ಬಂಗಾಲದ 8 ಜಿಲ್ಲೆಗಳಲ್ಲಿನ ಅಕ್ರಮ ದೇವಾಲಯಗಳು ಮತ್ತು ಇತರ ಧಾರ್ಮಿಕ ಸ್ಥಳಗಳನ್ನು ಕೆಡವಲು ತೃಣಮೂಲ ಕಾಂಗ್ರೆಸ್ ಸರಕಾರದ ಆದೇಶ

ಈ ಆದೇಶವನ್ನು ಪಾಲಿಸುವಾಗ ಆಡಳಿತವು ಮೊದಲು ಹಿಂದೂಗಳ ದೇವಾಲಯಗಳನ್ನು ಕೆಡವುತ್ತದೆ. ಆ ಸಮಯದಲ್ಲಿ ಹಿಂದೂಗಳು ವಿರೋಧಿಸುವುದಿಲ್ಲ; ಆದರೆ ಇತರ ಧರ್ಮೀಯರ ಪ್ರಾರ್ಥನಾಸ್ಥಳಗಳನ್ನು ಕೆಡವಲು ಯತ್ನಿಸಿದಾಗಲೆಲ್ಲ `ಪೊಲೀಸರ ರಕ್ಷಣೆ ಇಲ್ಲ’, ಎಂದು ಹೇಳಲಾಗುವುದು ! ಅಥವಾ `ಕಾರ್ಯಾಚರಣೆಯ ಸಮಯದಲ್ಲಿ ಆಡಳಿತದ ಮೇಲೆ ದಾಳಿಯಾಗುತ್ತದೆ ಮತ್ತು ಕಾರ್ಯಾಚರಣೆಯನ್ನು ನಿಲ್ಲಿಸಲಾಗುವುದು’, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ !- ಸಂಪಾದಕರು 

ಪ್ರತಿನಿಧಿಕ ಛಾಯಾಚಿತ್ರ

ಕೋಲಕಾತಾ (ಬಂಗಾಲ) – ಬಂಗಾಲದ ತೃಣಮೂಲ ಕಾಂಗ್ರೆಸ್ ಸರಕಾರವು ರಾಜ್ಯದ 8 ಜಿಲ್ಲಾಧಿಕಾರಿಗಳಿಗೆ ಪತ್ರವನ್ನು ಕಳುಹಿಸಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ನಿರ್ಮಿಸಲಾದ ದೇವಾಲಯಗಳು ಮತ್ತು ಇತರ ಧಾರ್ಮಿಕ ಸ್ಥಳಗಳನ್ನು ತೆರವುಗೊಳಿಸಲು ಆದೇಶಿಸಿದೆ ಹಾಗೂ ಕ್ರಮ ಕೈಗೊಂಡು ವರದಿ ಸಲ್ಲಿಸುವಂತೆಯೂ ತಿಳಿಸಲಾಗಿದೆ. ಕ್ರಮ ಕೈಗೊಳ್ಳುವಾಗ ಎಚ್ಚರದಿಂದ ಇರುವಂತೆಯೂ ಸೂಚಿಸಲಾಗಿದೆ. ಡಾರ್ಜಿಲಿಂಗ್, ಅಲಿಪುರದ್ವಾರ್, ಕೂಚ್.ಬಿಹಾರ್, ಕಾಲಿಮ್ಪೊಂಗ್, ಪೂರ್ವ ಮಿದನಾಪುರ, ಉತ್ತರ 24 ಪರಗಣಾ, ದಕ್ಷಿಣ ದಿನಾಜಪುರ ಮತ್ತು ಪೂರ್ವ ಬುರ್ದವಾನ್ ಇವು ಆ ಜಿಲ್ಲೆಗಳಾಗಿವೆ.