ಪ್ರಬಲ ಪರಿಸ್ಥಿತಿಯಿಂದಾಗಿ ಭಾರತೀಯ ಸೇನೆಯ ಕದನ ವಿರಾಮದ ಹೇಳಿಕೆಯು ದಾರಿ ತಪ್ಪಿಸುವಂತೆ ಆಗಿದೆ ಪಾಕಿಸ್ತಾನ ಸೇನೆಯ ಆರೋಪ
ಪಾಕಿಸ್ತಾನಕ್ಕೆ ಎರಡು ಕಡೆಗೆ ಜನರ ಚಿಂತೆಯ ಅರಿವು 74 ವರ್ಷಗಳ ನಂತರ ಹೇಗೆ ಬಂದಿದೆ ? ಇಷ್ಟು ವರ್ಷ ಪಾಕಿಸ್ತಾನದ ಗಡಿಯಲ್ಲಿ ಗುಂಡಿನ ದಾಳಿ ನಡೆಸಿ ಸಾಮಾನ್ಯ ಭಾರತೀಯರನ್ನು ಗುರಿಯಾಗಿಸುತ್ತಿತ್ತು, ಆ ಸಮಯದಲ್ಲಿ ಅವರಿಗೆ ಇದು ಅರಿವಿಗೆ ಬರುತ್ತಿರಲಿಲ್ಲವೇ ? ಪಾಕಿಸ್ತಾನ ಪ್ರಪಂಚವನ್ನಿ ಮೂರ್ಖವೆಂದು ತಿಳಿದಿದೆಯೇ ?- ಸಂಪಾದಕರು
ಇಸ್ಲಾಮಾಬಾದ (ಪಾಕಿಸ್ತಾನ) – ಗಡಿ ರೇಖೆಯಲ್ಲಿ ಯುದ್ಧವಿರಾಮದ ಸ್ಥಿತಿ ವಿಷಯವಾಗಿ ಭಾರತೀಯ ಸೈನ್ಯ ಪ್ರಭಲವಾದ ಪರಿಸ್ಥಿತಿಯಲ್ಲಿ ಇರುವುದು ದಾವೆ ದಾರಿತಪ್ಪಿಸುವುದು ಆಗಿದೆ, ಎಂದು ಪಾಕಿಸ್ತಾನಕ್ಕೆ ಗಡಿ ರೇಖೆಯಲ್ಲಿ ಎರಡೂ ಕಡೆಯಲ್ಲಿ ಇರುವ ಜನರ ಸುರಕ್ಷೆಯ ಚಿಂತೆ ಇರುವುದರಿಂದ ಯುದ್ಧವಿರಾಮ ಒಪ್ಪಿಕೊಂಡಿದೆ, ಎಂದು ಪಾಕಿಸ್ತಾನದ ಸೇನೆಯಿಂದ ಭಾರತೀಯ ಸೇನಾ ಮುಖ್ಯಸ್ಥ ಮನೋಜ್ ಮುಕುಂದ ನರವಣೆ ಇವರ ಹೇಳಿಕೆಗೆ ಪ್ರತಿಕ್ರಿಯಿಸಿದೆ. `ಯಾವುದೇ ಪಕ್ಷ ಅವರ ಶಕ್ತಿಯ ಮತ್ತು ಬೇರೆಯವರ ದುರ್ಬಲತೆಯ ತಪ್ಪಾಗಿ ಅರ್ಥೈಸಬಾರದು’, ಎಂದು ಸಹ ಪಾಕಿಸ್ತಾನದ ಸೈನ್ಯವು ಹೇಳಿದೆ. `ಗಡಿ ರೇಖೆಯಲ್ಲಿ ಯುದ್ಧವಿರಾಮ ಪ್ರಾರಂಭವಾಗಿದೆ; ಕಾರಣ ಭಾರತವು ತನ್ನ ಪರಿಸ್ಥಿತಿ ಪ್ರಭಲಗೊಳಿಸಿದೆ’, ಎಂದು ಜನರಲ್ ನರವಣೆ ಇವರು ಒಂದು ಕಾರ್ಯಕ್ರಮದಲ್ಲಿ ಹೇಳಿದ್ದರು. ಫೆಬ್ರುವರಿ 2021 ರಿಂದ ಭಾರತ ಮತ್ತು ಪಾಕಿಸ್ತಾನ ಸೈನ್ಯದಲ್ಲಿ ಗಡಿ ರೇಖೆಯಲ್ಲಿ ಯುದ್ಧವಿರಾಮವಿದೆ.
Indian COAS claiming LOC ceasefire holding because they negotiated from position of strength,is clearly misleading. It was agreed only due to Pak’s concerns 4 safety of ppl of Kashmir living on both sides of LOC. No side should misconstrue it as their strength or other’s weakness
— DG ISPR (@OfficialDGISPR) February 4, 2022