ಅರಬ್ಬಿ ಸಮುದ್ರದಲ್ಲಿ ಪಾಕಿಸ್ತಾನದಿಂದ ಬಂದಿದ್ದ ನೌಕೆಯಿಂದ 2 ಸಾವಿರ ಕೋಟಿ ರೂಪಾಯಿ ಮಾದಕ ಪದಾರ್ಥಗಳು ವಶಕ್ಕೆ

ನವದೆಹಲಿ – ಮಾದಕ ಪದಾರ್ಥ ನಿಯಂತ್ರಣ ವಿಭಾಗದ (`ಎನ್.ಸಿ.ಬಿ.’ಯು) ಮತ್ತು ಭಾರತೀಯ ನೌಕಾದಳ ಸಂಯುಕ್ತವಾಗಿ ಅರಬ್ಬಿ ಸಮುದ್ರದ ಒಂದು ನೌಕೆಯ ಮೇಲೆ ಕ್ರಮಕೈಗೊಂಡು 763 ಕೇಜಿ ಮಾದಕ ಪದಾರ್ಥ ವಶಪಡಿಸಿಕೊಂಡಿದ್ದಾರೆ. ಅದು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ 2 ಸಾವಿರ ಕೋಟಿ ರೂಪಾಯಿಯಷ್ಟು ಬೆಲೆ ಇದೆ. ಈ ಮಾದಕ ವಸ್ತುಗಳ ಸರಬರಾಜು ಮುಂಬಯಿಯಲ್ಲಿ ಆಗುವುದಿತ್ತು, ಎಂದು ಹೇಳಲಾಗುತ್ತಿದೆ. ಈ ನೌಕೆ ಗುಜರಾತಿನ ಪೊರಬಂದರಿಗೆ ತರಲಾಗಿದೆ. ಈ ಮಾದಕ ಪದಾರ್ಥಗಳು ಪಾಕಿಸ್ತಾನದಿಂದ ಕಳುಹಿಸಿರುವ ಬಗ್ಗೆ ಸಂಶಯ ವ್ಯಕ್ತಪಡಿಸಲಾಗಿದೆ.