ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಸರಕಾರಿ ಶಾಲೆಯಲ್ಲಿ ಮುಸಲ್ಮಾನ ವಿದ್ಯಾರ್ಥಿಗಳಿಂದ ನಮಾಜ್ ಪಠನೆ

ಹಿಂದುತ್ವನಿಷ್ಠ ಸಂಘಟನೆಗಳಿಂದ ವಿರೋಧನಂತರ ಜಿಲ್ಲಾಧಿಕಾರಿಗಳಿಂದ ವಿಚಾರಣೆಗೆ ಆದೇಶ

ಕರ್ನಾಟಕದಲ್ಲಿ ಭಾಜಪದ ಸರಕಾರ ಇರುವಾಗ ಇಂತಹ ಘಟನೆ ನಡೆಯುವುದು ಹಿಂದುಗಳಿಗೆ ಅಪೇಕ್ಷಿತವಿಲ್ಲ !

ಕೋಲಾರ – ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಸರಕಾರಿ ಶಾಲೆಯ ಕೊಠಡಿಯಲ್ಲಿ ೨೦ ಮುಸಲ್ಮಾನ ವಿದ್ಯಾರ್ಥಿಗಳು ನಮಾಜ್ ಪಠಣ ಮಾಡಿದರು. ಈ ಬಗ್ಗೆ ಹಿಂದುತ್ವನಿಷ್ಠ ಸಂಘಟನೆಗಳಿಗೆ ಮಾಹಿತಿ ಸಿಕ್ಕಿದ ನಂತರ ಅವರು ವಿರೋಧ ವ್ಯಕ್ತ ಪಡಿಸಿದ್ದರಿಂದ ನಮಾಜ್ ಪಠಣ ನಿಲ್ಲಿಸಲಾಯಿತು. ಈ ಘಟನೆ ಶುಕ್ರವಾರ ಜನೆವರಿ ೨೧ ರಂದು ನಡೆದಿದೆ.

ನಂತರ ಕೋಲಾರದ ಜಿಲ್ಲಾಧಿಕಾರಿ ಉಮೇಶ ಕುಮಾರ ಇವರು ಈ ಶಾಲೆಯ ಘಟನೆಯ ವರದಿ ನೀಡುವಂತೆ ಆದೇಶ ನೀಡಿದ್ದಾರೆ. ಹಾಗೂ ಸರಕಾರಿ ಅಧಿಕಾರಿಗಳಿಗೆ ಶಾಲೆಗೆ ಹೋಗಿ ಸಂಪೂರ್ಣ ಮಾಹಿತಿ ಪಡೆದು ವರದಿ ನೀಡುವಂತೆ ಹೇಳಲಾಗಿದೆ.

೧. ಮೂಲಗಳ ಮಾಹಿತಿಯ ಪ್ರಕಾರ ಮುಖ್ಯೋಪಾಧ್ಯಾಯಿನಿಯು ಮಕ್ಕಳು ಶಾಲೆಯ ಹೊರಗೆ ಹೋಗುತ್ತಾರೆ; ಎಂದು ಅವರಿಗೆ ಕೊಠಡಿಯಲ್ಲಿ ನಮಾಜ ಪಠಣ ಮಾಡುವ ಅನುಮತಿ ನೀಡಿದರು. ಕೊರೋನಾ ನಿಯಮದಿಂದಾಗಿ ಶಾಲೆ ಕಳೆದ ೨ ತಿಂಗಳಿಂದ ಮುಚ್ಚಲಾಗಿತ್ತು.

೨. ಮುಖ್ಯೋಪಾಧ್ಯಾಯಿನಿ ಉಮಾದೇವಿ ಇವರು ಈ ಬಗ್ಗೆ ಮಾತನಾಡುತ್ತಾ, ‘ನಾನು ನಮಾಜ್ ಪಠಣಕ್ಕೆ ಅನುಮತಿ ನೀಡಿರಲಿಲ್ಲ, ಹುಡುಗರು ತಾವಾಗಿಯೇ ನಮಾಜ ಪಠಸಿದ್ದಾರೆ. ಯಾವ ಸಮಯದಲ್ಲಿ ಈ ಘಟನೆ ನಡೆಯಿತೋ ಆಗ ನಾನು ಶಾಲೆಯಲ್ಲಿ ಇರಲಿಲ್ಲ. ಯಾವಾಗ ನನಗೆ ಶಿಕ್ಷಣಾಧಿಕಾರಿಗಳು ಕರೆ ಮಾಡಿ ಈ ಬಗ್ಗೆ ಮಾಹಿತಿ ನೀಡಿದರೋ, ಆಗ ನಾನು ಇದನ್ನು ನಿಲ್ಲಿಸಿದೆ.’ ಎಂದು ಹೇಳಿದರು.