ಫ್ರಾನ್ಸ್ ಸರಕಾರದಿಂದ ಮಹಿಳಾ ಪತ್ರಕರ್ತೆಗೆ ಭದ್ರತೆ
ಭಾರತದಲ್ಲಿ ಜಾತ್ಯತೀತರು ಮತ್ತು ಪ್ರಗತಿ(ಅಧೋಗತಿ)ಪರ ಪತ್ರಕರ್ತರು ಈ ಮಹಿಳಾ ಪತ್ರಕರ್ತೆಗೆ ಸಿಕ್ಕಿದ ಬೆದರಿಕೆಯನ್ನು ನಿಷೇಧಿಸುವರೇ ? – ಸಂಪಾದಕರು
ಪ್ಯಾರಿಸ್ (ಫ್ರಾನ್ಸ್) – ಫ್ರಾನ್ಸನಲ್ಲಿ ಹೆಚ್ಚುತ್ತಿರುವ ಮುಸಲ್ಮಾನರ ಮತಾಂಧತೆ ವಿಷಯದ ಮಾಹಿತಿ ವಾರ್ತಾ ವಾಹಿನಿಯಲ್ಲಿನ ಕಾರ್ಯಕ್ರಮದಲ್ಲಿ ಪ್ರಸಾರ ಮಾಡಿದ್ದರಿಂದ `ಕೆನಾಲ್ ಪ್ಲಸ್’ ಈ ವಾರ್ತಾ ವಾಹಿನಿಯ ಮಹಿಳಾ ಪತ್ರಕರ್ತೆ ಓಫೆಲಿ ಮೇಯುನೀರ ಇವರಿಗೆ ಬೆದರಿಕೆ ನೀಡಲಾಗುತ್ತಿದೆ. ಆದ್ದರಿಂದ ಅವರಿಗೆ ಭದ್ರತೆ ನೀಡಲಾಗಿದೆ. ಫ್ರಾನ್ಸಿನ ಪ್ರಧಾನಿ ಮತ್ತು ಸಚಿವರು ಇವರಿಗೆ ನೀಡುವ ಭದ್ರತೆಯನ್ನೇ ಓಫೆಲಿ ಇವರಿಗೆ ನೀಡಲಾಗಿದೆ. ಈ ಕಾರ್ಯಕ್ರಮಕ್ಕಾಗಿ ಅವರಿಗೆ ಸಹಾಯ ಮಾಡುವ ಮುಸಲ್ಮಾನ್ ನ್ಯಾಯವಾದಿಗೂ ಕೂಡ ಕೊಲೆ ಬೆದರಿಕೆ ನೀಡಲಾಗಿದೆ. ಓಫೆಲಿ ಇವರು `ಪ್ರತಿಬಂಧಿತ ಕ್ಷೇತ್ರ’ ಈ ಕಾರ್ಯಕ್ರಮ ನಿರ್ಮಿಸಿದ್ದರು. ಈ ಕಾರ್ಯಕ್ರಮದಲ್ಲಿ ಅವರು ಫ್ರಾನ್ಸ್ ನ ಉತ್ತರದ ರೋಬೇಕ್ಸ್ ಪ್ರದೇಶದ ಪರಿಸ್ಥಿತಿ ತೋರಿಸಿದ್ದರು. ಫ್ರಾನ್ಸನ ರೋಬೇಕ್ಸ್‍ನಲ್ಲಿ ಮುಸಲ್ಮಾನರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.
ಓಫೆಲಿ ಇವರು ರೋಬೇಕ್ಸ್ ಪ್ರದೇಶಕ್ಕೆ ಹೋಗಿ ಅಲ್ಲಿಯ ಚಿತ್ರೀಕರಣ ಮಾಡಿದ್ದರು. ಇದರಲ್ಲಿ ಅವರು ಅಲ್ಲಿಯ ಹೆಚ್ಚುತ್ತಿರುವ ಇಸ್ಲಾಮಿ ಮತಾಂದತೆ ತೋರಿಸಿದ್ದರು. ಅಲ್ಲಿ ಚಿಕ್ಕಮಕ್ಕಳಿಗಾಗಿ ಇರುವ ಗೊಂಬೆಗಳಿಗೆ ಮುಖ ಇರುವುದಿಲ್ಲ. ಇಲ್ಲಿಯ ಉಪಹಾರಗೃಹದಲ್ಲಿ ಮಹಿಳೆಯರು ಪುರುಷರ ದೃಷ್ಟಿಯಲ್ಲಿ ಬರಬಾರದೆಂದು, ಪರದೆಗಳನ್ನು ಹಾಕಿ ಮಹಿಳೆಯರಿಗಾಗಿ ಬೇರೆ ಸ್ಥಳದ ವ್ಯವಸ್ಥೆ ಮಾಡಲಾಗಿದೆ. ಈ ಎಲ್ಲಾ ವಿಷಯ ವಾಹಿನಿಯಲ್ಲಿ ತೋರಿಸಿದ್ದರಿಂದ ಓಫೆಲಿ ಇವರಿಗೆ ಕೊಲೆ ಬೆದರಿಕೆ ನೀಡಲಾಗಿದೆ.