೧. ಬಜೆಟ್‌ನಲ್ಲಿ ಅಂಕಿಅಂಶಗಳಿಗಿಂತ ನಿಲುವಿನ ಮೇಲೆ ಹೆಚ್ಚು ಗಮನವನ್ನು ಕೇಂದ್ರಿಕೃತಗೊಳಿಸಿರುವುದು
‘ದೇಶದ ಹಣಕಾಸು ಸಚಿವೆ’ ನಿರ್ಮಲಾ ಸೀತಾರಾಮನ್ ಇವರು ೨೦೨೨ ನೇ ಕೇಂದ್ರೀಯ ಬಜೆಟ್ ಅನ್ನು ಮಂಡಿಸಿದರು. ಅದರಲ್ಲಿ ಭದ್ರತೆಯ ಆರ್ಥಿಕ ಏರ್ಪಾಡುಗಳ ದೊಡ್ಡ ಭಾಗವಿರುತ್ತದೆ. ಅದರಲ್ಲಿ ಅವರು ಅನೇಕ ಘೋಷಣೆಗಳನ್ನು ಮಾಡಿದರು. ಅದರಲ್ಲಿ ಅಂಕಿಅಂಶಗಳಿಗಿಂತ ಕಾರ್ಯ ನೀತಿಗಳ ಮೇಲೆ ಹೆಚ್ಚು ಗಮನವನ್ನು ನೀಡಲಾಗಿದೆ.
೨. ದೇಶದ ಬಜೆಟ್‌ನಲ್ಲಿನ ಭದ್ರತೆಯ ಏರ್ಪಾಡುಗಳ ೨ ದೊಡ್ಡ ಭಾಗಗಳು
ಅ. ಮಿನಿಸ್ಟ್ರಿ ಆಫ್ ಢಿಫೆನ್ಸ್ ಬಜೆಟ್ : ಇದಕ್ಕೆ ಸರ್ವಸಾಮಾನ್ಯವಾಗಿ ‘ಡಿಫೆನ್ಸ್ ಬಜೆಟ್’ (ಭದ್ರತೆಯ ಬಜೆಟ್) ಎನ್ನಲಾಗುತ್ತದೆ.
ಆ. ಮಿನಿಸ್ಟ್ರಿ ಆಫ್ ಹೊಮ್ ಅಫೆರ‍್ಸ್ : ‘ಮಿನಿಸ್ಟ್ರಿ ಆಫ್ ಹೊಮ್ ಅಫೆರ‍್ಸ್’ (ಗೃಹ ವ್ಯವಹಾರಗಳ ಸಚಿವಾಲಯ) ನ ಬಳಿ ಆಂತರಿಕ ಭದ್ರತೆಯ ಜವಾಬ್ದಾರಿಯಿರುತ್ತದೆ. ಅದರ ಬಳಿ ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆ, ಅರೆಸೇನಾ ಪಡೆಗಳು (ಪ್ಯಾರಾ ಮಿಲಿಟರಿ) ಪೊಲೀಸ್ ಮತ್ತು ಇತರ ಪಡೆಗಳಿರುತ್ತವೆ. ಅವರಿಗಾಗಿಯು ಸಹ ಹಣಕಾಸಿನ ಏರ್ಪಾಡನ್ನು ಮಾಡಲಾಗುತ್ತದೆ.
