38 ಜನರನ್ನು ಮರಣದಂಡನೆ, 11 ಜನರಿಗೆ ಜೀವಾವಧಿ ಶಿಕ್ಷೆ

ಕರ್ಣಾವತಿ (ಗುಜರಾತ್) ನಲ್ಲಿ 200821 ಸರಣಿ ಬಾಂಬ್ ಸ್ಫೋಟ ಪ್ರಕರಣ

ಬಾಂಬ್ ಸ್ಫೋಟದಂತಹ ಪ್ರಕರಣದಲ್ಲಿ 14 ವರ್ಷಗಳ ನಂತರ ತೀರ್ಪು ನೀಡಿದ್ದು ನ್ಯಾಯವೆನ್ನದೇ ಆನ್ಯಾಯವೇ ಎಂದು ಹೇಳಬೇಕಾಗುತ್ತದೆ ! ಈ ಕಾರಣದಿಂದಾಗಿ, ಜಿಹಾದಿ ಭಯೋತ್ಪಾದಕರು ಮತ್ತು ಅಪರಾಧಿಗಳು ಬೀಗುತ್ತಾರೆ, ಸರಕಾರವು ಯಾವಾಗ ಅರಿತುಕೊಳ್ಳುತ್ತದೆ ? -ಸಂಪಾದಕರು

ಕರ್ಣಾವತಿ (ಗುಜರಾತ್) – ಇಲ್ಲಿ ಜುಲೈ 26, 2008 ರಂದು ನಡೆದ 1 ಗಂಟೆಯಲ್ಲಿ 21 ಸರಣಿ ಬಾಂಬ್ ಸ್ಫೋಟದ ಪ್ರಕರಣಕ್ಕೆ ಸಂಬಂಧಿಸಿದಂತೆ ಸೆಷೆನ್ಸ್ ನ್ಯಾಯಾಲಯವು 49 ಅಪರಾಧಿಗಳಲ್ಲಿ 38 ಅಪರಾಧಿಗಳಿಗೆ ಮರಣದಂಡನೆ ಮತ್ತು 11 ಜನರಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ. ಈ ಬಾಂಬ್ ಸ್ಫೊಟದಲ್ಲಿ ಮೃತಪಟ್ಟವರ ಸಂಬಂಧಿಕರಿಗೆ 1 ಲಕ್ಷ ರೂಪಾಯಿ, ತಿವ್ರವಾಗಿ ಗಾಯಗೊಂಡವರಿಗೆ 50,000 ರೂಪಾಯಿ, ಮತ್ತು ಸಣ್ಣಪುಟ್ಟ ಗಾಯಾಳುಗಳಿಗೆ 25,000 ರೂಪಾಯಿ ಸಹಾಯ ನೀಡಬೇಕು ಎಂದು ನ್ಯಾಯಾಲಯವು ಆದೇಶದಲ್ಲಿ ಹೇಳಿದೆ. ಅಪರಾಧಿಗಳ ಶಿಕ್ಷೆಯ ಕುರಿತು ಯುಕ್ತಿವಾದ ಪೂರ್ಣಗೊಂಡ ನಂತರ ಫೆಬ್ರುವರಿ 8 ರಂದು ವಿಶೇಷ ನ್ಯಾಯಾಲಯವು ತನ್ನ ತೀರ್ಪನ್ನು ಕಾಯ್ದಿರಿಸಿತ್ತು. ಆಗ 77 ಆರೋಪಿಗಳ ಪೈಕಿ 28 ಮಂದಿಯನ್ನು ನ್ಯಾಯಾಲಯ ಖುಲಾಸೆಗೊಳಿಸಿತ್ತು. ಈ ಸ್ಫೋಟದಲ್ಲಿ ಭಾಗಿಯಾದ ಇತರ 8 ಆರೋಪಿಗಳ ಹುಡುಕಾಟ ಇನ್ನೂ ಮುಂದುವರೆದಿದೆ. ಬಾಂಬ್ ಸ್ಫೋಟದ ಮಾಸ್ಟರ್ ಮೈಂಡ್ ಯಾಸಿನ್ ಭಟ್ಕಳ ಇವನು ದೆಹಲಿಯ ಸೆರೆಮನೆಯಲ್ಲಿದ್ದಾನೆ, ಅಬ್ದುಲ್ ಸುಭಾನ್ ಅಲಿಯಾಸ ತೌಕಿರ್ ಇವನು ಕೊಚ್ಚಿನ್‍ನ ಸೆರೆಮನೆಯಲ್ಲಿದ್ದಾನೆ. ಈ ಸರಣೀ ಬಾಂಬ್ ಸ್ಪೋಟದಲ್ಲಿ ಕನಿಷ್ಠ 56 ಜನರು ಸಾವನ್ನಪ್ಪಿದ್ದಾರೆ ಮತ್ತು 200 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಈ ಘಟನೆ ನಡೆದಾಗ ನರೇಂದ್ರ ಮೋದಿಯವರು ಗುಜರಾತ್‍ನ ಮುಖ್ಯಮಂತ್ರಿಯಾಗಿದ್ದರು.

