ ಕಾಂಗ್ರೆಸ್‍ನ ಕೆಲವು ಶಾಸಕರು ಭಾಜಪ ಸೇರಿದ ಪ್ರಕರಣದ ಕುರಿತು ಅವರು ಹೋರಾಟ ನಡೆಸುತ್ತಿದ್ದರು. ಕರ್ನಾಟಕದಲ್ಲಿ ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ಅವರು ಅಡಿಶನಲ್ ಅಡ್ವೊಕೇಟ್ ಜನರಲ್ ಕೂಡಾ ಆಗಿದ್ದರು.