ಭಾರತದ ‘ಮಿನಿಸ್ಟ್ರಿ ಆಫ್ ಹೊಮ್ ಅಫೆರ‍್ಸ್’ (ಗೃಹ ವ್ಯವಹಾರಗಳ ಸಚಿವಾಲಯ) ಮತ್ತು ‘ಮಿನಿಸ್ಟ್ರಿ ಆಫ್ ಢಿಫೆನ್ಸ್’ (‘ರಕ್ಷಣಾ ಸಚಿವಾಲಯ’) ಇವುಗಳ ಕೆಲವು ವರ್ಷಗಳ ಏರ್ಪಾಡುಗಳ ತುಲನೆಯನ್ನು ಮಾಡಿದರೆ ಬಾಹ್ಯ ಭದ್ರತೆಗಾಗಿ ಇರುವ ‘ರಕ್ಷಣಾ ಸಚಿವಾಲಯ’ (ಮಿನಿಸ್ಟ್ರಿ ಆಫ್ ಡಿಫೆನ್ಸ್) ದ ಏರ್ಪಾಡುಗಳು ಆಂತರಿಕ ಭದ್ರತೆಯ ತುಲನೆಯಲ್ಲಿ ಮೂರು ಪಟ್ಟು ಹೆಚ್ಚಿರುತ್ತವೆ. ಚೀನಾ ಮತ್ತು ಪಾಕಿಸ್ತಾನದಂತಹ ಬಾಹ್ಯ ಶತ್ರುಗಳಿಂದ ರಕ್ಷಣೆ ಪಡೆಯಲು ಭಾರತವು ಮೂರು ಪಟ್ಟು ಹಣವನ್ನು ಖರ್ಚು ಮಾಡುತ್ತದೆ. ಆಂತರಿಕ ಭದ್ರತಾ ಸವಾಲುಗಳಲ್ಲಿ ನಕ್ಸಲವಾದ, ಮಾವೋವಾದ, ಕಾಶ್ಮೀರದ ತೆರೆಮರೆಯ ಯುದ್ಧ, ಈಶಾನ್ಯ ಭಾರತದಲ್ಲಿ ಗಲಭೆ, ಮಾದಕ ದ್ರವ್ಯಗಳ ಭಯೋತ್ಪಾದನೆ ಮತ್ತು ಕಾನೂನು-ಸುವ್ಯವಸ್ಥೆ ಇವುಗಳ ಸಮಾವೇಶವಿದೆ. ಇವುಗಳ ಭದ್ರತೆಗಾಗಿ ಬಹುತಾಂಶವನ್ನು ಕೇಂದ್ರ ಸರಕಾರದ ‘ಮಿನಿಸ್ಟ್ರಿ ಆಫ್ ಹೊಮ್ ಅಫೆರ‍್ಸ್’ನಿಂದಲೇ ಏರ್ಪಾಡು ಮಾಡಲಾಗುತ್ತದೆ. ಹಿಂದೆ ಇದಕ್ಕಾಗಿ ಕಡಿಮೆ ಹಣವನ್ನು ವ್ಯಯಿಸಲಾಗುತ್ತಿತ್ತು; ಆದರೆ ಈಗ ಅದರಲ್ಲಿ ಹೆಚ್ಚಳವಾಗಿದೆ. ‘ಭದ್ರತೆಯ ಏರ್ಪಾಡುಗಳ ಕಡೆಗೆ ನೋಡಿದರೆ ‘ಮಿನಿಸ್ಟ್ರಿ ಆಫ್ ಡಿಫೆನ್ಸ್’ ಮತ್ತು ‘ಮಿನಿಸ್ಟ್ರಿ ಆಫ್ ಹೊಮ್ ಅಫೆರ‍್ಸ್’ ಇವುಗಳಿಗೇನು ದೊರಕಿತು ?’, ಎಂಬ ವಿಚಾರವನ್ನು ಮಾಡಬೇಕಿದೆ. ಅದರಲ್ಲಿಯೂ ‘ಮಿನಿಸ್ಟ್ರಿ ಆಫ್ ಡಿಫೆನ್ಸ್’ಗಾಗಿ ಮಾಡಲಾದ ಏರ್ಪಾಡು ಬಹಳ ಹೆಚ್ಚಿರುವುದರಿಂದ ಅದರ ಮೇಲೆ ಹೆಚ್ಚು ಗಮನ ಹರಿಸಬೇಕಾಗುವುದು.
