ಕರ್ನಾಟಕದಲ್ಲಿ ಅಲ್ಪಸಂಖ್ಯಾತರ ಶಾಲೆಗಳಲ್ಲಿಯೂ ಹಿಜಾಬ್‍ನ ಮೇಲೆ ನಿರ್ಬಂಧ ! – ರಾಜ್ಯ ಸರಕಾರದ ಆದೇಶ

ಬೆಂಗಳೂರು – ರಾಜ್ಯ ಸರಕಾರವು ಈಗ ಅಲ್ಪಸಂಖ್ಯಾತರಿಗೋಸ್ಕರ ಶಾಲೆಗಳಲ್ಲಿಯೂ ಕೂಡ ಹಿಜಾಬ್‍ನ ಮೇಲೆ ನಿರ್ಬಂಧ ಹೇರುವ ಆದೇಶ ನೀಡಿದೆ. ರಾಜ್ಯದಲ್ಲಿನ ಮೌಲಾನಾ ಆಝಾದ ಆದರ್ಶ ಆಂಗ್ಲ ಮಾಧ್ಯಮ ಶಾಲೆ ಸೇರಿದಂತೆ ಅಲ್ಪಸಂಖ್ಯಾತ ಕಲ್ಯಾಣ ವಿಭಾಗದ ಮೂಲಕ ನಡೆಸಲಾಗುವ ಶಾಲೆಗಳಲ್ಲಿ ಕಲಿಯುವ ವಿದ್ಯಾರ್ಥಿನಿಯರಿಗೆ ಹಿಜಾಬ್ ಧರಿಸಲು ಪ್ರತಿಬಂಧಿಸಲಾಗಿದೆ. ಈ ಮೊದಲು ಸರಕಾರವು ಸರಕಾರಿ ಶಾಲೆಗಳು ಹಾಗೂ ಮಹಾವಿದ್ಯಾಲಯಗಳಲ್ಲಿ ಮಾತ್ರ ಹಿಜಾಬ್ ಧರಿಸಲು ನಿರ್ಬಂಧ ಹೇರಿತ್ತು.

ಆದೇಶದಲ್ಲಿ, ಕರ್ನಾಟಕ ಉಚ್ಚ ನ್ಯಾಯಾಲಯದ ಆದೇಶವು ಅಲ್ಪಸಂಖ್ಯಾತ ಕಲ್ಯಾಣ ವಿಭಾಗದ ವ್ಯಾಪ್ತಿಗೆ ಬರುವ ನಿವಾಸಿ ಶಾಲೆ, ಮಹಾವಿದ್ಯಾಲಯಗಳು ಹಾಗೂ ಮೌಲಾನಾ ಆಝಾದ ಆಂಗ್ಲ ಮಾಧ್ಯಮಗಳ ಶಾಲೆಗಳಿಗೂ ಕೂಡ ಈ ನಿಯಮವು ಅನ್ವಯಿಸಲಾಗುವುದು. ಮೌಲಾನಾ ಆಝಾದ ಆದರ್ಶ ಆಂಗ್ಲ ಮಾಧ್ಯಮಗಳ ಶಾಲೆ ಹಾಗೂ ಅಲ್ಪಸಂಖ್ಯಾತ ಕಲ್ಯಾಣ ವಿಭಾಗದ ವ್ಯಾಪ್ತಿಗೆ ಬರುವ ಶಾಲೆಗಳು ಹಾಗೂ ಮಹಾವಿದ್ಯಾಲಯದ ತರಗತಿಗಳಲ್ಲಿ ಕೇಸರಿ ಶಾಲು, ಸ್ಕಾರ್ಫ ಹಾಗೂ ಹಿಜಾಬ್ ಧರಿಸಲು ಪ್ರತಿಬಂಧವಿದೆ ಎಂದು ಹೇಳಿದೆ.