1. 19 ದಿನಗಳಲ್ಲಿ 30 ಉಗ್ರರನ್ನು ಬಂಧಿಸುವಲ್ಲಿ ಪೋಲಿಸರು ಯಶಸ್ವಿಯಾಗಿದ್ದರು. ಉಳಿದ ಭಯೋತ್ಪಾದಕರನ್ನು ನಂತರ ದೇಶದ ವಿವಿದ ನಗರಗಳಿಂದ ಬಂಧಿಸಲಾಯಿತು. ಕರ್ಣಾವತಿಯಲ್ಲಿ ನಡೆದ ಬಾಂಬ್ ಸ್ಫೋಟಕ್ಕೂ ಮುನ್ನ. ಜಿಹಾದಿ ಭಯೋತ್ಪಾದಕ ಸಂಘಟನೆ ಇಂಡಿಯನ್ ಮುಜಾಹಿದ್ದೀನ್‍ಗೆ ಸೇರಿದ ಅದೇ ಭಯೋತ್ಪಾದಕರು ಜೈಪುರ ಮತ್ತು ವಾರಣಾಸಿಯಲ್ಲೂ ಸ್ಫೋಟಗಳನ್ನು ನಡೆಸಿದ್ದರು. 2008 ರ ಜುಲೈ 27 ರಂದು ಕರ್ಣಾವತಿ ಸ್ಫೋಟದ ಎರಡನೆ ದಿನ ಸೂರತ್‍ನಲ್ಲೂ ಸರಣಿ ಬಾಂಬ್ ಸ್ಫೋಟಕ್ಕೆ ಯತ್ನಿಸಲಾಗಿತ್ತು.

2. ಸರಣಿ ಬಾಂಬ್ ಸ್ಫೋಟದ ನಂತರ ಜುಲೈ 28 ಮತ್ತು ಜುಲೈ 31, 2008 ರ ನಡುವೆ ಸೂರತ್ ಪೊಲೀಸರು ನಗರದ ವಿವಿಧ ಭಾಗಗಳಿಂದ 29 ಬಾಂಬ್‍ಗಳನ್ನು ವಶಪಡಿಸಿಕೊಂಡಿದ್ದರು. ಇವುಗಳಲ್ಲಿ 17 ಬಾಂಬ್‍ಗಳು ವರಾಚಾ ಪ್ರದೇಶದಲ್ಲಿ ಮತ್ತು ಇತರ ಕತಾರಗಾಮ್, ಮಹಿಧರ್‍ಪುರ ಮತ್ತು ಉಮರಾ ಪ್ರದೇಶಗಳಲ್ಲಿದ್ದುವು. ದೋಷಪೂರಿತ ಸಕ್ರ್ಯೂಟ್ ಮತ್ತು ಡಿಟೋನೇಟರ್‍ನಿಂದ ಬಾಂಬ್ ಸ್ಫೊಟಗೊಳ್ಳಲು ಸಾಧ್ಯವಾಗಲಿಲ್ಲ ಎಂದು ತನಿಖೆಯಿಂದ ತಿಳಿದು ಬಂದಿದೆ.

ಗೋಧ್ರಾ ಗಲಭೆಗೆ ಪ್ರತೀಕಾರವಾಗಿ ಇಂಡಿಯನ್ ಮುಜಾಹಿದ್ದೀನ್‍ನಿಂದ ಬಾಂಬ್ ಸ್ಫೋಟ !

77 ಆರೋಪಿಗಳ ವಿರುದ್ಧ ಕಳೆದ ವರ್ಷ ಸೆಪ್ಟೆಂಬರ್‍ನಲ್ಲಿ ವಿಚಾರಣೆ ಪೂರ್ಣಗೊಂಡಿತ್ತು. 78 ಆರೋಪಿಗಳ ಪೈಕಿ ಒಬ್ಬ ಸರಕಾರಿ ಸಾಕ್ಷಿಯಾಗಿದ್ದ. ಆ ಆರೋಪಿ ಇಂಡಿಯನ್ ಮುಜಾಹಿದ್ದೀನ್ ಈ ಭಯೋತ್ಪಾದಕ ಸಂಘಟನೆಯೊಂದಿಗೆ ಸಂಬಂಧವಿರುವದನ್ನು ಪೋಲಿಸರು ತಿಳಿಸಿದ್ದಾರೆ. `2002 ರ ಗೊಧ್ರಾ ಗಲಭೆಯ ಸೇಡು ತೀರಿಸಿಕೊಳ್ಳುವದಕ್ಕಾಗಿ ಇಂಡಿಯನ್ ಮುಜಾಹಿದ್ದೀನ್‍ನ ಭಯೋತ್ಪಾದಕರು ಬಾಂಬ್‍ಸ್ಫೋಟ ನಡೆಸುವ ಸಂಚು ಹಣೆದಿದ್ದರು’ ಎಂದು ಆರೋಪಿಸಲಾಗಿತ್ತು.