ಕಾಶ್ಮೀರದ ಬಗ್ಗೆ ಪಾಕಿಸ್ತಾನಕ್ಕೆ ಬೆಂಬಲ ನೀಡುವ ಪೋಸ್ಟ್ ಮಾಡಿದ್ದರಿಂದ ‘ಕೆಎಫಸಿ’ ಕಂಪನಿಯಿಂದ ಕ್ಷಮಾಯಾಚನೆ

‘ಪಿಜ್ಜಾ ಹಟ್’ನಿಂದ ಈವರೆಗೂ ಕ್ಷಮಾಯಾಚಿಸಿಲ್ಲ !

ಪಾಕಿಸ್ತಾನದಲ್ಲಿ ಇರುವಾಗ ಅದಕ್ಕೆ ಬೆಂಬಲ ನೀಡುವುದು ಮತ್ತು ಭಾರತದಲ್ಲಿ ಕ್ಷಮೆ ಕೇಳಿ ನುಣುಚಿಕೊಳ್ಳುವುದು, ಇದರಿಂದ ಪಾಕಿಸ್ತಾನದಲ್ಲಿಯೂ ವ್ಯವಸಾಯ ಮಾಡಿ ಮತ್ತು ಭಾರತದಲ್ಲಿಯೂ ವ್ಯವಸಾಯ ಮುಂದುವರೆಸಬಹುದು, ಇಂತಹ ಮಾನಸಿಕತೆಯಿಂದ ವಿದೇಶಿ ಕಂಪನಿಗಳು ಕಾಶ್ಮೀರದ ಬಗ್ಗೆ ಮಾತನಾಡುತ್ತಾರೆ. ಇದನ್ನು ನೋಡುತ್ತಿದ್ದರೆ ಭಾರತ ಸರಕಾರವು ಇಂತಹ ಕಂಪನಿಗಳನ್ನು ದೇಶದಿಂದ ಹೊರಗಟ್ಟಬೇಕು.

ನವದೆಹಲಿ – ‘ಹೂಂಡೈ’ ಮತ್ತು ‘ಕಿಯಾ’ ಈ ಚತುಶ್ಚಕ್ರ ಕಂಪನಿಗಳು ಕಾಶ್ಮೀರದಲ್ಲಿ ಪ್ರತ್ತೇಕವಾದಿ ಆಂದೋಲನವನ್ನು ಬೆಂಬಲಿಸಿದ ನಂತರ ಆಹಾರ ಪದಾರ್ಥ ಮಾರಾಟ ಮಾಡುವ ಕಂಪನಿ ‘ಕೆಎಫ್‌ಸಿ’ಯ ಪಾಕಿಸ್ತಾನಿ ಶಾಖೆಯಿಂದಲೂ ಕೂಡ ಟ್ವೀಟ್ ಮೂಲಕ ಈ ರೀತಿ ಬೆಂಬಲ ಮಾಡಲಾಗಿತ್ತು. ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿ ವಿರೋಧಿಸಲಾಯಿತು. ವಿರೋಧದಲ್ಲಿ ‘#BoycottKFC’ ಈ ಟ್ರೆಂಡ್ ನಡೆಸಲಾಯಿತು. ಅದರ ನಂತರ ‘ಕೆಎಫಸಿ’ಯು ಕ್ಷಮೆಯಾಚಿಸಿದೆ. ‘ಪಿಜ್ಜಾ ಹಟ್’ ಈ ಕಂಪನಿಯೂ ಕೂಡ ಈ ರೀತಿಯ ಟ್ವೀಟ್ ಮಾಡಿದೆ; ಆದರೆ ಅದು ಕ್ಷಮೆಯಾಚಿಸಿಲ್ಲ. ಪಾಕಿಸ್ತಾನದಲ್ಲಿ ಆಚರಿಸಲಾದ ‘ಕಾಶ್ಮೀರ್ ಏಕತಾ ದಿವಸ’ ಪ್ರಯುಕ್ತ ಕೆಎಫಸಿಯು ‘ಕಾಶ್ಮೀರ ಏಕತಾ ದಿವಸದ ಪ್ರಯುಕ್ತ ನಾವು ಅವರ ಸ್ವಾತಂತ್ರ್ಯದ ಅಧಿಕಾರದ ಜೊತೆಗೆ ಇದ್ದೇವೆ’, ಎಂದು ಪೋಸ್ಟ್ ಮಾಡಿತ್ತು.

ಕೆಎಫ್‌ಸಿ ಕ್ಷಮೆಯಾಚಿಸುತ್ತಾ, ದೇಶದ ಹೊರಗೆ ಕೆಲವು ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗಿರುವ ಪೋಸ್ಟ್ ಪ್ರಕರಣದಲ್ಲಿ ನಾವು ಕ್ಷಮೆಯಾಚಿಸುತ್ತೇವೆ. ನಾವು ಭಾರತವನ್ನು ಗೌರವಿಸುತ್ತೇವೆ ಮತ್ತು ಭಾರತೀಯರ ಸೇವೆ ಮಾಡಲು ನಾವು ಸಂಪೂರ್ಣವಾಗಿ ಕಟಿ ಬದ್ಧರಾಗಿದ್ದೇವೆ ಎಂದು ಹೇಳಿದೆ.