ಇಂತಹ ಮತಾಂಧರಿಗೆ ಛೀಮಾರಿ ಹಾಕುವ ಬದಲು ಅಮಾನತ್ತುಗೊಳಿಸಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ! ಇದರಿಂದ ಮತಾಂಧ ನೌಕರರು ಎಲ್ಲೇ ಇದ್ದರೂ, ಅವರ ಧರ್ಮದ ಬಗ್ಗೆ ಹೇಗೆ ಯೋಚಿಸುತ್ತಾರೆ, ಎಂಬುದು ಗಮನಕ್ಕೆ ಬರುತ್ತದೆ. ಮತ್ತೊಂದೆಡೆ, ಹಿಂದೂ ಹುಡುಗಿ ಮತ್ತು ಮುಸ್ಲಿಂ ಹುಡುಗ ಮದುವೆಯಾಗುತ್ತಿದ್ದರೆ, ಹಿಂದೂ ನೌಕರರು ಸರ್ವಧರ್ಮಸಮಭಾವದ ಹೆಸರಿನಲ್ಲಿ ಅವರನ್ನು ಪ್ರೋತ್ಸಾಹಿಸಲು ಪ್ರಯತ್ನಿಸುವುದು ಕಂಡುಬರುತ್ತದೆ ! |
ಲಖಿಂಪುರ ಖಿರಿ (ಉತ್ತರಪ್ರದೇಶ) – ಇಲ್ಲಿನ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರ (ಎ.ಡಿ.ಎಂ.) ಕಚೇರಿಯ ಸಿಬ್ಬಂದಿಯೊಬ್ಬರು ವಿವಾಹ ಪ್ರಮಾಣಪತ್ರವನ್ನು ಪಡೆಯುವ ಸಲುವಾಗಿ ಹಿಂದೂ ಯುವಕನನ್ನು ಇಸ್ಲಾಂಗೆ ಮತಾಂತರಗೊಳ್ಳುವಂತೆ ಒತ್ತಡ ಹೇರಿದ. ಈ ಕುರಿತು ಜಿಲ್ಲಾಧಿಕಾರಿಗೆ ದೂರು ನೀಡಿದ ಬಳಿಕ ನೌಕರನಿಗೆ ತರಾಟೆಗೆ ತೆಗೆದುಕೊಂಡನು ಮತ್ತು ೧ ಗಂಟೆಯೊಳಗೆ ಯುವಕನಿಗೆ ಮದುವೆ ಪ್ರಮಾಣಪತ್ರ ನೀಡುವಂತೆ ಆದೇಶಿಸಿದರು.
೧. ನಗರದ ಕಾಶಿನಗರ ಪ್ರದೇಶದ ತರುಣ ಗುಪ್ತಾ ಮತ್ತು ಮುಸಲ್ಮಾನ ಯುವತಿಯು ಪರಸ್ಪರ ಒಪ್ಪಿಗೆಯಿಂದ ಮದುವೆಯಾಗಲು ನಿರ್ಧರಿಸಿದರು. ನಂತರ ನ್ಯಾಯಾಂಗದ ಮೂಲಕ ಮದುವೆ ನೋಂದಣಿಗಾಗಿ ಎ.ಡಿ.ಎಮ.ಗೆ ಅರ್ಜಿ ಸಲ್ಲಿಸಿದಳು; ಆದರೆ ಯುವಕನಿಗೆ ಮದುವೆ ಪ್ರಮಾಣಪತ್ರ ನೀಡಲು ಇಲ್ಲಿಯ ಸರಕಾರಿ ನೌಕರ ಮೊಹಮ್ಮದ ಸಾಜಿದ್ ನಿರಾಕರಿಸುತ್ತಿದ್ದ. ಆತ ಆ ಯುವಕನಿಗೆ ‘ನಿಮಗೆ ಪ್ರಮಾಣಪತ್ರ ಬೇಕಿದ್ದರೆ ಮುಸಲ್ಮಾನನಾಗಬೇಕು’, ಎಂದು ಷರತ್ತು ವಿಧಿಸಿದ ಮತ್ತು ‘ಮತಾಂತರಗೊಂಡರೆ ಮಾತ್ರ ಪ್ರಮಾಣಪತ್ರ ಕೊಡುತ್ತೇವೆ’ ಎಂದು ಹೇಳಿದನು.
೨. ಈ ಬಗ್ಗೆ ಸಂತ್ರಸ್ತ ಯುವಕನು ಇಲ್ಲಿಯ ಜಿಲ್ಲಾಧಿಕಾರಿ ಮಹೇಂದ್ರ ಬಹದ್ದೂರ್ ಸಿಂಗ್ ಅವರಿಗೆ ದೂರು ನೀಡಿದ್ದಾರೆ. ಈ ಕುರಿತ ವಿಡಿಯೋವನ್ನು ಜಿಲ್ಲಾಧಿಕಾರಿಗೆ ತೋರಿಸಿದರು. ಅದರಲ್ಲಿ ಸಂತ್ರಸ್ತ ಯುವಕನನ್ನು ಮತಾಂತರಗೊಳಿಸುವಂತೆ ಸರಕಾರಿ ನೌಕರರು ಒತ್ತಡ ಹೇರುತ್ತಿರುವುದು ಕಂಡುಬಂದಿದೆ. ನಂತರ ಅವರು ಸರಕಾರಿ ನೌಕರನನ್ನು ಕರೆಸಿ ತರಾಟೆಗೆ ತೆಗೆದುಕೊಂಡರು ಹಾಗೂ ಆತನನ್ನು ಅಮಾನತು ಮಾಡುವಂತೆ ಎಚ್ಚರಿಕೆಯನ್ನೂ ನೀಡಿದರು.