೩. ಭಾರತೀಯ ಆರ್ಥಿಕತೆಯು ಜಗತ್ತಿನ ಎಲ್ಲಕ್ಕಿಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಲಿರುವುದು ಮತ್ತು ಅದರಲ್ಲಿ ‘ಸ್ವಾವಲಂಬಿ ಭಾರತ’ವಾಗಲು ಅತ್ಯಧಿಕ ಗಮನವನ್ನು ನೀಡಲಾಗಿದೆ
ಕಳೆದ ವರ್ಷದ ಬಜೆಟ್‌ಅನ್ನು ನೋಡಿದರೆ, ದೇಶದ ಸುಮಾರು ಶೇ. ೧೭ ರಷ್ಟು ಹಣವನ್ನು ‘ಡಿಫೆನ್ಸ್ ಬಜೆಟ್’ಗಾಗಿ ವ್ಯಯ ಮಾಡಲಾಗುತ್ತದೆ. ‘ಸೇನೆಯ ಆಧುನಿಕೀಕರಣವಾಗಬೇಕು, ದೇಶದಲ್ಲಿನ ಶಸ್ತ್ರಗಳು ಚೀನಾದಂತೆ ಆಧುನಿಕೀಕರಣವಾಗಬೇಕು’, ಎಂದು ಜನತೆಗೆ ಅನಿಸುತ್ತದೆ, ಅದರಂತೆ ಸೈನ್ಯಕ್ಕೂ ಅನಿಸುತ್ತದೆ. ಸರಕಾರದ ಬಳಿ ಇರುವ ಹಣದಿಂದಲೇ ಯಾವುದೇ ವಾರ್ಷಿಕ ಆಯವ್ಯಯದ ಅಂದಾಜುಪಟ್ಟಿಯು ಸಾಕಾರವಾಗಬಹುದು. ಆದುದರಿಂದ ಇದು ದೊಡ್ಡ ಸವಾಲಾಗಿರುತ್ತದೆ. ಇದಕ್ಕಾಗಿ ಜನರು ಸ್ವಯಂಪ್ರೇರಣೆಯಿಂದ ತೆರಿಗೆ ಹಣವನ್ನು (ಟ್ಯಾಕ್ಸ್) ತುಂಬುವುದು ಆವಶ್ಯಕವಾಗಿದೆ. ಈ ವರ್ಷದ ಸಕಾರಾತ್ಮಕ ಅಂಶವೆಂದರೆ ನಮ್ಮ ಆರ್ಥಿಕತೆಯು ಜಗತ್ತಿನ ಎಲ್ಲಕ್ಕಿಂತ ವೇಗದಿಂದ ಬೆಳೆಯುವ ಆರ್ಥಿಕತೆಯಾಗಿದೆ. ಆದುದರಿಂದ ‘ಡಿಫೆನ್ಸ್ ಬಜೆಟ್’ಗೆ ಸಹ ಅದರ ಲಾಭವಾಗುತ್ತಿದೆ. ಶೇ. ೯.೨ ರಷ್ಟು ಹೆಚ್ಚಳ ಇದು ನಿಜವಾಗಿಯೂ ತುಂಬಾ ಉತ್ತಮ ಅಂಕಿಅಂಶವಾಗಿದೆ. ಈ ಬಜೆಟ್ ಅನ್ನು ಸಂಕ್ಷಿಪ್ತವಾಗಿ ಹೇಳುವುದಾದರೆ, ಇದರಲ್ಲಿ ‘ಸ್ವಾವಲಂಬಿ ಭಾರತ’ ಆಗುವುದರತ್ತ ಅತ್ಯಧಿಕ ಗಮನವನ್ನು ಹರಿಸಲಾಗಿದೆ. ಇದಕ್ಕೂ ಮೊದಲು ಭಾರತ ಶೇ. ೭೦ ರಿಂದ ೮೦ ರಷ್ಟು ಶಸ್ತ್ರಗಳನ್ನು ವಿದೇಶದಿಂದ ಆಮದು ಮಾಡುತ್ತಿತ್ತು; ಆದರೆ ಕಳೆದ ಕೆಲವು ವರ್ಷಗಳಿಂದ ಭಾರತವು ಭದ್ರತಾ ಕ್ಷೇತ್ರದಲ್ಲಿಯೂ ಸ್ವಾವಲಂಬಿಯಾಗುವ ದೃಷ್ಟಿಯಿಂದ ಪ್ರಯತ್ನಿಸುತ್ತಿದೆ.
(ಸೌಜನ್ಯ : Brig Hemant Mahajan,YSM)
೪. ಸರಕಾರದ ‘ಭದ್ರತಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ’ (ಡಿ.ಆರ್.ಡಿ.ಓ.) ಮತ್ತು ಖಾಸಗಿ ಉದ್ಯಮದ ಸಹಾಯದಿಂದ ಭದ್ರತಾ ವಲಯವನ್ನು ಆಧುನೀಕರಿಸಲಾಗುವುದು !
