‘ಭೂಮಿಯು ದೇವಸ್ಥಾನದ ಟ್ರಸ್ಟನವರಿಗೆ ಸೇರಿದೆ’, ಎಂಬುದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸಲ್ಲಿಸಲು ವಿಶ್ವಸ್ಥ ಮಂಡಳಿ ವಿಫಲ !
ಚೆನ್ನೈ (ತಮಿಳುನಾಡು) – ದೇವರು ಸರ್ವವ್ಯಾಪಿಯಾಗಿದ್ದಾನೆ. ಅವನ ಅಸ್ತಿತ್ವಕ್ಕಾಗಿ ಯಾವುದೇ ಒಂದು ಸ್ಥಳದ ಅವಶ್ಯಕತೆ ಇಲ್ಲ, ಎಂದು ಹೇಳುತ್ತಾ ಮದ್ರಾಸ ಉಚ್ಚ ನ್ಯಾಯಾಲಯಯು ಸಾರ್ವಜನಿಕ ಸ್ಥಳಗಳಲ್ಲಿ ನಿರ್ಮಿಸಲಾದ ದೇವಾಲಯವನ್ನು ತೆರವುಗೊಳಿಸುವುದ್ದಕ್ಕೆ ತಡೆ ಕೋರಿ ಸಲ್ಲಿಸಲಾದ ಅರ್ಜಿಯನ್ನು ತಿರಸ್ಕರಿಸಿತು. `ಈ ರೀತಿಯ ಮೂಲಭೂತವಾದವು ಧರ್ಮದ ಹೆಸರಿನಲ್ಲಿ ಜನರ ನಡುವೆ ಗೋಡೆ ಕಟ್ಟುವುದೇ ಸಮಸ್ಯೆಯ ಮೂಲವಾಗಿದೆ’, ಎಂದು ನ್ಯಾಯಾಲಯವು ಈ ಸಮಯದಲ್ಲಿ ಹೇಳಿತು. ಈ ಬಗ್ಗೆ ದೇವಸ್ಥಾನದ ವಿಶ್ವಸ್ಥರಿಂದ ಅರ್ಜಿ ಸಲ್ಲಿಸಲಾಗಿತ್ತು.
‘God is everywhere, fanatics are the problem’: Madras HC rejects petition by Temple trustee seeking to stop eviction by Tamil Nadu govthttps://t.co/8Oa5Y65zyX
— OpIndia.com (@OpIndia_com) January 29, 2022
1. ಎರಡು ರಾಜ್ಯಗಳ ಹೆದ್ದಾರಿ ಇಲಾಖೆಯು ಪೆರಾಂಬಲೂರು ಜಿಲ್ಲೆಯ ಬೇಪನ್ನಥಟ್ಟೈ ಎಂಬಲ್ಲಿನ ದೇವಸ್ಥಾನವನ್ನು ತೆರವುಗೊಳಿಸುವಂತೆ ನೋಟಿಸ್ ಕಳುಹಿಸಿತ್ತು. ಈ ನೋಟಿಸ್‍ಅನ್ನು ರದ್ದುಗೊಳಿಸುವಂತೆ ದೇವಸ್ಥಾನದ ವಿಶ್ವಸ್ಥರು ಉಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಅವರ ಪ್ರಕಾರ, ಈ ದೇವಾಲಯವು 30 ವರ್ಷಗಳಷ್ಟು ಹಳೆಯದಾಗಿದ್ದು, ಈ ದೇವಾಲಯದಿಂದ ನಾಗರಿಕರ ಸಂಚಾರಕ್ಕೆ ಯಾವುದೇ ಅಡ್ಡಿಇಲ್ಲ ಎಂದು ಹೇಳಿದರು.
2. ಅದಕ್ಕೆ ನ್ಯಾಯಾಲಯವು, `ಈ ದೇವಸ್ಥಾನವು 30 ವರ್ಷಗಳಷ್ಟು ಹಳೆಯದಾಗಿದ್ದರೆ, ಈ ಬಗ್ಗೆ ದಾಖಲೆಗಳನ್ನು ಏಕೆ ಸಲ್ಲಿಸಲಿಲ್ಲ ? ಅದನ್ನು ಪ್ರಸ್ತುತಪಡಿಸದಂತೆ ನಿಮ್ಮನ್ನು ಯಾರು ತಡೆಯುತ್ತಿದ್ದಾರೆ ? ನ್ಯಾಸ ಹೇಳುತ್ತದೆ, `ಭೂಮಿಯು ದೇವಾಲಯದ ನ್ಯಾಸಕ್ಕೆ ಸೇರಿದೆ’; ಆದರೆ, ದಾಖಲೆಗಳನ್ನು ಸಲ್ಲಿಸುವಲ್ಲಿ ವಿಫಲವಾಗಿದೆ. ದೇವಸ್ಥಾನದ ಪಕ್ಷವನ್ನು ಪರಿಗಣಿಸಿದರೆ ರ್ಸಾಜನಿಕರ ಜಮೀನಿನ ಮೇಲೆ ಈ ರೀತಿ ಪ್ರತಿಯೊಬ್ಬರೂ ನಿಯಂತ್ರಣಕ್ಕೆ ತೆಗೆದುಕೊಂಡು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸುವರು.
3. ನ್ಯಾಯಾಲಯವು, ಹೆದ್ದಾರಿ ನಿರ್ಮಾಣದ ಉದ್ದೇಶವು ಜನರಿಗೆ ಅನುಕೂಲ ಮಾಡಿಕೊಡುವುದಾಗಿದೆ ಮತ್ತು ಇದು ಎಲ್ಲಾ ಜಾತಿ ಮತ್ತು ಧರ್ಮದ ಜನರನ್ನು ಒಳಗೊಂಡಿರುತ್ತದೆ. ಸಾರ್ವಜನಿಕ ಸ್ಥಳಗಳಲ್ಲಿ ದೇವಾಲಯಗಳನ್ನು ನಿರ್ಮಿಸಿ ಸಂಪತ್ತು ದೋಚಲು ಸಾಧ್ಯವಿಲ್ಲ. ಅರ್ಜಿದಾರರು ಪೂಜೆ ಸಲ್ಲಿಸಿ ಭಕ್ತರಿಗೆ ಸೌಲಭ್ಯ ಕಲ್ಪಿಸುವಂತೆ ಒತ್ತಾಯಿಸಿದರೆ, ಅವರಿಗೆ ಬೇರೆ ಆಯ್ಕೆಗಳಿವೆ. ಅವರು ತಮ್ಮ ಜಮೀನಿನಲ್ಲಿ ಅಥವಾ ಹತ್ತಿರದ ಜಮೀನಿನಲ್ಲಿ ದೇವಾಲಯವನ್ನು ನಿರ್ಮಿಸಬಹುದು ಮತ್ತು ಅಲ್ಲಿ ವಿಗ್ರಹಗಳನ್ನು ಸ್ಥಾಪಿಸಬಹುದು ಎಂದು ಹೇಳಿದೆ.