ಮದ್ರಾಸ್ ಉಚ್ಚ ನ್ಯಾಯಾಲಯ ಮದುರೈ ನ್ಯಾಯ ಪೀಠದ ಆದೇಶ
ಮದುರೈ (ತಮಿಳುನಾಡು) – ಮದ್ರಾಸ್ ಉಚ್ಚ ನ್ಯಾಯಾಲಯವು ಮದುರೈ ನ್ಯಾಯಪೀಠವು ಲಾವಣ್ಯ ಈ ೧೨ ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುವ ವಿದ್ಯಾರ್ಥಿನಿಯ ಆತ್ಮಹತ್ಯೆ ಪ್ರಕರಣ ಕೇಂದ್ರೀಯ ತನಿಖಾ ದಳದ ಅಂದರೆ ಸಿಬಿಐಗೆ ಒಪ್ಪಿಸಲಾಗಿದೆ. ಲಾವಣ್ಯಳ ತಂದೆಯ ನೀಡಿರುವ ಮನವಿಯ ವಿಚಾರಣೆ ನಡೆಸುವಾಗ ನ್ಯಾಯಾಲಯವು ಈ ಆದೇಶ ನೀಡಿದೆ. ಈ ಮನವಿಯಲ್ಲಿ ಲಾವಣ್ಯಳ ತಂದೆ, ನನಗೆ ತಂಜಾವೂರಿನ ಪೊಲೀಸರ ವಿಚಾರಣೆಯಲ್ಲಿ ವಿಶ್ವಾಸವಿಲ್ಲದಂತಾಗಿದೆ. ಆದ್ದರಿಂದ ಈ ಪ್ರಕರಣದ ವಿಚಾರಣೆ ಸಿಬಿಐಗೆ ಅಥವಾ ಬೇರೆ ವಿಭಾಗಕ್ಕೆ ನೀಡಬೇಕು, ಎಂದು ಹೇಳಿದ್ದಾರೆ.
Madras HC hands over Thanjavur suicide case of a 17-year-old girl to CBIhttps://t.co/KXV0H2Sp0t
— OpIndia.com (@OpIndia_com) January 31, 2022
ತಂಜಾವೂರಿನ ಸೇಕ್ರೆಡ್ ಹಾರ್ಟ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಲಾವಣ್ಯ ವಿದ್ಯಾಭ್ಯಾಸ ಮಾಡುತ್ತಿದ್ದಳು. ಆಕೆಗೆ ಶಾಲೆಯಲ್ಲಿ ಕ್ರೈಸ್ತ ಧರ್ಮ ಸ್ವೀಕರಿಸಲು ಒತ್ತಡ ಹೇರಲಾಗುತ್ತಿತ್ತು, ಆಕೆ ಮತಾಂತರಗೊಳ್ಳಲು ನಿರಾಕರಿಸಿದ ಕಾರಣ ಆಕೆಗೆ ತೊಂದರೆ ನೀಡಲಾಗುತ್ತಿತ್ತು. ಈ ತೊಂದರೆಗಳಿಗೆ ಬೇಸತ್ತು ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆಕೆ ಮೃತ್ಯುವಿನ ಮೊದಲು ನೀಡಿರುವ ಹೇಳಿಕೆಯಲ್ಲಿ ಈ ಮಾಹಿತಿ ಇದೆ ಎಂದು ಹೇಳಿದರು.