ಉತ್ತರಪ್ರದೇಶ ಸರಕಾರವು ಕಳೆದವು ೫ ವರ್ಷಗಳಲ್ಲಿ ಹಿಂದೂಗಿರಿ ಮಾಡಿದೆ !’ (ಅಂತೆ) – ಸಮಾಜವಾದಿ ಪಕ್ಷದ ಶಾಸಕ ರಫೀಕ್ ಅನ್ಸಾರಿ

  • ಕಾಶ್ಮೀರದಲ್ಲಿ ಕಳೆದ ೩ ದಶಕಗಳಿಂದ ಏನು ನಡೆಯುತ್ತಿದೆ, ಈ ವಿಷಯವಾಗಿ ರಫೀಕ್ ಅನ್ಸಾರಿ ಏಕೆ ಮಾತನಾಡುತ್ತಿಲ್ಲ ?
  • ಸಮಾಜವಾದಿ ಪಕ್ಷ ರಾಜ್ಯದಲ್ಲಿ ಸರಕಾರ ಇರುವಾಗ ಹಿಂದುಗಳ ಸ್ಥಿತಿ ಏನಾಗಿತ್ತು, ಇದು ದೇಶದ ಜನತೆಗೆ ತಿಳಿದಿದೆ. ಈ ವಿಷಯವಾಗಿ ಅನ್ಸಾರಿಯವರು ಏಕೆ ಮಾತನಾಡುವುದಿಲ್ಲ ?

ಮೇರಠ (ಉತ್ತರಪ್ರದೇಶ) – ರಾಜ್ಯ ಸರಕಾರ ಕಳೆದ ೫ ವರ್ಷಗಳಲ್ಲಿ ಹಿಂದೂಗಿರಿ ಮಾಡುವ ಪ್ರಯತ್ನ ಮಾಡುತ್ತಿದೆ. ಪ್ರತಿಯೊಂದು ಪೊಲೀಸ್ ಠಾಣೆಯಲ್ಲಿ ಹಿಮದೂಗಿರಿ ನಡೆಯುತ್ತಿದೆ. ಇನ್ನು ಮತ್ತೆ ಭಾಜಪಾ ಸರಕಾರ ಬಂದರೆ, ಮೇರಠನಲ್ಲಿ ಅದು ಗೂಂಡಾಗಿರಿ ಮಾಡಲಿದೆ. ಮೇರಠನಲ್ಲಿ ಮುಸಲ್ಮಾನರು ಎಂದೂ ಯಾರಿಂದಲೂ ದಬ್ಬಾಳಿಕೆಗೆ ಒಳಗಾಗಿಲ್ಲ; ಆದರೆ ಈ ಸರಕಾರ ಮಾತ್ರ ಅವರನ್ನು ತುಳಿಯುವ ಮತ್ತು ಅವರ ಮೇಲೆ ದಬ್ಬಾಳಿಕೆ ನಡೆಸುವ ಪ್ರಯತ್ನ ನಡೆಸಿದೆ. ಇದು ತುಂಬಾ ಕೆಟ್ಟ ಪರಿಸ್ಥಿತಿಯಾಗಿದೆ; ಆದರೆ ಸರಕಾರದ ಜೊತೆಗೆ ಹೋರಾಡಲು ನಮ್ಮನ್ನು ಯಾವ ಶಕ್ತಿಯೂ ತಡೆಯಲು ಸಾಧ್ಯವಿಲ್ಲ, ಎಂದು ಇಲ್ಲಿಯ ಸಮಾಜವಾದಿ ಪಕ್ಷದ ಶಾಸಕ ರಫೀಕ್ ಅನ್ಸಾರಿ ಇವರು ಹೇಳಿಕೆ ನೀಡಿದ್ದಾರೆ. ಇದರ ಒಂದು ವಿಡಿಯೋ ಪ್ರಸಾರವಾಗಿದೆ.

ಈ ಬಗ್ಗೆ ರಾಜ್ಯದ ಮಾಜಿ ಪೊಲೀಸ್ ಅಧಿಕಾರಿ ಮತ್ತು ಭಾಜಪಾದ ನಾಯಕ ಬ್ರಜಲಾಲ ಇವರು, ‘ಗೂಂಡಾ, ಗಲಭೆಕೋರರು, ನಿಪುಣ ಆರೋಪಿಗಳು ಇವರಿಗೆ ಸಮಾಜವಾದಿ ಪಕ್ಷದಿಂದ ಚುನಾವಣೆಗೆ ಟಿಕೆಟ್ ನೀಡಿದೆ. ಈ ಪಕ್ಷಕ್ಕೆ ರಾಜ್ಯದಲ್ಲಿ ಮತ್ತೆ ಗೂಂಡಾರಾಜ್ಯ ತರುವುದಿದೆ. ಸಮಾಜವಾದಿ ಪಕ್ಷದಿಂದ ರಫೀಕ್ ಅನ್ಸಾರಿ, ನಾಹಿದ ಹಸನ್, ಅಸ್ಸಲಾಮ ಚೌಧರಿ, ಹಾಜಿ ಯೂನುಸ್, ಮದನ ಭೈಯ್ಯಾ ಅಮರಪಾಲ, ದಿಲನವಾಜ್ ಮುಂತಾದವರಿಗೆ ಟಿಕೆಟ್ ನೀಡಿದೆ, ಇವರೆಲ್ಲರೂ ಗೂಂಡಾಗಳಾಗಿದ್ದಾರೆ.’ ಎಂದು ಹೇಳಿದರು.