ಮತಾಂಧ ಪೊಲೀಸ್ ನಿರೀಕ್ಷಕನಿಂದ ಮತಾಂಧರಿಗೆ ಸಹಾಯ !
ಉತ್ತರ ಪ್ರದೇಶದಲ್ಲಿ ಭಾಜಪ ಸರಕಾರವಿರುವಾಗ ಇಂತಹ ಘಟನೆಗಳು ನಡೆಯಬಾರದು, ಎಂದು ಹಿಂದೂಗಳಿಗೆ ಅನಿಸುತ್ತದೆ ! ಈಗ ಸರಕಾರ ಇಂತಹ ಮತಾಂಧರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಮತ್ತು ಅವರಿಗೆ ಸಹಾಯ ಮಾಡುವ ಪೊಲೀಸ್ ಅಧಿಕಾರಿಯನ್ನು ಅಮಾನತ್ತುಗೊಳಿಸಿ ಸೆರೆಮನೆಗೆ ಹಾಕಬೇಕು !- ಸಂಪಾದಕರು
ಲಕ್ಷ್ಮಣಪುರಿ (ಉತ್ತರಪ್ರದೇಶ) – ಹರಿದ್ವಾರದಲ್ಲಿ ನಡೆದ ಧರ್ಮಸಂಸತ್ತಿನಲ್ಲಿ ಆಕ್ಷೇಪಾರ್ಹ ಹೇಳಿಕೆ ನೀಡಿದರೆನ್ನಲಾಗುವ ಪ್ರಕರಣದಲ್ಲಿ ಬಂಧಿತರಾಗಿರುವ ಜಿತೇಂದ್ರ ನಾರಾಯಣ ತ್ಯಾಗಿ (ಪೂರ್ವಾಶ್ರಮದ ವಾಸಿಮ್ ರಿಜ್ವಿ) ಅವರ ಮನೆಗೆ ನುಗ್ಗಿ ಪತ್ನಿಯನ್ನು ಕೆಲವು ಮತಾಂಧರು ಥಳಿಸಿ ಮನೆಯಿಂದ ಹೊರ ಹಾಕಿರುವ ಘಟನೆ ನಡೆದಿದೆ ಎಂದು ತ್ಯಾಗಿಯವರು ಹೇಳಿದರು. ಈ ಹಲ್ಲೆಗೆ ಸಹಾಯಕ ಪೊಲೀಸ್ ನಿರೀಕ್ಷಕ ಜೈದಿ ಸಹಾಯ ಮಾಡಿದ್ದಾರೆ ಎಂದು ತ್ಯಾಗಿ ಅವರ ಪತ್ನಿ ಆರೋಪಿಸಿದ್ದಾರೆ.
जितेंद्र त्यागी (वसीम रिज़वी) के घर में घुस कर पत्नी को मौलानाओ ने मारपीट कर घर से बाहर निकाला… जिहादियों का साथ देने वाले @Uppolice के ASI ज़ैदी पर कार्रवाई करने माँग @JitendraNTyagi ने की हैं।
हिंदुओं #घरवापसी करने वाले के साथ खडे रहो। यही समय हैं https://t.co/7K4YELLPlq— Suresh Chavhanke “Sudarshan News” (@SureshChavhanke) January 21, 2022
ಜಿತೆಂದ್ರ ತ್ಯಾಗಿಯವರ ಹೆಂಡತಿ ಫರಹಾ ಫಾತಿಮಾ ಇವರು ಘಟನೆಯ ಬಗ್ಗೆ ಮಾಹಿತಿಯನ್ನು ನೀಡುತ್ತಾ, ಜನವರಿ ೨೦ ರಂದು ಸಂಜೆ ಇದ್ದಕ್ಕಿದ್ದಂತೆ ಶಮಿಲ ಶಮ್ಸಿ, ಮೀಸಮ ರಿಜ್ವಿ, ಶಬಾಬ ಅಸಗರ, ಅಬ್ಬಾಸ ನಕಿ ಹುಸೈನ್, ಗುಲಶನ ಅಬ್ಬಾಸ, ಶೆಹಜಾದ, ಕಿಯಾನ ರಿಜ್ವಿ ಫೈಜಿ ಮತ್ತು ಸಲಮಾನ ನನ್ನ ಮನೆಗೆ ನುಗ್ಗಿ ನನ್ನ ಚಿಕ್ಕಮ್ಮನನ್ನು ಅವಾಚ್ಯ ಪದಗಳಲ್ಲಿ ಬೈಯ್ಯಲು ಪ್ರಾರಂಭಿಸಿದರು. ಈ ವೇಳೆ ನಾನು ತಕ್ಷಣ ಸಾದತಗಂಜ ಪೊಲೀಸ ಠಾಣೆಗೆ ಕರೆ ಮಾಡಿ ಘಟನೆಯ ಬಗ್ಗೆ ಮಾಹಿತಿ ನೀಡಿದೆ. ಪೊಲೀಸರು ಬಂದ ನಂತರವೂ ಆರೋಪಿಗಳು ನನ್ನನ್ನು ತಳ್ಳುತ್ತಿದ್ದರು ಹಾಗೂ ಅವಾಚ್ಯ ಪದಗಳಲ್ಲಿ ನಿಂದಿಸುತ್ತಿದ್ದರು. ಘಟನೆಯ ಸಮಯದಲ್ಲಿ ಪೊಲೀಸ್ ನಿರೀಕ್ಷಕ ಜೈದಿ ಉಪಸ್ಥಿತರಿದ್ದರು; ಆದರೆ ಅವನು ಮೌನವಾಗಿದ್ದರು. ಜೈದಿಯವರೇ ನನ್ನಿಂದ ಮನೆಯ ಬೀಗದ ಕೀಯನ್ನು ತೆಗೆದುಕೊಂಡರು ಮತ್ತು ಮತಾಂಧರು ನಮ್ಮನ್ನು ಮನೆಯಿಂದ ಹೊರಹಾಕಿದರು ಎಂದು ಹೇಳಿದರು.