ಓರ್ವ ಮುಸಲ್ಮಾನ ಹಾಗೂ ಬಾಂಗಲಾದೇಶಿ ಮಹಿಳಾ ಲೇಖಕಿಗೆ ಹೀಗೆ ಅನಿಸುವುದನ್ನು ಅವರು ಬಹಿರಂಗವಾಗಿ ಹೇಳುತ್ತಾರೆ, ಹಾಗಾದರೆ ಭಾರತದಲ್ಲಿರುವ ತಥಾಕಥಿತ ಪ್ರಗತಿ(ಅಧೋ)ಪರರ ಮಹಿಳೆಯರು ಏಕೆ ಮೌನವಾಗಿದ್ದಾರೆ ? ಹಿಂದೂಗಳ ಸಂದರ್ಭದಲ್ಲಿ ಈ ರೀತಿ ಏನಾದರೂ ನಡೆದಿದರೆ ಆಗ ಮಾತ್ರ ಅವರು ತಕ್ಷಣ ತಮ್ಮ ಬಾಯಿ ಬಿಡುತ್ತಿದ್ದರು ಹಾಗೂ ಹಿಂದೂಗಳಿಗೆ ಉಪದೇಶದ ನುಡಿಮುತ್ತುಗಳನ್ನು ಆಡುತ್ತಾರೆ !
ನವ ದೆಹಲಿ – ಹಿಜಾಬ್ (ಮುಸಲ್ಮಾನ ಮಹಿಳೆಯರ ತಲೆ ಹಾಗೂ ಕುತ್ತಿಗೆಯನ್ನು ಮುಚ್ಚುವ ವಸ್ತ್ರ) ಇದು ಮಹಿಳೆಯರನ್ನು ‘ಲೈಂಗಿಕ ವಸ್ತು’ವನ್ನಾಗಿಸುತ್ತದೆ. ಯಾವುದಾದರೂ ಜಾತ್ಯತೀತ ದೇಶದಲ್ಲಿ ಒಂದು ಶೈಕ್ಷಣಿಕ ಸಂಸ್ಥೆಗೆ ತನ್ನ ವಿದ್ಯಾರ್ಥಿಗಳಿಗೆ ಜಾತ್ಯತೀತ ಸಮವಸ್ತ್ರವನ್ನು ಕಡ್ಡಾಯಪಡಿಸುವ ಸಂಪೂರ್ಣ ಅಧಿಕಾರವಿರುತ್ತದೆ. ಒಂದು ವೇಳೆ ಅಂತಹ ಸಂಸ್ಥೆಗಳು ನಿಮ್ಮನ್ನು ‘ನಿಮ್ಮ ಧಾರ್ಮಿಕ ಪರಿಚಯವನ್ನು ನಿಮ್ಮ ಮನೆಯಲ್ಲಿಡಿ’, ಎಂದು ಹೆಳುತ್ತಿದ್ದರೆ, ಅದರಲ್ಲೇನೂ ತಪ್ಪಿಲ್ಲ. ಶಾಲೆಯಲ್ಲಿ ಧಾರ್ಮಿಕ ಕಟ್ಟಾವಾದಿ ಹಾಗೂ ಅಂಧಶ್ರದ್ಧೆಗೆ ಸ್ಥಾನವಿರುವುದಿಲ್ಲ. ಶಾಲೆಯಲ್ಲಿ ವೈಯಕ್ತಿಕ ಸ್ವಾತಂತ್ರ್ಯ, ಲೈಂಗಿಕ ಸಮಾನತೆ, ಉದಾರವಾದಿ, ಮಾನವಿಯತೆ ಹಾಗೂ ವೈಜ್ಞಾನಿಕ ಸಿದ್ಧಾಂತಗಳ ಶಿಕ್ಷಣವನ್ನು ನೀಡಬೇಕು, ಎಂದು ಬಾಂಗ್ಲಾದೇಶದ ಲೇಖಕಿ ತಸ್ಲೀಮಾ ನಸರೀನರವರು ಓರ್ವ ಆಂಗ್ಲ ವಾರ್ತಾ ಜಾಲತಾಣದಲ್ಲಿ ಸಂದರ್ಶನದಲ್ಲಿ ಹೇಳಿದರು. ತಸ್ಲೀಮಾ ನಸರೀನರು ತಮ್ಮ ಮಾತನ್ನು ಮುದುವರೆಸುತ್ತಾ, ಹಿಜಾಬ, ಬುರಖಾ ಹಾಗೂ ನಕಾಬನ ಉದ್ದೇಶ ಒಂದೇಯಾಗಿದೆ, ಅದೆಂದರೆ ಸ್ತ್ರೀಯನ್ನು ಉಪಭೋಗದ ವಸ್ತುವನ್ನಾಗಿ ಪರಿವರ್ತಿಸುವುದು. ಒಂದು ವೇಳೆ ಮಹಿಳೆಯರನ್ನು ನೋಡಿ ಜೊಲ್ಲು ಸುರಿಸುವ ಪುರುಷರಿಂದ ಮರೆಮಾಚಿಸುವ ಅಗತ್ಯವಿದ್ದರೂ ಕೂಡ ಅಂತಹ ಪದ್ದತಿ ಅತ್ಯಂತ ಅವಮಾನಕರವಾಗಿದೆ. ಈ ಆಚರಣೆ ಆದಷ್ಟು ಬೇಗ ನಿಲ್ಲಿಸಬೇಕು.
— taslima nasreen (@taslimanasreen) February 16, 2022
೭ ನೇ ಶತಮಾನದಲ್ಲಿ ಮಾಡಿದ ಕಾಯಿದೆಯನ್ನು ೨೧ ನೇ ಶತಮಾನದಲ್ಲಿ ಪಾಲಿಸುವ ಅಗತ್ಯವಿದೆಯೇ ? – ನಸರೀನಹಿಜಾಬ ಹಾಗೂ ಇಸ್ಲಾಂ ಒಂದಕ್ಕೊಂದು ಸಂಬಂಧಪಟ್ಟಿದೆಯೇ ಅಥವಾ ಇಲ್ಲವೇ, ಇದು ಅಂಶವಾಗಿರದೆ ಮೂಲದಲ್ಲಿ ೭ನೇ ಶತಮಾನದಲ್ಲಿ ನಿರ್ಮಿಸಿದ ಕಾಯಿದೆಯನ್ನು ೨೧ ನೇ ಶತಮಾನದಲ್ಲಿ ಪಾಲಿಸುವ ಅಗತ್ಯವಿದೆಯೇ?, ಎಂಬುದಾಗಿದೆ. ಹಿಜಾಬ್ ಅಥವಾ ಬುರ್ಖಾ ಇದು ಯಾವುದೇ ಮಹಿಳೆಗೆ ಪ್ರಿಯವಾಗಿರಲು ಸಾಧ್ಯವಿಲ್ಲ, ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಅದು ಯಾವುದಾದರೂ ವ್ಯಕ್ತಿಯ ವ್ಯಕ್ತಿತ್ವದ ಪರಿಚಯದ ಅವಿಭಾಜ್ಯ ಅಂಗವಾಗಲು ಸಾಧ್ಯವಿಲ್ಲ ಎಂದು ಹೇಳಿದರು. |