ಪಾಕಿಸ್ತಾನದ ಮತ್ತು ಅಲ್ಲಿಯ ನಾಗರಿಕರ ಭಾರತದ್ವೇಷ ನೋಡಿದರೆ ಅವರು ಹೊಸ ಯೂಟ್ಯೂಬ್ ಚಾನೆಲ್‌ಗಳನ್ನು ಆರಂಭಿಸಿ ಅದರ ಮೂಲಕ ಭಾರತ ವಿರೋಧಿ ಪ್ರಸಾರ ಮಾಡುತ್ತಾರೆ ! ಆದ್ದರಿಂದ ಭಾರತದ ವಿರುದ್ಧ ಯಾರೇ ವಿಷಕಾರುವ ಧೈರ್ಯ ಮಾಡಲಾರರು, ಇಂತಹ ವರ್ಚಸ್ವವನ್ನು ಸರಕಾರ ಜಗತ್ತಿನಾದ್ಯಂತ ನಿರ್ಮಿಸಬೇಕು ! ಅದಕ್ಕಾಗಿ ಇಂತಹ ಕೃತ್ಯಗಳ ನಡೆಸುವವರ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕು !- ಸಂಪಾದಕರು
ನವದೆಹಲಿ – ಭಾರತದ ವಿರುದ್ಧ ಪ್ರಸಾರ ಮಾಡಿದ್ದರಿಂದ ಭಾರತ ಸರಕಾರವು ಪಾಕಿಸ್ತಾನದಿಂದ ನಡೆಸಲಾಗುವ ೩೫ ಯುಟ್ಯೂಬ್ ಚಾನೆಲ್‌ಗಳು ಹಾಗೂ ೨ ‘ಇನ್ಸ್ಟಾಗ್ರಾಮ್’ ಖಾತೆಗಳು, ೨ ಟ್ವಿಟರ್ ಖಾತೆ, ೨ ಫೇಸ್‌ಬುಕ ಖಾತೆ ಮತ್ತು ೨ ಜಾಲತಾಣಗಳ ಮೇಲೆ ನಿಷೇಧ ಹೇರಿದೆ. ಈ ವಾಹಿನಿಯ ಚಂದಾದಾರರ ಸಂಖ್ಯೆ ಅಂದಾಜು ಒಂದು ಕೋಟಿ ೨೦ ಲಕ್ಷದಷ್ಟು ಹಾಗೂ ಅದರಲ್ಲಿನ ವಿಡಿಯೋ ನೋಡಿರುವವರ ಸಂಖ್ಯೆ ೧೩೦ ಕೋಟಿಗಿಂತಲೂ ಹೆಚ್ಚಿನದಾಗಿದೆ.
ಭಾರತ ವಿರೋಧಿ ಪ್ರಚಾರ ಮಾಡಿದ ಪಾಕಿಸ್ತಾನ ಮೂಲದ ವೆಬ್ಸೈಟ್ ಹಾಗೂ ಯೂಟ್ಯೂಬ್ ಚಾನೆಲ್ಗಳ ಮೇಲೆ ಭಾರತ ನಿರ್ಬಂಧ ಹೇರಿದೆ.
#NewDelhi #Pakistan #Youtube #Channels #Websites #FakeNews #ಒನ್ಇಂಡಿಯಾಕನ್ನಡಸುದ್ದಿhttps://t.co/x3ujzjVG77
— oneindiakannada (@OneindiaKannada) January 22, 2022
ಮಾಹಿತಿ ಮತ್ತು ಪ್ರಸಾರ ಇಲಾಖೆ ಮಹಾ ಸಚಿವರಾದ ವಿಕ್ರಮ್ ಸಹಾಯ ಇವರು ಮಾತನಾಡುತ್ತಾ, ಈ ಎಲ್ಲಾ ಖಾತೆಗಳು, ವಾಹಿನಿಗಳು, ಪಾಕಿಸ್ತಾನದಿಂದ ನಡೆಸಲಾಗುತ್ತಿತ್ತು. ಇದರಿಂದ ಭಾರತೀಯ ಸೈನ್ಯದಳ, ಜಮ್ಮು ಕಾಶ್ಮೀರ, ಭಾರತದ ವಿದೇಶ ವ್ಯವಹಾರ, ಜನರಲ ಬಿಪಿನ ರಾವತ ಇವರ ಮೃತ್ಯು ಈ ವಿಷಯವಾಗಿ ತಪ್ಪಾಗಿ ಪಸಾರ ಮಾಡಲಾಗುತ್ತಿತ್ತು. ಜೊತೆಗೆ ಪ್ರತ್ತೇಕವಾದಿ ವಿಚಾರಸರಣಿಗೆ ಸೊಪ್ಪು ಹಾಕಿ ಕಾನೂನು ಮತ್ತು ಸುವ್ಯವಸ್ಥೆಗೆ ಅಪಾಯ ತರುವ ಕೆಲಸ ಮಾದಲಾಗುತ್ತಿತ್ತು ಎಂದು ಹೇಳಿದರು.