ಅಖಿಲೇಶ್ ಯಾದವ್ ವಿರುದ್ಧ ಚುನಾವಣೆಗೆ ಸ್ಪರ್ದಿಸುತ್ತಿರುವ ಕೇಂದ್ರ ಸಚಿವ ಬಘೇಲ್ ಅವರ ಬೆಂಗಾವಲು ವಾಹನದ ಮೇಲೆ ೧೦೦ ಜನರಿಂದ ದಾಳಿ

ದಾಳಿಕೋರರು ಯಾರ ಮಾತು ಕೇಳಿ ಸಚಿವ ಬಘೆಲ ಇವರ ಮೇಲೆ ದಾಳಿ ಮಾಡಿದರು. ಎಂಬುದನ್ನು ಬಹಿರಂಗ ಪಡಿಸಬೇಕು

ಮೈನ್‌ಪುರಿ (ಉತ್ತರ ಪ್ರದೇಶ) – ಇಲ್ಲಿಯ ಕರಹಾಲ್ ಚುನಾವಣಾ ಕ್ಷೇತ್ರದಿಂದ ಸಮಾಜವಾದಿ ಪಕ್ಷದ ಅದ್ಯಕ್ಷ ಅಖಿಲೇಶ್ ಯಾದವ್ ವಿರುದ್ಧ ಸ್ಪರ್ದಿಸುತ್ತಿರುವ ಭಾಜಪದ ಅಭ್ಯರ್ಥಿ ಮತ್ತು ಕೇಂದ್ರಿಯ ರಾಜ್ಯ ಸಚಿವ ಎಸ್.ಪಿ.ಸಿಂಘ ಬಘೇಲ್ ಅವರ ಬೆಂಗಾವಲು ಪಡೆ ಮೇಲೆ ಫೆಬ್ರುವರಿ ೧೫ ರ ರಾತ್ರಿಯಂದು ದಾಳಿ ನಡೆಸಲಾಯಿತು. ಇದರಲ್ಲಿ ಬಘೇಲ್ ಬದುಕುಳಿದರು. ‘ದಾಳಿಕೊರರು ಬಘೇಲ್ ಅವರನ್ನು ಕೊಲ್ಲಲು ಸಂಚು ರೂಪಿಸಿದ್ದರು’, ಎಂದು ಉಪಮುಖ್ಯಮಂತ್ರಿ ಕೇಶವ ಪ್ರಸಾದ ಮೌರ್ಯ ಗಂಭಿರ ಆರೋಪ ಮಾಡಿದ್ದಾರೆ.

ಗದ್ದೆಯಲ್ಲಿ ಕಾದು ಕುಳಿತಿದ್ದ ಕನಿಷ್ಠ ೧೦೦ ಮಂದಿ ದಾಳಿಕೋರರು ಬಘೇಲ್ ಅವರ ಬೆಂಗಾವಲು ಪಡೆಯ ವಾಹನಗಳ ಮೇಲೆ ಇದ್ದಕ್ಕಿದ್ದಂತೆ ಕಲ್ಲೆಸೆಯಲು ಆರಂಭಿಸಿದರು. ಇದರಿಂದ ಪಡೆಯು ನಿಲ್ಲಿಸಸುತ್ತಿರುವಾಗ ದಾಳಿಕೊರರು ರಸ್ತೆಗೆ ಬಂದರು ಮತ್ತು ಬೆಂಗಾವಲು ಪಡೆಯ ವಾಹನದ ಮೇಲೆ ದೊಣ್ಣೆಗಳಿಂದ ದಾಳಿ ಮಾಡಿ ನಂತರ ಪರಾರಿಯಾದರು.