ಸ್ವಾತಂತ್ರ್ಯದ ಬಳಿಕ ದೇಶದಲ್ಲಿ ಕಾಂಗ್ರೆಸ್ ಇಲ್ಲದಿದ್ದರೆ, ಭಾರತದಲ್ಲಿ ಪ್ರಜಾಪ್ರಭುತ್ವದ ವಂಶಪಾರಂಪರೆಯ ಆಡಳಿತದಿಂದ ಮುಕ್ತವಾಗಿರುತ್ತಿತ್ತು !

ರಾಜ್ಯಸಭೆಯಲ್ಲಿ ಪ್ರಧಾನಮಂತ್ರಿ ಮೋದಿಯವರಿಂದ ಕಾಂಗ್ರೆಸ್ ಮೇಲೆ ತೀಕ್ಷ್ಣ ವಾಗ್ದಾಳಿ

ನವದೆಹಲಿ – ಸ್ವಾತಂತ್ರ್ಯದ ಬಳಿಕ ಒಂದು ವೇಳೆ ದೇಶದಲ್ಲಿ ಕಾಂಗ್ರೆಸ್ ಇಲ್ಲದಿದ್ದರೆ, ಭಾರತದಲ್ಲಿರುವ ಪ್ರಜಾಪ್ರಭುತ್ವ ವಂಶಪಾರಂಪರೆಯ ಆಡಳಿತದಿಂದ ಮುಕ್ತವಾಗಿರುತ್ತಿತ್ತು. ಈ ದೇಶವು ವಿದೇಶಿಯರ ಸಂಕಲ್ಪನೆಗಿಂತ ಸ್ವದೇಶದವರ ಸಂಕಲ್ಪನೆಯಿಂದ ಸಾಗುತ್ತಿತ್ತು, ತುರ್ತು ಪರಿಸ್ಥಿತಿಯ ಕಳಂಕ ತಗಲುತ್ತಿರಲಿಲ್ಲ, ದೇಶದಲ್ಲಿ ಮತೀಯತೆ ಇರುತ್ತಿರಲಿಲ್ಲ, ಸಿಕ್ಖರ ಹತ್ಯಾಕಾಂಡ ಆಗುತ್ತಿರಲಿಲ್ಲ, ಭಯೋತ್ಪಾದನೆ ಇರುತ್ತಿರಲಿಲ್ಲ, ಕಾಶ್ಮೀರಿ ಹಿಂದೂಗಳಿಗೆ ಕಾಶ್ಮೀರವನ್ನು ತೊರೆಯಬೇಕಾಗುತ್ತಿರಲಿಲ್ಲ, ಜೊತೆಗೆ ಸಾಮಾನ್ಯ ನಾಗರಿಕರಿಗೆ ಮೂಲಭೂತ ಸೌಕರ್ಯಗಳಿಗೆ ದಾರಿ ಕಾಯಬೇಕಾಗುತ್ತಿರಲಿಲ್ಲ, ಎಂದು ಕಠೋರ ಶಬ್ದಗಳಿಂದ ಪ್ರಧಾನ ಮಂತ್ರಿ ಮೋದಿಯವರು ರಾಜ್ಯಸಭೆಯಲ್ಲಿ ಕಾಂಗ್ರೆಸ್ಸನ್ನು ಟೀಕಿಸಿದರು. ಈ ಸಂಸತ್ತಿನಲ್ಲಿ ವಾರ್ಷಿಕ ಆಯ-ವ್ಯಯ ಮುಂಗಡ ಪತ್ರದ ಅಧಿವೇಶನದಲ್ಲಿ ರಾಷ್ಟ್ರಪತಿಗಳ ಭಾಷಣದ ಮೇಲೆ ಮಾತನಾಡುತ್ತಿದ್ದರು. ಈ ಹಿಂದೆಯೂ ಅವರು ಲೋಕಸಭೆಯಲ್ಲಿ ಭಾಷಣ ಮಾಡಿದ್ದರು. ‘ಸ್ವಾತಂತ್ರ್ಯ ದೊರಕುತ್ತಿರುವಾಗ ‘ಕಾಂಗ್ರೆಸ್ಸನ್ನು ವಿಸರ್ಜಿಸಿರಿ’, ಎಂದು ಮ. ಗಾಂಧಿಯವರು ಹೇಳಿದ್ದರು. ಹಾಗಾಗುತ್ತಿದ್ದರೆ, ದೇಶದಲ್ಲಿ ಏನಾಗುತ್ತಿತ್ತು’, ಎಂಬುದನ್ನು ಹೇಳುತ್ತಾ ಮೋದಿಯವರು ಕಾಂಗ್ರೆಸ್ ಮಾಡಿರುವ ತಪ್ಪುಗಳ ಪಟ್ಟಿಯನ್ನು ಓದಿದರು.

