ಹಿಜಾಬ್ ನ ಪ್ರಕರಣದಲ್ಲಿ ಮುಸಲ್ಮಾನ ಹುಡುಗಿಯರ ನ್ಯಾಯವಾದಿಗಳು ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ಕೇಳಿರುವ ಪ್ರಶ್ನೆಗಳು
ಬಳೆ, ಟಿಕಲಿ ಇತ್ಯಾದಿಗಳನ್ನು ಹಿಜಾಬಿನೊಂದಿಗೆ ಹೋಲಿಸುವ ನ್ಯಾಯವಾದಿಗಳು ತಮಗಿರುವ ಜ್ಞಾನವನ್ನು ತೋರಿಸಿ ಕೊಟ್ಟಿದ್ದಾರೆ. ಇದನ್ನೇ ಅರಳಿ ಮರದ ಸಿಪ್ಪೆಯನ್ನು ಆಲದ ಮರಕ್ಕೆ ಹಚ್ಚುವುದು ಎಂದು ಹೇಳುತ್ತಾರೆ !
ಬೆಂಗಳೂರು (ಕರ್ನಾಟಕ) – ಎಲ್ಲ ವರ್ಗಗಳಲ್ಲಿಯೂ ಅನೇಕ ಧಾರ್ಮಿಕ ಚಿನ್ಹೆಗಳಿವೆ. ಬಳೆಗಳು ಧಾರ್ಮಿಕ ಚಿನ್ಹೆಯಲ್ಲವೇ ? ಬಳೆ ಹಾಗೂ ಟಿಕಲಿ ಧರಿಸುವ ಹುಡುಗಿಯರನ್ನು ಶಾಲೆಯಿಂದ ಹೊರಹಾಕುವುದಿಲ್ಲ. ’ಕ್ರಾಸ್’ ಧರಿಸುವವರ ಮೇಲೆ ನಿರ್ಬಂಧ ಹೇರಲಾಗುವುದಿಲ್ಲ. ಸೈನ್ಯದಲ್ಲಿ ಪಗಡಿ ಹಾಕಿಕೊಂಡವರು ಇರಬಹುದು. ಹೀಗಿರುವಾಗ ಧಾರ್ಮಿಕ ಚಿನ್ಹೆಗಳೊಂದಿಗೆ ತರಗತಿಯಲ್ಲಿ ಏಕೆ ಕುಳಿತುಕೊಳ್ಳಲು ಸಾಧ್ಯವಿಲ್ಲ ? ಈ ಭೇದಭಾವ ಏಕೆ ? ಮುಸಲ್ಮಾನ ಹುಡುಗಿಯರನ್ನು ಧರ್ಮದ ಆಧಾರದಲ್ಲಿ ತರಗತಿಯಿಂದ ಹೊರಗೆ ಕಳುಹಿಸಲಾಗುತ್ತಿದೆ. ಈ ಘಟನೆಯು ಕಲಮು ೧೫ರ ಉಲ್ಲಂಘನೆಯಾಗಿದೆ. ಹಿಜಾಬ (ಮುಸಲ್ಮಾನ ಮಹಿಳೆಯರು ತಲೆ ಹಾಗೂ ಕುತ್ತಿಗೆಯನ್ನು ಮುಚ್ಚಲು ಬಳಸುವ ಬಟ್ಟೆ ) ಧರಿಸುವ ಮುಸಲ್ಮಾನ ವಿದ್ಯಾರ್ಥಿನಿಯರಿಗೆ ತರಗತಿಗೆ ಹೋಗಲು ಬಿಡಲಿಲ್ಲ. ಇದು ಭೇದಭಾವವಾಗಿದೆ, ಎಂಬ ಯುಕ್ತಿವಾದವನ್ನು ವಿಚಾರಣೆಯ ಸಂದರ್ಭದಲ್ಲಿ ಹಿಜಾಬಿನ ಪ್ರಕರಣದಲ್ಲಿ ನ್ಯಾಯಾಲಯದಲ್ಲಿ ಮುಸಲ್ಮಾನ ವಿದ್ಯಾರ್ಥಿನಿಯರ ಪಕ್ಷದಲ್ಲಿ ವಾದಿಸುತ್ತಿರುವ ನ್ಯಾಯವಾದಿ ಕುಮಾರರವರು ಮಂಡಿಸಿದರು.
#KarnatakaHijabRow: Govt picking on #Hijab alone; ‘if bindis, ghoonghat, turbans are permitted, why not hijab?’ argues petitioner in HC; reports Shankar Raj#India #News #HijabRow #KarnatakaHijabControversy #Legal #FPJLegal https://t.co/PAOcHVw4Vl
— Free Press Journal (@fpjindia) February 17, 2022
೧. ನ್ಯಾಯವಾದಿ ಕುಮಾರರವರು, ಶಿಕ್ಷಣ ಇಲಾಖೆಯು ಮಹಾವಿದ್ಯಾಲಯದ ನಿಯಮಾವಳಿಗಳಲ್ಲಿ ಯಾವುದೇ ಸಮವಸ್ತ್ರವನ್ನು ನಿರ್ಧರಿಸಿಲ್ಲ. ಸಮವಸ್ತ್ರವನ್ನು ಹೇರಿದ್ದರಿಂದ ಪ್ರಾಚಾರ್ಯರ ಮೇಲೆ ಕಾರ್ಯಾಚರಣೆಯ ಎಚ್ಚರಿಕೆಯನ್ನೂ ನೀಡಿದ್ದಾರೆ. ನಿಯಮ ಹಾಗೂ ಕಾನೂನಿನಲ್ಲಿ ಯಾವುದೇ ನಿರ್ಬಂಧವಿಲ್ಲ’ ಎಂದು ಹೇಳಿದರು.
೨. ಇದಕ್ಕೆ ನ್ಯಾಯಾಲಯವೂ ’ನಿಯಮಗಳಲ್ಲಿ ಒಂದು ಸಂಗತಿ ಇಲ್ಲದಿದ್ದರೆ ಅದರ ಅರ್ಥ ’ಅದಕ್ಕೆ ಅನುಮತಿ ಇದೆ’ ಎಂದು ಆಗುತ್ತದೆಯೇ ?ಹೀಗಿದ್ದರೆ ತರಗತಿಯಲ್ಲಿ ಶಸ್ತ್ರವನ್ನು ತರಲು ಅನುಮತಿಯ ಆವಶ್ಯಕತೆಯೇ ಇಲ್ಲ. ಏಕೆಂದರೆ ಅದರ ಮೇಲೆ ನಿರ್ಬಂಧವಿಲ್ಲ. ಶೈಕ್ಷಣಿಕ ನಿಯಮಗಳಲ್ಲಿ ಸಮವಸ್ತ್ರವನ್ನು ನಿರ್ಧರಿಸಲು ಸಾಧ್ಯವಿಲ್ಲವೇ ? ಎಂದು ಕೇಳಿದೆ.
೩. ಇದಕ್ಕೆ ನ್ಯಾಯವಾದಿ ಕುಮಾರ ರವರು ’ಶೈಕ್ಷಣಿಕ ನಿಯಮ ಹಾಗೂ ಸಮವಸ್ತ್ರಕ್ಕೆ ಯಾವುದೇ ಸಂಬಂಧವಿಲ್ಲ. ಈ ನಿಯಮಗಳು ಶಿಕ್ಷಕ, ವಿದ್ಯಾರ್ಥಿ, ಪಠ್ಯಕ್ರಮ ಇತ್ಯಾದಿಗಳಿಗೆ ಸಂಬಂಧಿಸಿದೆ’ ಎಂದು ಹೇಳಿದರು.