ಇಂತಹ ಚಿತ್ರಹಿಂಸೆಯಿಂದಾಗಿಯೇ ಪಾಕಿಸ್ತಾನದಲ್ಲಿ ಯಾರು ಇಸ್ಲಾಮಿನ ಅಪಮಾನ ಮಾಡುವ ಧೈರ್ಯ ಮಾಡುವುದಿಲ್ಲ. ತದ್ವಿರುದ್ಧ ಭಾರತದಲ್ಲಿ ಹಿಂದೂಗಳೇ ತಮ್ಮ ಧರ್ಮ ಮತ್ತು ದೇವತೆಗಳ ಅಪಮಾನ ಮಾಡುತ್ತಾರೆ. ಹಾಗೂ ಇತರ ಹಿಂದೂಗಳು ಅದನ್ನು ಕಾನೂನು ಮಾರ್ಗವಾಗಿ ವಿರೋಧಿಸುವುದಿಲ್ಲ, ಇದು ಹಿಂದೂಗಳಿಗೆ ನಾಚಿಕೆಗೇಡು ! -ಸಂಪಾದಕರು
ಖಾನೆವಾಲ (ಪಾಕಿಸ್ತಾನ) – ಪಾಕಿಸ್ತಾನದ ಪಂಜಾಬ್ ಪ್ರಾಂತದ ಖಾನೆವಾಲ ಜಿಲ್ಲೆಯ ಜಂಗಲ್ ಡೇರಾ ಊರಿನಲ್ಲಿ ಧರ್ಮ ನಿಂದನೆ ಮಾಡಿದ ಪ್ರಕರಣದಲ್ಲಿ ಒಬ್ಬ ವ್ಯಕ್ತಿಯನ್ನು ಮರಕ್ಕೆ ನೇತುಹಾಕಿ ಸಾಯುವವರೆಗೆ ಕಲ್ಲುಗಳಿಂದ ಹೊಡೆಯಲಾಯಿತು. ಆ ವ್ಯಕ್ತಿ ಕುರಾನಿನ ಪುಟಗಳನ್ನು ಹರಿದು ಅದನ್ನು ಸುಟ್ಟಿರುವ ಆರೋಪ ಮಾಡಲಾಗಿದೆ. ಈ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದರು; ಆದರೆ ಮತಾಂಧರ ಗುಂಪು ಪೊಲೀಸರ ವಶದಲ್ಲಿರುವ ಈ ವ್ಯಕ್ತಿಯನ್ನು ಬಿಡಿಸಿ ಅವನ ಹತ್ಯೆ ಮಾಡಿದರು. ಆ ವ್ಯಕ್ತಿ ಸ್ಪಷ್ಟೀಕರಣ ನೀಡುವ ಪ್ರಯತ್ನ ಮಾಡುತ್ತಿದ್ದನು; ಆದರೆ ಮತಾಂಧರು ಅವನ ಯಾವ ಮಾತು ಕೇಳಿಸಿಕೊಳ್ಳಲಿಲ್ಲ. ಈ ಮೊದಲು ಪಾಕಿಸ್ತಾನದಲ್ಲಿ ಸಿಯಾಲ್ ಕೋಟ್‍ನಲ್ಲಿ ಕಳೆದ ವರ್ಷ ಡಿಸೆಂಬರನಲ್ಲಿ ಕೆಲವು ಕಾರ್ಮಿಕರು ಧರ್ಮನಿಂದನೆ ಮಾಡಿರುವ ಆರೋಪದ ಮೇಲೆ ಶ್ರೀಲಂಕಾದ ಒಬ್ಬ ನಾಗರಿಕನನ್ನು ಥಳಿಸಿ ಅವನನ್ನು ಜೀವಂತವಾಗಿ ಸುಟ್ಟು ಹತ್ಯೆ ಮಾಡಿದ್ದರು.
A man was stoned to death in a remote village in Pakistan’s Punjab province for allegedly desecrating a religious book.#World #Pakistan #News https://t.co/AhkaevSdYz
— IndiaToday (@IndiaToday) February 13, 2022