ಮೋದಿಯವರು ತಮ್ಮ ಮುಂದುವರಿಯುತ್ತಾ,

೧. ಕಾಂಗ್ರೆಸ್ ಎಂದೂ ವಂಶಪಾರಂಪರ್ಯವನ್ನು ಹೊರತುಪಡಿಸಿ ಯಾವುದನ್ನೂ ವಿಚಾರ ಮಾಡಲಿಲ್ಲ. ದೇಶಕ್ಕೆ ಎಲ್ಲಕ್ಕಿಂತ ದೊಡ್ಡ ಸಂಕಟವೆಂದರೆ ವಂಶಪಾರಂಪರೆಯ ಪಕ್ಷದಿಂದ ಇದೆ. ಪಕ್ಷದಲ್ಲಿ ಯಾವಾಗ ಒಂದು ಕುಟುಂಬ ಪ್ರಭಾವಶಾಲಿಯಾಗುತ್ತದೆಯೋ, ಆಗ ಎಲ್ಲಕ್ಕಿಂತ ಮೊದಲು ಗುಣವತ್ತತೆಯನ್ನು ಗುರಿ ಮಾಡಲಾಗುತ್ತದೆ. ಎಲ್ಲ ಪಕ್ಷಗಳು ತಮ್ಮ ತಮ್ಮ ಪಕ್ಷದಲ್ಲಿ ಪ್ರಜಾಪ್ರಭುತ್ವವನ್ನು ಜಾರಿಗೊಳಿಸಬೇಕು. ಕಾಂಗ್ರೆಸ್ ಪಕ್ಷ ಎಲ್ಲರಿಗಿಂತ ಮೊದಲು ವಿಚಾರ ಮಾಡಬೇಕು.

೨. ಕಾಂಗ್ರೆಸ್ ತನ್ನ ರಾಜಕೀಯ ಅವಧಿಯಲ್ಲಿ ಸಣ್ಣ ಪುಟ್ಟ ವಿಷಯಗಳಿಗೆ ಮುಖ್ಯಮಂತ್ರಿಗಳನ್ನು ತೆಗೆದು ಹಾಕುತ್ತಿತ್ತು. ಕಾಂಗ್ರೆಸ್ ಇಲ್ಲಿಯವರೆಗೆ ಸುಮಾರು ೧೦೦ ಸಲ ಚುನಾವಣೆಯಲ್ಲಿ ಆಯ್ಕೆಯಾಗಿರುವ ವಿವಿಧ ರಾಜ್ಯ ಸರಕಾರಗಳನ್ನು ಕಿತ್ತೆಸೆದಿದೆ(ವಿಸರ್ಜಿಸಿದೆ). ಈಗ ಅದು ಯಾವ ಬಾಯಿಯಿಂದ ಪ್ರಜಾಪ್ರಭುತ್ವದ ವಿಷಯದ ಕುರಿತು ಮಾತನಾಡುತ್ತಿದೆ ? ಒಬ್ಬ ಪ್ರಧಾನಮಂತ್ರಿ ೫೦ ರಾಜ್ಯ ಸರಕಾರಗಳನ್ನು ಕಿತ್ತೆಸೆದಿದೆ. ಇದರ ಉತ್ತರ ಜನತೆಗೆ ನೀಡಬೇಕಾಗುವುದು. ಇಂದು ಅವರು ಅದರ ಶಿಕ್ಷೆಯನ್ನೇ ಅನುಭವಿಸುತ್ತಿದ್ದಾರೆ. ಕಾಂಗ್ರೆಸ್ಸಿನ ಆಡಳಿತದ ನಶೆಯ ಕಾರಣದಿಂದ ಇಂದು ತೇಲಂಗಾಣ ಮತ್ತು ಆಂಧ್ರಪ್ರದೇಶ ರಾಜ್ಯಗಳಲ್ಲಿ ಕಹಿ ನಿರ್ಮಾಣವಾಗಿದೆ ಎಂದು ಹೇಳಿದರು.

ನೆಹರೂದಿಂದಾಗಿ ಗೋವಾ ಭಾರತದ ಸ್ವಾತಂತ್ರ್ಯದ ಬಳಿಕವೂ ೧೫ ವರ್ಷಗಳ ವರೆಗೆ ಗುಲಾಮಗಿರಿಯಲ್ಲಿತ್ತು !