ಭಾರತದ ‘ಭದ್ರತಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ’ (ಡಿ.ಆರ್.ಡಿ.ಓ.) ಇದು ಶಸ್ತ್ರಾಸ್ತ್ರ ಸಾಮಗ್ರಿಗಳನ್ನು ಸಂಶೋಧನೆ ಮಾಡುವ ಸರಕಾರಿ ಸಂಸ್ಥೆಯಾಗಿದೆ; ಆದರೆ ‘ಅದರ ಕ್ಷಮತೆಯು ಕಡಿಮೆ ಇದೆ’, ಎಂದು ಅನೇಕರ ಅಭಿಪ್ರಾಯವಾಗಿದೆ. ಅದು ಕೈಗೊಂಡ ಪ್ರತಿಯೊಂದು ಉಪಕ್ರಮವು ತಡವಾಗಿ ಪೂರ್ಣವಾಗುತ್ತದೆ. ಈಗ ಸರಕಾರವು ಬಜೆಟ್‌ನಲ್ಲಿ ಒಂದು ದೊಡ್ಡ ಬದಲಾವಣೆ ಮಾಡಿದೆ. ಅದಕ್ಕನುಸಾರ (ಡಿ.ಆರ್.ಡಿ.ಓ.) ಈಗ ಖಾಸಗಿ ಉದ್ಯಮ ಮತ್ತು ‘ಸ್ಟಾರ್ಟ್ ಆಪ್’ ಉದ್ಯಮಿಗಳೊಂದಿಗೆ ಸಂಶೋಧನೆ ಮಾಡಲಿದೆ. ಖಾಸಗಿ ಉದ್ಯಮಿಗಳ ಕ್ಷಮತೆಯು ಸರಕಾರಿ ಸಂಸ್ಥೆಗಳಿಗಿಂತ ನಿಶ್ಚಿತವಾಗಿಯೂ ಹೆಚ್ಚು ಎಂದು ತಿಳಿಯಲಾಗುತ್ತದೆ. ಈ ನಿರ್ಣಯದಿಂದಾಗಿ ಭಾರತೀಯ ಭದ್ರತಾ ಕ್ಷೇತ್ರದಲ್ಲಿ ಸಂಶೋಧನೆ ಮತ್ತು ಸೈನ್ಯದ ಆಧುನೀಕಿರಣಗಳ ವೇಗವು ಹೆಚ್ಚಾಗುವುದು. ಇದರ ಅನುಭವವನ್ನು ಇತ್ತೀಚಿಗಷ್ಟೇ ನಡೆದ ‘ಬೀಟಿಂಗ್ ದಿ ರಿಟ್ರಿಟ್’ ಈ ಕಾರ್ಯಕ್ರಮದಲ್ಲಿ ಪಡೆದುಕೊಳ್ಳಲಾಯಿತು. ಇದರಲ್ಲಿ ಆಕಾಶದಲ್ಲಿ ೧ ಸಾವಿರ ಡ್ರೋನಗಳ ಕವಾಯತ್ತನ್ನು ತೋರಿಸಲಾಯಿತು. ಅದು ನಯನಮನೋಹರವಾಗಿತ್ತು. ಇಷ್ಟು ದೊಡ್ಡ ಸಂಖ್ಯೆಗಳಲ್ಲಿ ಡ್ರೋನ್‌ಗಳನ್ನು ಆಕಾಶದಲ್ಲಿ ಹಾರಿಸುವ ಭಾರತವು ಇತಿಹಾಸದಲ್ಲಿನ ನಾಲ್ಕನೇಯ ದೇಶವಾಗಿದೆ.
