ಮಹಾವಿದ್ಯಾಲಯದ ಹತ್ತಿರ ಇಬ್ಬರು ಶಸ್ತ್ರಾಸ್ತ್ರ ಸಹಿತ ಧರ್ಮಾಂಧರ ಬಂಧನ

ಉಡುಪಿಯಲ್ಲಿನ ಮಹಾವಿದ್ಯಾಲಯದಲ್ಲಿ ಹಿಜಾಬ್ ಹಾಕಿಕೊಂಡು ಬರುವ ಬೇಡಿಕೆ ಪ್ರಕರಣ

ಹಿಜಾಬದ ಪ್ರಕರಣದಿಂದ ರಾಜ್ಯದಲ್ಲಿ ಒತ್ತಡದ ಮತ್ತು ಹಿಂಸಾಚಾರದ ವಾತಾವರಣ ನಿರ್ಮಾಣ ಮಾಡುವ ಷಡ್ಯಂತ್ರ ರಚಿಸಲಾಗಿದೆಯೇ ? ಸರಕಾರವು ಇದನ್ನು ಕಂಡುಹಿಡಿಯ ಬೇಕು !

ಉಡುಪಿ – ಇಲ್ಲಿಯ ಮಹಾವಿದ್ಯಾಲಯದಲ್ಲಿ ಹಿಜಾಬ್ ಹಾಕಿ ಪ್ರವೇಶ ನೀಡುವಂತೆ ಮುಸಲ್ಮಾನ್ ವಿದ್ಯಾರ್ಥಿನಿಯರಿಂದ ಕಳೆದ ಕೆಲವು ದಿನಗಳಿಂದ ಒತ್ತಾಯಿಸುತ್ತಿದ್ದಾರೆ. ಇದಕ್ಕೆ ಹಿಂದೂ ವಿದ್ಯಾರ್ಥಿನಿ ಕೇಸರಿ ಶಾಲು ಹಾಕಿ ವಿರೋಧಿಸಲು ಪ್ರಯತ್ನಿಸಿದ್ದಾರೆ. ಆದ್ದರಿಂದ ಸರಕಾರವು ಎರಡನ್ನೂ ಹಾಕಿಕೊಂಡು ಮಹಾವಿದ್ಯಾಲಯಕ್ಕೆ ಬರಲು ನಿಷೇಧಿಸಲಾಗಿದೆ. ಈ ಹಿನ್ನಲೆಯಲ್ಲಿ ವಿವಾದ ನಡೆಯುತ್ತಿದ್ದು ಅದರಲ್ಲಿ ಒಂದು ಮಹಾವಿದ್ಯಾಲಯದ ಹತ್ತಿರ ಪೊಲೀಸರು ಇಬ್ಬರು ಮತಾಂಧರನ್ನು ಬಂಧಿಸಿದ್ದಾರೆ. ಅವರಿಂದ ಶಸ್ತ್ರಾಸ್ತ್ರಗಳನ್ನು ಪಡಿಸಿಕೊಳ್ಳಲಾಗಿದೆ. ರಜ್ಜಾಬ ಮತ್ತು ಹಾಜಿ ಅಬ್ದುಲ್ ಮಜೀದ್ ಎಂಬವರನ್ನು ಬಂಧಿಸಿರುವ ಆರೋಪಿಗಳ ಹೆಸರುಗಳಾಗಿದ್ದೂ ಇನ್ನೂ ೩ ಜನರ ಶೋಧ ನಡೆಯುತ್ತಿದೆ.

ಕಳೆದ ಎರಡು ತಿಂಗಳಿನಿಂದ ಮುಸಲ್ಮಾನರಿಂದ ಹಿಂದೂಗಳ ಮೇಲೆ ಬಹಿಷ್ಕಾರ ಹಾಕಲಾಗಿತ್ತು !

ಹಿಂದೂಗಳ ದೇಶದಲ್ಲಿ ಹಿಂದೂಗಳ ಮೇಲೆ ಬಹಿಷ್ಕಾರ ಹಾಕುವ ಮತಾಂಧರಿಗೆ ಧೈರ್ಯ ಹೇಗೆ ಬರುತ್ತದೆ ? ಭಾಜಪದ ರಾಜ್ಯದಲ್ಲಿ ಹಿಂದೂಗಳಿಗೆ ಇದು ಅಪೇಕ್ಷಿತ ವಿಲ್ಲ !

೨ ತಿಂಗಳ ಹಿಂದೆ ಉಡುಪಿಯಲ್ಲಿ ಹಿಂದು ಜಾಗರಣ ವೇದಿಕೆಯಿಂದ ಗಂಗೋಲಿಯಲ್ಲಿ ಗೋ ವಂಶಗಳನ್ನು ಕಳುವು ಮಾಡಿ ಮತ್ತು ಗೋಹತ್ಯೆ ವಿರುದ್ಧ ಪ್ರತಿಭಟನೆಗಳನ್ನು ಮಾಡಲಾಗಿತ್ತು. ಇದರಲ್ಲಿ ಮೀನುಗಾರರು, ಮೀನು ಮಾರಾಟಗಾರರು, ಮತ್ತು ಮಹಿಳೆಯರ ಸಹಿತ ನೂರಾರು ಜನರು ಭಾಗವಹಿಸಿದ್ದರು.

ಅದರ ನಂತರ ಇಲ್ಲಿಯ ಮುಸಲ್ಮಾನರು ಹಿಂದುಗಳನ್ನು ಬಹಿಷ್ಕರಿಸಲು ಪ್ರಾರಂಭಿಸಿದರು. ಅವರು ಗಂಗೋಲಿ ಮಾರುಕಟ್ಟೆಯಲ್ಲಿ ಹಿಂದೂಗಳಿಂದ ಮೀನು ಖರೀದಿ ಮಾಡುವುದರ ಮೇಲೆ ನಿಷೇಧ ಹೇರಿದ್ದರು.