ಪ್ರಧಾನಮಂತ್ರಿ ಮೋದಿಯವರು ಗೋವಾದ ಉದಾಹರಣೆಯನ್ನು ಕೊಡುತ್ತಾ ಕಾಂಗ್ರೆಸ್ಸನ್ನು ಗುರಿ ಮಾಡಿದರು. ಅವರು ಮುಂದುವರಿಸುತ್ತಾ, ಸರದಾರ ಪಟೇಲರು ಹೈದರಾಬಾದ ಮತ್ತು ಜುನಾಗಡಕ್ಕೆ ಸ್ವಾತಂತ್ರ್ಯ ದೊರಕಿಸಿಕೊಡಲು ವ್ಯೂಹರಚಿಸಿದರು. ಅಂತಹ ವ್ಯೂಹ ರಚನೆಯನ್ನು ಗೋವಾಗಾಗಿಯೂ ರಚಿಸಿದ್ದರೆ, ಗೋವಾಕ್ಕೆ ಇನ್ನೂ ೧೫ ವರ್ಷಗಳ ವರೆಗೆ ಗುಲಾಮಗಿರಿಯಲ್ಲಿ ಇರಬೇಕಾಗುತ್ತಿರಲಿಲ್ಲ. ಪೋರ್ಚುಗೀಸರ ಅತ್ಯಾಚಾರವನ್ನು ಸಹಿಸಬೇಕಾಗುತ್ತಿರಲಿಲ್ಲ; ಆದರೆ ಆಗಿನ ಪ್ರಧಾನ ಮಂತ್ರಿ ನೆಹರೂರವರು ಜಗತ್ತಿನಲ್ಲಿ ತಮ್ಮ ಪ್ರತಿಷ್ಠೆ ಮಹತ್ವದ್ದು ಎಂದೆನಿಸುತ್ತಿತ್ತು. ಅದನ್ನು ರಕ್ಷಿಸಿಕೊಳ್ಳಲು ಗೋವಾದ ಜನತೆಯನ್ನು ನಿರ್ಲಕ್ಷಿಸಲಾಯಿತು.

ಸ್ವಾತಂತ್ರ್ಯವೀರ ಸಾವರಕರರ ಕವಿತೆಯನ್ನು ಹೇಳಿದರು; ಎಂದು ಹೃದಯನಾಥ ಮಂಗೇಶಕರರನ್ನು ಕಾಂಗ್ರೆಸ್ ಆಕಾಶವಾಣಿಯಿಂದ ತೆಗೆದು ಹಾಕಿದರು !

ಈ ಸಂದರ್ಭದಲ್ಲಿ ಮೋದಿಯವರು ಮಾತನಾಡುತ್ತಾ, ಲತಾ ಮಂಗೇಶ್ಕರರ ಕುಟುಂಬ ಗೋವಾದವರಾಗಿದ್ದರು. ಅವರ ಕುಟುಂಬಕ್ಕೆ ಯಾವ ರೀತಿ ನಡೆಸಿಕೊಳ್ಳಲಾಯಿತು ಎನ್ನುವುದು ದೇಶಕ್ಕೆ ತಿಳಿಸಬೇಕು. ಲತಾಜಿಯವರ ಸಹೋದರ ಹೃದಯನಾಥ ಮಂಗೇಶಕರ ಇವರನ್ನು ‘ಆಲ್ ಇಂಡಿಯಾ ರೇಡಿಯೋ’ ದಿಂದ ತೆಗೆಯಲಾಯಿತು. ಅವರ ತಪ್ಪು ಇಷ್ಟೇ ಇತ್ತು, ಅವರು ಸಾವರಕರರ ಬಗ್ಗೆ ಕವಿತೆಯನ್ನು ರೇಡಿಯೋದಲ್ಲಿ ಪ್ರಸಾರ ಮಾಡಿಸಿದ್ದರು. ರೇಡಿಯೋದಲ್ಲಿ ಈ ಕವಿತೆಯನ್ನು ಪ್ರಸಾರ ಮಾಡುವ ಮೊದಲು ಹೃದಯನಾಥ ಮಂಗೇಶಕರ ಇವರು ಸ್ವಾತಂತ್ರ್ಯವೀರ ಸಾವರಕರರನ್ನು ಭೇಟಿಯಾಗಿದ್ದರು. ಆ ಸಮಯದಲ್ಲಿ ‘ನನ್ನ ಕವಿತೆಯನ್ನು ರೇಡಿಯೋದಲ್ಲಿ ಪ್ರಸಾರ ಮಾಡಿ ನಿಮಗೆ ಸೆರೆ ಮನೆಗೆ ಹೋಗಬೇಕಾಗಿದೆಯೇ ?’ ಎಂದು ಸಾವರಕರರು ಅವರನ್ನು ಪ್ರಶ್ನಿಸಿದ್ದರು. ಮಂಗೇಶಕರರು ಈ ಘಟನೆಯ ಉಲ್ಲೇಖವನ್ನು ಒಂದು ಸಂದರ್ಶನದಲ್ಲಿ ಮಾಡಿದ್ದರು. ಹೃದಯನಾಥರು ಸಾವರಕರರ ಕವಿತೆಯನ್ನು ರೇಡಿಯೋದಲ್ಲಿ ಪ್ರಸಾರ ಮಾಡಿದ ಬಳಿಕ ಮುಂದೆ ೮ ದಿನಗಳ ಬಳಿಕ ಅವರನ್ನು ಕೆಲಸದಿಂದ ಕಿತ್ತು ಹಾಕಲಾಯಿತು ಎಂದು ಹೇಳಿದರು.