೫. ಹೊಸಹೊಸ ಅತ್ಯಾಧುನಿಕ ತಂತ್ರಜ್ಞಾನದ ಸಹಾಯದಿಂದ ಭದ್ರತೆಯಲ್ಲಿನ ಕ್ಷಮತೆಯನ್ನು ಹೆಚ್ಚಿಸುವುದು
ಸದ್ಯ ಹೊಸ ಹೊಸ ತಂತ್ರಜ್ಞಾನಗಳು ಬಂದಿವೆ. ಅವುಗಳಿಗೆ ‘ಡಿಸ್‌ಕ್ರಪ್ಟಿವ್ ಟೆಕ್ನಾಲಜಿ’ ಅಥವಾ ಅದಕ್ಕೆ ‘ವಿನಾಶಕಾಲದ ತಂತ್ರಜ್ಞಾನ’ವೆಂದೂ ಹೇಳಬಹುದು. ಮೊದಲೆಲ್ಲ ಯುದ್ಧದ ಟ್ಯಾಂಕ್‌ಗಳು ಅಥವಾ ಯುದ್ಧದ ವಿಮಾನಗಳು ಮುಂತಾದವುಗಳ ಸಂಶೋಧನೆಯಾಗುತ್ತಿತ್ತು. ಅವುಗಳ ಮುಂದಿನ ಆವೃತ್ತಿಗಳು ಅದಕ್ಕಿಂತಲೂ ಹೆಚ್ಚು ಅತ್ಯಾಧುನಿಕವಾಗಿರುತ್ತಿದ್ದವು. ‘ಡಿಸ್‌ಕ್ರಪ್ಟಿವ್ ಟೆಕ್ನಾಲಜಿ’ಯಲ್ಲಿ ಹಾಗಿಲ್ಲ. ಈಗ ಭಾರತವು ಡ್ರೋನ್‌ನ ಬಳಕೆಯನ್ನು ಹೆಚ್ಚಿಸಿದೆ. ಒಂದು ಡ್ರೋನ್‌ನ ಬೆಲೆ ೫ ಕೋಟಿ ರೂಪಾಯಿಗಳು ಮತ್ತು ರಾಫೆಲ್‌ನ ಬೆಲೆ ೧ ಸಾವಿರದ ೬೦೦ ಕೋಟಿ ರೂಪಾಯಿಗಳಷ್ಟಿದೆ. ಆದುದರಿಂದ ಡ್ರೋನ್‌ಗಳು ಯುದ್ಧದ ವಿಮಾನಗಳ ಕ್ಷಮತೆಯನ್ನು ಬಹಳ ಕಡಿಮೆ ಮಾಡಿವೆ. ಆರ್ಮೆನಿಯಾ ಮತ್ತು ಅಝರಬೈಜಾನ ಇವುಗಳ ನಡುವಿನ ಯುದ್ಧವನ್ನು ಕೇವಲ ಡ್ರೋನ್‌ನ ಸಹಾಯದಿಂದ ಮಾಡಲಾಯಿತು. ಈಗ ಭಾರತವು ಡ್ರೋನ್ ಅಟೊನಾಮಸ್ ವಾಹನಗಳು, ಬ್ಲ್ಯಾಕ್‌ಚೆನ್ ತಂತ್ರಜ್ಞಾನ, ಆರ್ಟಿಫಿಶಿಯಲ್ ಇಂಟಿಲಿಜನ್ಸ್ (ಕೃತಕ ಬುದ್ಧಿಮತ್ತೆ) ಇಂತಹ ಎಲ್ಲ ವಿಷಯಗಳಿಗೆ ಹೆಚ್ಚು ಗಮನ ನೀಡುತ್ತಿದೆ. ಈ ಬಗೆಗಿನ ಅಂಕಿಅಂಶಗಳು ಹೊರಗೆ ಬಂದಿಲ್ಲ.
ಮಾಜಿ ರಕ್ಷಣಾ ಸಚಿವ ಪರ್ರಿಕರ ಇವರು, ‘ಮುಂದಿನ ೫ ರಿಂದ ೭ ವರ್ಷಗಳಲ್ಲಿ ಭಾರತಕ್ಕೆ ಬೇಕಾಗುವ ಪ್ರತಿಯೊಂದು ಶಸ್ತ್ರಸಾಮಗ್ರಿಗಳನ್ನು ನಾವು ಭಾರತದಲ್ಲಿಯೇ ತಯಾರಿಸೋಣ’, ಎಂದು ಹೇಳಿದ್ದರು. ಅವರ ಈ ಕನಸು ಖಂಡಿತವಾಗಿಯೂ ನನಸಾಗುವುದು. ಆದುದರಿಂದ ‘ಈ ಬಜೆಟ್, ಅಂದರೆ ಸ್ವಾವಲಂಬಿ ಭಾರತದತ್ತ ಇಟ್ಟ ಒಂದು ಮಹತ್ವದ ಹೆಜ್ಜೆಯಾಗಿದೆ’.
– (ನಿವೃತ್ತ) ಬ್ರಿಗೆಡಿಯರ್ ಹೇಮಂತ ಮಹಾಜನ, ಪುಣೆ