ಪಾಕಿಸ್ತಾನದ ಪಂಜಾಬ ಪ್ರಾಂತದಲ್ಲಿ ಕಳೆದ ೬ ತಿಂಗಳಿಂದ ೨ ಸಾವಿರದ ೪೩೯ ಮಹಿಳೆಯರ ಮೇಲೆ ಬಲಾತ್ಕಾರ !

ಭಾರತದಲ್ಲಿ ಕರ್ನಾಟಕದ ಮಹಾವಿದ್ಯಾಲಯದಲ್ಲಿ ಹೆಣ್ಣುಮಕ್ಕಳು ಹಿಜಾಬ್ ಧರಿಸುವುದರ ಬಗ್ಗೆ ನಿಷೇಧ ಹೇರಿರುವುದರಿಂದ ಪಾಕಿಸ್ತಾನ ಚಡಪಡಿಸುತ್ತಿದೆ; ಆದರೆ ಪಾಕಿಸ್ತಾನದ ಒಂದು ಪ್ರಾಂತದಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಸ್ತ್ರೀಯರ ಮೇಲೆ ಅತ್ಯಾಚಾರ ನಡೆಯುತ್ತಿದ್ದರೂ ಮೌನವಾಗಿ ಕುಳಿತುಕೊಳ್ಳುತ್ತದೆ. ಪಾಕಿಸ್ತಾನದ ಈ ದ್ವಿಮುಖ ನೀತಿಯನ್ನು ಗಮನದಲ್ಲಿಟ್ಟುಕೊಳ್ಳಿ !

ಪಾಕಿಸ್ತಾನದಲ್ಲಿ ಮಹಿಳೆಯರ ಸ್ಥಿತಿಯ ವಿಷಯವಾಗಿ ಜಾಗತಿಕ ಮಹಿಳಾ ಆಯೋಗ, ಮಹಿಳಾ ಸಂಘಟನೆಗಳು ಹಾಗೂ ಭಾರತದ ಮಹಿಳಾ ನಾಯಕಿಯರು ಏಕೆ ಮಾತನಾಡುವುದಿಲ್ಲ ?

ಲಾಹೋರ (ಪಾಕಿಸ್ತಾನ) – ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ಕಳೆದ ೬ ತಿಂಗಳಲ್ಲಿ ೨ ಸಾವಿರ ೪೩೯ ಮಹಿಳೆಯರ ಮೇಲೆ ಬಲಾತ್ಕಾರ ನಡೆದಿದೆ ಮತ್ತು ೯೦ ಜನರ ಹತ್ಯೆ ಮಾಡಲಾಗಿದೆ, ಎಂದು ಪಂಜಾಬ ಮಾಹಿತಿ ಆಯೋಗದ ಅಂಕಿಸಂಖ್ಯೆಯಿಂದ ಈ ಮಾಹಿತಿ ಬೆಳಕಿಗೆ ಬಂದಿದೆ. ಹಾಗೂ ‘ಇಂತಹ ಪ್ರಕರಣಗಳಲ್ಲಿ ಶೇ. ೧ ಗಿಂತಲೂ ಕಡಿಮೆ ತಪ್ಪಿತಸ್ಥರಿಗೆ ಶಿಕ್ಷೆಯಾಗುತ್ತದೆ’, ಹೀಗೂ ಅದರಲ್ಲಿ ಹೇಳಲಾಗಿದೆ. ಪಾಕಿಸ್ತಾನ ಮಾನವ ಹಕ್ಕುಗಳ ಆಯೋಗದ ವರದಿಯ ಪ್ರಕಾರ ಪಾಕಿಸ್ತಾನದಲ್ಲಿ ಪ್ರತಿದಿನ ೧೧ ಬಲಾತ್ಕಾರದ ಘಟನೆಗಳು ನಡೆಯುತ್ತವೆ.

೧. ಕಳೆದ ೬ ತಿಂಗಳಿನಲ್ಲಿ ಪಂಜಾಬ ಪ್ರಾಂತದ ರಾಜಧಾನಿ ಲಾಹೋರಿನಲ್ಲಿ ೪೦೦ ಮಹಿಳೆಯರ ಮೇಲೆ ಬಲತ್ಕಾರ ನಡೆದಿರುವ ಘಟನೆಗಳು ದಾಖಲಾಗಿವೆ ಹಾಗೂ ೨ ಸಾವಿರ ೩೦೦ ಕ್ಕಿಂತ ಹೆಚ್ಚಿನ ಮಹಿಳೆಯರ ಅಪಹರಣ ನಡೆದಿದೆ.

೨. ೨೦೧೫ ರಿಂದ ೨೦೨೧ ವರೆಗೆ ಈ ೬ ವರ್ಷದ ಕಾಲಾವಧಿಯಲ್ಲಿ ಬಲಾತ್ಕಾರ ಮತ್ತು ಅಪಹರಣದ ೨೨ ಸಾವಿರ ಪ್ರಕರಣಗಳನ್ನು ಪೊಲೀಸರಲ್ಲಿ ದಾಖಲಿಸಿದೆ. ಈ ೨೨ ಸಾವಿರ ಪ್ರಕರಣಗಳ ಪೈಕಿ ಕೇವಲ ೭೭ ಪ್ರಕರಣಗಳಲ್ಲಿ ಆರೋಪಿಗಳನ್ನು ತಪ್ಪಿತಸ್ಥರನ್ನಾಗಿ ಹೇಳಲಾಗಿದೆ.

ಪ್ರಾ. ನಿದಾ ಕಿರಮಾನಿ

೩. ಲಾಹೋರ್ ಯೂನಿವರ್ಸಿಟಿ ಆಫ್ ಮ್ಯಾನೇಜ್ಮೆಂಟ್ ಸೈನ್ಸ್‌ನ ಪ್ರಾ. ನಿದಾ ಕಿರಮಾನಿ ಇವರು, ಪಾಕಿಸ್ತಾನದಲ್ಲಿ ಲೈಂಗಿಕ ಶೋಷಣೆಯ ಪ್ರಕರಣಗಳಲ್ಲಿ ಸಂತ್ರಸ್ಥರನ್ನು ತಪ್ಪಿತಸ್ಥರನ್ನಾಗಿ ಮಾಡಲಾಗುತ್ತದೆ.